ಕನ್ನಡಪ್ರಭ ವಾರ್ತೆ ಚನ್ನಗಿರಿ
ಫೆಬ್ರವರಿ ತಿಂಗಳಿನಲ್ಲಿ ಬರುವ ಮಡಿವಾಳ ಮಾಚಿದೇವರ, ಉರಿಲಿಂಗಪೆದ್ದಿ, ಮಾದಾರ ಚನ್ನಯ್ಯ, ಸಮಗಾರ ಹರಳಯ್ಯ, ಮಾದಾರ ದೂಳಯ್ಯ, ಡೋಹಾರ ಕಕ್ಕಯ್ಯ, ಸಂತ ಸೇವಾಲಾಲ್, ಸವಿತ ಮಹರ್ಷಿ, ಛತ್ರಪತಿ ಶಿವಾಜಿ ಮಹಾರಾಜ, ಸರ್ವಜ್ಞ ಈ ಮಹಾನೀಯರ ಜಯಂತಿಗಳನ್ನು ಈ ಎಲ್ಲಾ ಸಮಾಜದವರು ಸೇರಿಕೊಂಡು ಆಚರಣೆ ಮಾಡುತ್ತಿ ರುವುದು ಶ್ಲಾಘನೀಯವಾಗಿದೆ ಎಂದು ತಾಲೂಕು ಕಾಂಗ್ರೇಸ್ ಪಕ್ಷದ ಮುಖಂಡ, ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ವೀರೇಶ್ ನಾಯ್ಕ್ ಹೇಳಿದರು. ಅವರು ತಾಲೂಕು ಆಡಳಿತ, ತಾಲೂಕು ಮಡಿವಾಳ ಸಮಾಜ, ಕಾಯಕ ಸಮಾಜ, ಬಂಜಾರ ಸಮಾಜ, ಸವಿತ ಸಮಾಜ, ಮರಾಠ ಸಮಾಜ, ಕುಂಬಾರ ಸಮಾಜದ ವತಿ ಯಿಂದ ಹಮ್ಮಿಕೊಂಡಿದ್ದ ದಾರ್ಶನಿಕ ಶರಣರ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಾರ್ಶನಿಕರು, ಸಂತರು, ಮಹಾಪುರುಷರು ಇವರು ಒಂದೇ ಜಾತಿಗೆ ಸೀಮಿತರಾದವರಲ್ಲ. ಇವರು ಸಮಾಜದ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಪುರುಷರಾಗಿದ್ದು, ಇವರ ಜಯಂತಿಗಳನ್ನು ಎಲ್ಲಾ ವರ್ಗದ ಜನರು ಒಟ್ಟಿಗೆ ಸೇರಿ ಆಚರಣೆ ಮಾಡಲು ನಿರ್ಧರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಗುಡ್ಡಪ್ಪ ಹಾಗೂ ತಾಲೂಕು ಕ್ಷತ್ರೀಯ ಮರಾಠ ಸಮಾಜದ ಅಧ್ಯಕ್ಷ ಶಿವಾಜಿರಾವ್ ಜಾದವ್ ಮಾತನಾಡಿದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ತಹಶೀಲ್ದಾರ್ ಎರ್ರಿಸ್ವಾಮಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವಿತ ಸಮಾಜದ ಅಧ್ಯಕ್ಷ ಬೀರಲಿಂಗಪ್ಪ, ತಾಲೂಕು ಕುಂಬಾರ ಸಮಾಜದ ಮುಖಂಡ ಶ್ರೀನಿವಾಸ್, ದತ್ತಪ್ಪ, ದೀಪಕ್ ಗಾರ್ಘೆ, ರಾಜನಾಯ್ಕ್, ಸುಬ್ರಮಣ್ಯ, ತಾ.ಪಂ ಕಾರ್ಯನಿವಾರ್ಣಾಧಿಕಾರಿ ಬಿ.ಕೆ.ಉತ್ತಮ, ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಯ ಅಧಿಕಾರಿ ಮಲ್ಲಿಕಾರ್ಜುನ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರವೀಂದ್ರಕುಮಾರ್ ಅಥರ್ಗ, ಬೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತರ ಮಂಜಾನಾಯ್ಕ್ ಸೇರಿದಂತೆ ಮೊದಲಾದವರು ಹಾಜರಿದ್ದರು.