ದುಗ್ಗಳ ಸದಾನಂದ ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯ ಶನಿವಾರದ ಪಂದ್ಯಗಳಲ್ಲಿ ಮೇರಿಯಂಡ ಮತ್ತು ಕುಪ್ಪಂಡ ತಂಡಗಳ ನಡುವೆ ಭರ್ಜರಿ ಸೆಣೆಸಾಟ ನಡೆಯಿತು.ಕುಪ್ಪಂಡ ಧ್ಯಾನ್ ಮೊದಲ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರೆ ಕುಪ್ಪಂಡ ಸೋಮಯ್ಯ ಎಂಟನೇ ನಿಮಿಷದಲ್ಲಿ ಎರಡನೇ ಗೋಲನ್ನು ಹಾಗೂ 13 ನಿಮಿಷದಲ್ಲಿ ಮೂರನೇ ಗೋಲನ್ನು ದಾಖಲಿಸಿ ಮುನ್ನಡೆ ಸಾಧಿಸಿದರು. ಮೇರಿಯಂಡ ತಂಡದ ಪವನ್ 14ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿದರೆ ಕುಪ್ಪಂಡ ಸೋಮಯ್ಯ 21ನೇ ನಿಮಿಷದಲ್ಲಿ ನಾಲ್ಕನೇ ಗೋಲನ್ನು ತಂಡದ ಪರವಾಗಿ ದಾಖಲಿಸಿದರು. ಕರುಣ್ 22 ನಿಮಿಷದಲ್ಲಿ ಚಂಗಪ್ಪ 30 ನಿಮಿಷದಲ್ಲಿ ಸರಾಗವಾಗಿ ಗೋಲು ಹೊಡೆದು ಏಳು ಗೋಲುಗಳನ್ನು ತಂಡಕ್ಕೆ ಗಳಿಸಿಕೊಟ್ಟರು. ಮೇರಿಯಂಡ ನಿಖಿಲ್ 37 ನೇ ನಿಮಿಷದಲ್ಲಿ ಒಂದು ಗೋಲು ದಾಖಲಿಸಿ ತಂಡ ಕೇವಲ ಮೂರು ಗೋಲು ಗಳಿಸಿತು. ಕುಪ್ಪಂಡ ತಂಡಕ್ಕೆ ಮೇರಿಯಂಡ ವಿರುದ್ಧ 7-3 ಅಂತರದ ಜಯಲಭಿಸಿತು.
ಉಳಿದಂತೆ ಮೇಚಿಯಂಡ ಕುಲ್ಲಚಂಡ ವಿರುದ್ಧ 2-1 ಅಂತರದಲ್ಲಿ ಕಲಿಯಂಡ ಕನ್ನಂಡ ತಂಡದ ವಿರುದ್ಧ 1-0 ಅಂತರದಲ್ಲಿ, ಬೊವ್ವೇರಿಯಂಡ ಅಪ್ಪನೆರವಂಡ ವಿರುದ್ಧ 4-1 ಅಂತರದಲ್ಲಿ , ಮಾತ್ರಂಡ ಕೊಟ್ಟಂಗಡ ವಿರುದ್ಧ 4- 0 ಅಂತರದಲ್ಲಿ , ಚೇಂದಿರ ಸಣ್ಣವಂಡ ವಿರುದ್ಧ 3-0 ಅಂತರದಲ್ಲಿ ಜಯ ಸಾಧಿಸಿತು.ಚೇಂದಂಡ ಚೀಯಕಪೂವಂಡ ವಿರುದ್ಧ 4-0 ಅಂತರದಲ್ಲಿ , ಕರಿನೆರವಂಡ ಪಾಡೆಯಂಡ ವಿರುದ್ಧ 6- 1 ಅಂತರದಲ್ಲಿ, ಐಚೆಟ್ಟಿರ ಕೊಳ್ಳಿರ ವಿರುದ್ಧ 3- 2 ಅಂತರದಲ್ಲಿ , ಕೇಲೆಟಿರ ಕಡೇಮಾಡ ವಿರುದ್ಧ 4-2 ಅಂತರದಲ್ಲಿ, ನಾಪಂಡ ನಂಬುಡಮಾಡ ತಂಡದ ವಿರುದ್ಧ 3-0 ಅಂತರದಲ್ಲಿ ಗೆಲುವು ಸಾಧಿಸಿದವು.
ಇಂದಿನ ಪಂದ್ಯಗಳು: ಮೈದಾನ ಒಂದು: 9 ಗಂಟೆಗೆ ಚೇನಂಡ-ಚೆಕ್ಕೇರ, 10 ಗಂಟೆಗೆ ಕುಲ್ಲೇಟಿರ-ಕೊಕ್ಕಂಡ, 11 ಗಂಟೆಗೆ ಮಂಡೇಪಂಡ-ಐನಂಡ, 1 ಗಂಟೆಗೆ ಬಾಳೆಯಡ-ಚೆಪ್ಪುಡಿರಮೈದಾನ ಎರಡು: 9 ಗಂಟೆಗೆ ಪುಲ್ಲಂಗಡ-ಪುದಿಯೊಕ್ಕಡ, 10 ಗಂಟೆಗೆ ಕಂಬೀರಂಡ-ಚೇಂದಂಡ, 11 ಗಂಟೆಗೆ ಚೋಯಮಾಡಂಡ-ಕರಿನೆರವಂಡ, 1 ಗಂಟೆಗೆ ಬೊವ್ವೇರಿಯಂಡ-ಚೇಂದಿರ, 2 ಗಂಟೆಗೆ ಐಚೆಟ್ಟಿರ-ಕೇಲೇಟಿರ
ಉಚಿತ ವೈದ್ಯಕೀಯ ತಪಾಸಣಾ ಶಿಬಿರ: ಏ. 21ರಂದು ಕುಂಡ್ಯೋಳಂಡ ಕಪ್ ಹಾಕಿ ಉತ್ಸವದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ .ಇಲ್ಲಿನ ಜನರಲ್ ತಿಮ್ಮಯ್ಯ ಮೈದಾನದಲ್ಲಿ ಜನರ ಆರೋಗ್ಯವನ್ನು ನುರಿತ ವೈದ್ಯಕೀಯ ತಂಡದವರು ತಪಾಸಣೆ ಮಾಡಲಿದ್ದಾರೆ. ಕಿವಿ- ಮೂಗು ಗಂಟಲು ತಜ್ಞ, ಮಕ್ಕಳ ತಜ್ಞ, ಮೂಳೆ ತಜ್ಞ, ಚರ್ಮರೋಗ, ನರರೋಗ ತಜ್ಞರು, ಕ್ಯಾನ್ಸರ್ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.