- ಚನ್ನಗಿರಿ ಪಟ್ಟಣದಲ್ಲಿ ಜಾಗೃತಿ ಜಾಥಾದಲ್ಲಿ ಬೆಸ್ಕಾಂ ಅಭಿಯಂತರ ಮಂಜನಾಯ್ಕ್
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ವಿದ್ಯುತ್ ಬಳಕೆ ವಿಚಾರದಲ್ಲಿ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದೆ. ವಿದ್ಯುತ್ ತಂತಿಗಳ ಬಳಿ ಮಕ್ಕಳನ್ನು ಆಟವಾಡಲು ಬಿಡಬಾರದು. ವಿದ್ಯುತ್ ಸ್ವಿಚ್‌ಗಳು, ವಿದ್ಯುತ್ ಉಪಕರಣಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೋಷಕರ ಮೇಲಿದೆ ಎಂದು ಬೆಸ್ಕಾಂ ಅಭಿಯಂತರ ಮಂಜನಾಯ್ಕ್ ಹೇಳಿದರು.ವಿದ್ಯುತ್ ಅವಘಡಗಳ ಬಗ್ಗೆ ಜಾಗೃತಿ ಮೂಡಿಸುವ ಜಾಗೃತಿ ಸಲುವಾಗಿ ಪಟ್ಟಣದಲ್ಲಿ ಸೋಮವಾರ ನಡೆದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನೆಗಳಲ್ಲಿ ಯಾವಾಗಲೂ ಮೂರು ಪಿನ್‌ಗಳ ಸಾಕೆಟ್ (ಪ್ಲಗ್)ಗಳನ್ನು ಬಳಸಬೇಕು. ಮನೆಗಳ ವೈರಿಂಗ್ ಕೆಲಸವನ್ನು ಸರ್ಕಾರಿ ಲೈಸನ್ಸ್ ಹೊಂದಿದ ವಿದ್ಯುತ್ ಗುತ್ತಿಗೆದಾರರಿಂದ ಮಾಡಿಸಿಕೊಳ್ಳಬೇಕು. ವಿದ್ಯುತ್ ಸಂಪರ್ಕಕ್ಕೆ ಸೂಕ್ತ ಗ್ರೌಡಿಂಗ್ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದರು ತಿಳಿಸಿದರು.
ಯಾವುದೇ ವಿದ್ಯುತ್ ಉಪಕರಣಗಳನ್ನು ತೆಗೆದುಕೊಳ್ಳುವಾಗ ಐಎಸ್‌ಐ ಪ್ರಮಾಣಿತ ಉಪಕರಣಗಳು, ವೈರ್, ಕೇಬಲ್‌ಗಳನ್ನು ಬಳಸಬೇಕು. ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬಾರದು. ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಯಾರೂ ಮುಟ್ಟಬಾರದು. ವಿದ್ಯುತ್ ಸ್ವಿಚ್‌ಗಳನ್ನು ಹಾಗೂ ವಿದ್ಯುತ್ ಉಪಕರಣಗಳನ್ನು ಒದ್ದೆಯ ಕೈಗಳಲ್ಲಿ ಮುಟ್ಟಬಾರದು. ಕಂಬಳಿಗೆ ಬಟ್ಟೆಗಳನ್ನು ಒಣಗಿಸುವ ತಂತಿಗಳನ್ನು ಕಟ್ಟುವುದನ್ನು ಮಾಡಬಾರದು. ವಿದ್ಯುತ್ ವ್ಯವಸ್ಥೆಗಳಲ್ಲಿ ಸಮಸ್ಯೆ ಕಂಡುಬಂದಲ್ಲಿ ತಕ್ಷಣವೇ ಬೆಸ್ಕಾಂ ಸಹಾಯವಾಣಿ 1912ಗೆ ಕರೆ ಮಾಡಿ ತಿಳಿಸಬೇಕು ಎಂದು ಸಲಹೆ ನೀಡಿದರು.ಜಾಥಾ ಪಟ್ಟಣದ ಬೆಸ್ಕಾಂ ಕಚೇರಿಯಿಂದ ಹೊರಟು ವಿವಿಧ ರಸ್ತೆಗಳಲ್ಲಿ ಸಾಗಿ, ಘೋಷಣೆಗಳ ಕೂಗುವ ಮೂಲಕ ಸಾರ್ವಜನಿಕಲ್ಲಿ ಜಾಗೃತಿ ಮೂಡಿಸಲಾಯಿತು. ಬೆಸ್ಕಾಂ ಅಧಿಕಾರಿಗಳಾದ ನಾಗರಾಜ, ಶಿವಕುಮಾರ್, ಅರುಣ್, ಕಿಶೋರ್, ನಂಜುಂಡಸ್ವಾಮಿ, ಶಿವಕುಮಾರ್, ನಾಗರಾಜ ನಾಯ್ಕ್, ರಘುನಾಥ್, ಭರತ್, ಸಂದೀಪ್, ಶಿವಾನಂದ್, ಚನ್ನಬಸಪ್ಪ, ನೌಕರರು ಭಾಗವಹಿಸಿದ್ದರು.
- - --30ಕೆಸಿಎನ್ಜಿ5.ಜೆಪಿಜಿ:
ಚನ್ನಗಿರಿಯಲ್ಲಿ ಬೆಸ್ಕಾಂ ವತಿಯಿಂದ ವಿದ್ಯುತ್ ಅವಗಡಗಳ ಕುರಿತು ಸಾರ್ವಜನಿರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಲಾಯಿತು.