ಧಾರವಾಡ:
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇಕಾರ, ದುರ್ಗಮುರ್ಗ, ಬೈರಾಗಿ ಮತ್ತು ದರವೇಶ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳ ಕುಲಶಾಸ್ತ್ರೀಯ ಸಂಶೋಧನಾ ಅಧ್ಯಯನಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅನುದಾನ ನೀಡಲಾಗಿದೆ. ವರ್ಷದೊಳಗಾಗಿ ಅಧ್ಯಯನ ಪೂರ್ಣಗೊಳಿಸಿ ವರದಿ ನೀಡುವಂತೆ ಸರ್ಕಾರ ವಿವಿಗೆ ನಿರ್ದೇಶನ ನೀಡಿದೆ ಎಂದರು.
ಮಾನವಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರು, ಕುಲಶಾಸ್ತ್ರೀಯ ಸಂಶೋಧನಾ ನಿರ್ದೇಶಕ ಪ್ರೊ. ಟಿ.ಟಿ. ಬಸವನಗೌಡ ಅವರಿಗೆ 2026ನೇ ಸಾಲಿಗೆ ನೇಕಾರ ಮತ್ತು ದುರ್ಗಮುರ್ಗ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನದ ಜವಾಬ್ದಾರಿ ವಹಿಸಲಾಗಿದೆ. ಸರ್ಕಾರ ಇದಕ್ಕೆ ₹ 75. 68 ಲಕ್ಷ ಅನುದಾನ ಒದಗಿಸಿದೆ. ಸಹಾಯಕ ಪ್ರಾಧ್ಯಾಪಕ ಪ್ರೊ. ಎಸ್.ಬಿ. ಸುಗಂದಿ ಅವರಿಗೆ ದರವೇಶ, ಭೈರಾಗಿ ಸಮುದಾಯಗಳ ಕುಲಶಾಸ್ತ್ರೀಯ ಅಧ್ಯಯನಕ್ಕೆ ₹ 24. 09 ಲಕ್ಷ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಯುಕೆ ಜತೆಗೆ ಒಪ್ಪಂದ:
ಸುದ್ದಿಗೋಷ್ಠಿಯಲ್ಲಿ ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ಮಟ್ಟಿಹಾಳ, ಕವಿವಿ ಹಣಕಾಸು ಅಧಿಕಾರಿ ಪ್ರದೀಪಕುಮಾರ, ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರೊ. ಟಿ.ಟಿ. ಬಸವನಗೌಡ, ಡಾ. ಎಸ್.ಬಿ. ಸುಗಂಧಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಂಜಯಕುಮಾರ ಮಾಲಗತ್ತಿ, ಡಾ. ಜೆ.ಎಂ. ಚಂದುನವರ, ಡಾ. ಪ್ರಭಾಕರ ಕಾಂಬಳೆ ಇದ್ದರು.
ಕುಲಸಚಿವರು ಹಾಗೂ ತಮ್ಮ ಮಧ್ಯೆ ಕೆಲವು ವಿಷಯಗಳ ಕುರಿತಾಗಿ ಭಿನ್ನಾಭಿಪ್ರಾಯವಿತ್ತು. ಈ ಬಗ್ಗೆ ಸಭೆ ನಡೆಸಿ ಸರಿಪಡಿಸಲಾಗಿದೆ. ವಿವಿ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ. ಅವರು ರಜೆ ಇದ್ದಿದ್ದರಿಂದ ಸುದ್ದಿಗೋಷ್ಟಿಗೆ ಹಾಜರಾಗಿಲ್ಲ. ಒಟ್ಟಾರೆ ವಿವಿ ಅಭಿವೃದ್ಧಿಯೇ ನಮ್ಮ ಗುರಿ.