ಮಹಾತ್ಮರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ: ಶಾಸಕ ಕಂದಕೂರ

KannadaprabhaNewsNetwork |  
Published : Oct 21, 2025, 01:00 AM IST
ಸೈದಾಪುರ ಸಮೀಪದ ನಾಗರಬಂಡಾ ಗ್ರಾಮದಲ್ಲಿ ಸೋಮವಾರ ನಡೆದ ಮಹರ್ಷಿ ವಾಲ್ಮೀಕಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಶಾಸಕ ಶರಣಗೌಡ ಕಂದಕೂರ, ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ವರದಾನಂದೇಶ್ವರ ಸ್ವಾಮಿಜಿ ಇತರರಿದ್ದರು. | Kannada Prabha

ಸಾರಾಂಶ

ಮಾನವನ ಒಳತಿಗಾಗಿ ತಮ್ಮ ಅನುಭವದ ಮೂಲಕ ತತ್ವ ಆಧಾರದ ಮೇಲೆ ಜೀವಿಸಿದ ಮಹಾತ್ಮರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ, ಬದಲಿಗೆ ಅವರು ಎಲ್ಲ ಜನಾಂಗಕ್ಕೂ ಆದರ್ಶವಾಗಿದ್ದಾರೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೈದಾಪುರ

ಮಾನವನ ಒಳತಿಗಾಗಿ ತಮ್ಮ ಅನುಭವದ ಮೂಲಕ ತತ್ವ ಆಧಾರದ ಮೇಲೆ ಜೀವಿಸಿದ ಮಹಾತ್ಮರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ, ಬದಲಿಗೆ ಅವರು ಎಲ್ಲ ಜನಾಂಗಕ್ಕೂ ಆದರ್ಶವಾಗಿದ್ದಾರೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಅಭಿಪ್ರಾಯಪಟ್ಟರು.

ಸಮೀಪದ ನಾಗರಬಂಡ ಗ್ರಾಮದಲ್ಲಿ ಮಹರ್ಷಿ ಮೂರ್ತಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಾತ್ಮರ ಪುತ್ಥಳಿಗಳ ಪ್ರತಿಷ್ಠಾಪನೆ ಎಲ್ಲೆಡೆ ನಡೆಯುತ್ತಿದೆ. ಅದರಂತೆ ಅವರ ತತ್ವಾದರ್ಶಗಳನ್ನು ಪಾಲನೆ ಮಾಡುವ ಅಗತ್ಯವಿದೆ. ದೇವರ ಹೆಸರಲ್ಲಿ ದುಂದುವೆಚ್ಚ ಮಾಡಿ ಸಾಲಗಾರರಾಗದೆ ಮಕ್ಕಳಿಗೆ ಶಿಕ್ಷಣ ಕೊಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಹೊಟ್ಟೆಪಾಡಿಗಾಗಿ ಬೆಂಗಳೂರು, ಹೈದರಾಬಾದ ಮುಂಬಯಿಯಂತಹ ಮಹಾನಗರಗಳಿಗೆ ಹೋಗಿ ದುಡಿಯುವ ಶ್ರಮಿಕರು ಸಹ ಲಕ್ಷಾಂತರ ರೂಪಾಯಿಗಳನ್ನು ದೇವರ ಹೆಸರಲ್ಲಿ ಖರ್ಚು ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ದೇವರ ಆರಾಧನೆ ಮಾಡಿ ಆದರೆ ಸಾಲ ಶೂಲ ಮಾಡಿಕೊಂಡು ಕುಟುಂಬವನ್ನು ಆರ್ಥಿಕವಾಗಿ ಹಾಳು ಮಾಡಿಕೊಳ್ಳದೆ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಬೇಕು ಎಂದು ತಿಳಿ ಹೇಳಿದರು. ಯುವಕರು ಜೀವನ ರೂಪಿಸಿಕೊಳ್ಳಬೇಕಾದ ವಯಸ್ಸಲ್ಲಿ ದುಶ್ಚಟಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳದೆ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದರು.

ಉಪನ್ಯಾಸಕ ಎಸ್. ಎಸ್. ನಾಯಕ ಅವರು ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿ, ದೇವರ ಹೆಸರಲ್ಲಿ ಪ್ರಾಣಿಬಲಿ ಸಂಸ್ಕೃತಿಯನ್ನು ಬಿಟ್ಟು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಗಮನಹರಿಸಬೇಕು ಎಂದು ಹೇಳಿದರು.

ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ವರದಾನಂದೇಶ್ವರ ಸ್ವಾಮಿಜಿ, ಹಣಮೇಗೌಡ ಬೀರನಕಲ್, ಸುದರ್ಶನ ನಾಯಕ ವರ್ಕನಳ್ಳಿ, ಮರೆಪ್ಪ ನಾಯಕ ಮಗ್ದಂಪುರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಭೀಮರಾಯ ಠಾಣಾಗುಂದಿ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ರಘುಪತಿ ಗೌಡಗೇರಾ, ಸಿದ್ದಲಿಂಗರೆಡ್ಡಿಗೌಡ, ಸುಭಾಷ ನಾಯಕ ಹೆಡಗಿಮದ್ರಾ, ಮಲ್ಲಮ್ಮ ಕೋಮಾರ, ಪಿ.ಎಸ್.ಐ ಭೀಮರಾಯ ನಾಯಕ, ಭೀಮರಾಯ ಹೊಸಮನಿ, ದೇವಿಂದ್ರ ನಾಯಕ ಕೂಡ್ಲೂರು, ಬಸರೆಡ್ಡಿಗೌಡ ಹೆಗ್ಗಣಗೇರಾ, ರವೀಂದ್ರ ಮಲ್ಲೋರ, ಲಕ್ಷ್ಮಣ ನಾಯಕ ಕೂಡ್ಲೂರು, ಮಲ್ಲೇಶ ನಾಯಕ, ರಘುಪತಿ ಗೌಡಗೇರಾ, ಸಾಹೇಬಗೌಡ ಗೌಡಗೇರಾ, ಆಂಜನೇಯ ಮಲ್ಹಾರ ಇತರರು ಇದ್ದರು.

ವಾಲ್ಮೀಕಿ ಮಹರ್ಷಿ ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾತಿನಲ್ಲಿ ಬದಲಾವಣೆ ಆಗದೆ ಕೃತಿಯಲ್ಲಿ ಬದಲಾಗಬೇಕು, ಶಿಕ್ಷಣ ಪಡೆದು ವಿದ್ಯಾವಂತರಾಗಿ ವಿಚಾರಶೀಲರಾಗಬೇಕು, ಸರ್ವ ಸಮಾಜದ ಬಂಧುಗಳ ಜತೆಗೆ ಸಹಬಾಳ್ವೆ ಜೀವನ ಸಾಗಿಸಿ, ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು.

ವರದಾನಂದೇಶ್ವರ ಸ್ವಾಮೀಜಿ ಪೀಠಾಧಿಪತಿ, ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠ

PREV

Recommended Stories

ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ: ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ
ತಾಂತ್ರಿಕ ಕ್ಷೇತ್ರದಲ್ಲಿ ಕನ್ನಡ ಬೆಳೆಸಬೇಕಿದೆ: ಸಾಹಿತಿ ಪ್ರೊ. ಎಸ್. ಜಿ. ಸಿದ್ದರಾಮಯ್ಯ