ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಭರವಸೆ

KannadaprabhaNewsNetwork |  
Published : Mar 03, 2026, 02:00 AM IST
ವಾಲ್ಮೀಕಿ ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಶಾಸಕರಾದ ಯು.ಬಿ.ಬಣಕಾರ ಅವರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ರಟ್ಟೀಹಳ್ಳಿ ಪಟ್ಟಣದ ವಾಲ್ಮೀಕಿ ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಶಾಸಕರಾದ ಯು.ಬಿ. ಬಣಕಾರ ಅವರಿಗೆ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಸಲ್ಲಿಸಲಾಯಿತು.

ರಟ್ಟೀಹಳ್ಳಿ: ಪಟ್ಟಣದ ವಾಲ್ಮೀಕಿ ನಾಯಕ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡಬೇಕೆಂದು ಶಾಸಕರಾದ ಯು.ಬಿ. ಬಣಕಾರ ಅವರಿಗೆ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ತಾಲೂಕು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥ ತಳವಾರ ಮಾತನಾಡಿ, ರಟ್ಟೀಹಳ್ಳಿ ಪಟ್ಟಣದ ಅಂಬೇಡ್ಕರ್ ಭವನದ ಪಕ್ಕದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕೆಂದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಎಂಟು ಮುಕ್ಕಾಲು ಗುಂಟೆ ಜಾಗೆಯನ್ನು ಮೀಸಲಿಟ್ಟಿದ್ದು, ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿರುವ ಸ್ಥಳದಲ್ಲಿ ಸುಮಾರು 3 ಕೋಟಿ ಅನುದಾನ ಮಂಜೂರು ಮಾಡಿಸುವಂತೆ ಮನವಿ ಮಾಡಿದರು. ಅನುದಾನದಲ್ಲಿ ಸಮಾಜ ಹಾಗೂ ಇತರೆ ಸಮುದಾಯಗಳಿಗೆ ಅನಕೂಲವಾಗುವಂತ ಭವ್ಯ ಭವನ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದು ಮಾನ್ಯ ಶಾಸಕರು ಹೆಚ್ಚಿನ ಮುತುವರ್ಜಿವಹಿಸಿ ಅನುದಾನ ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಶಾಸಕ ಯು.ಬಿ. ಬಣಕಾರ ಮಾತನಾಡಿ, ತಾಲೂಕಿನಲ್ಲಿ ಈಗಾಗಲೇ ಅನೇಕ ಸಮುದಾಯಗಳ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ರಾಮಚಂದ್ರಪ್ಪ ವಾಲ್ಮೀಕಿ, ಕರಿಯಪ್ಪ ಚೌಡಕ್ಕನವರ, ಅಶೋಕ ಹೆಡಿಹಾಲ್, ಎ.ಆರ್. ಮಣಕೂರ, ಮಂಜು ತಳವಾರ, ರವಿ ಹದಡೇರ, ಹನಮಂತಪ್ಪ ದ್ವೀಗಿಹಳ್ಳಿ, ಸಿದ್ದಣ್ಣ ಕಾಗೇರ, ಬಸವರಾಜ ಸೊಂಟೆರ್ ಸುರೇಶ ತಳವಾರ, ನಾಗರಾಜ ಬಳ್ಳಾರಿ, ಕುಮಾರ ಮೇದೂರ, ಶಿವಕುಮಾರ ದ್ವಿಗಿಹಳ್ಳಿ, ಗೀರಿಯಪ್ಪನವರ, ಕರಬಸಪ್ಪ ನಾಗೇನಹಳ್ಳಿ,

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಅಕ್ಕಮಹಾದೇವಿ
ಭಾಗ್ಯವಂತಿ ಶಿಕ್ಷಣ ಸಂಸ್ಥೆಗೆ ಒಲಿದ ಹ್ಯಾಟ್ರಿಕ್!