ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಗಿಡ ನೆಡಲು ಕುಳಿ ತೆಗೆಯುವ ಕೆಲಸದಲ್ಲಿ ತೊಡಗಿದರು. ವಿಭಾಗದ ಸುತ್ತಲೂ ಕುಳಿಗಳನ್ನು ತೆಗೆಯಲಾಯಿತು. ಸ್ಥಳಾವಕಾಶದ ಕೊರತೆಯಿಂದ ಜಯಲಕ್ಷ್ಮಿ ವಿಲಾಸ ಅರಮನೆ ಬಳಿ ಇತ್ತೀಚೆಗೆ ತೆಗೆಯಲಾಗಿದ್ದ ಕುಳಿಗಳನ್ನು ಸಹ ಬಳಸಲಾಯಿತು. ವೃಕ್ಷಗಳ ನೆರಳಿನಲ್ಲಿ, ಮುಕ್ತ ಆವರಣದಲ್ಲಿ ನಡೆದ ಈ ಕಾರ್ಯಕ್ರಮವು ದಿನದ ಪವಿತ್ರತೆಯನ್ನು ಪ್ರತಿಬಿಂಬಿಸಿತು.
ಆರಂಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಮರ್ಪಿತವಾದ ಗೀತೆಯೊಂದನ್ನು ಹಾಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಹಸಿರನ್ನು ಸ್ಥಾಪಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದರ ನೆನಪನ್ನು ಕಾರ್ಯಕ್ರಮ ಸ್ಮರಿಸಿತು.ಐಜಿಬಿಸಿ ಅಧ್ಯಕ್ಷ ಮತ್ತು ವೀನಸ್ ಗ್ಯಾಸ್ ಪ್ರಾಡಕ್ಟ್ಸ್‌ಸರ್ವೀಸಸ್‌ನ ವ್ಯವಸ್ಥಾಪಕ ನಿರ್ದೇಶಕ ವಿನೋದ್ ಮರೋಳಿ ಮಾತನಾಡಿ, ಹಸಿರು ತಂತ್ರಜ್ಞಾನಗಳ ಪಾತ್ರ ಹಾಗೂ ಐಜಿಬಿಸಿ ಸಂಸ್ಥೆಯು ಹಸಿರು ಅಭಿವೃದ್ಧಿಗೆ ನೀಡುತ್ತಿರುವ ಬದ್ಧತೆಯ ಕುರಿತು ಮಾತನಾಡಿ, ಹಸಿರು ಪ್ರದೇಶಗಳನ್ನು ನಿರ್ಮಿಸುವುದು ಆಯ್ಕೆಯ ವಿಷಯವಲ್ಲ, ಭವಿಷ್ಯಕ್ಕಾಗಿ ಹೊಣೆಗಾರಿಕೆಯಾಗಿದೆ ಎಂದರು.
ಐಜಿಬಿಸಿ ಸಹಾಧ್ಯಕ್ಷ, ಜಿಎಸ್‌ಎಸ್‌ಗ್ರೂಪ್‌ಅಧ್ಯಕ್ಷ ಡಿ. ಶ್ರೀಹರಿ ಮಾತನಾಡಿ, ಮಾನಸಗಂಗೋತ್ರಿ ಈಗಾಗಲೇ ಹಸಿರು ಪ್ರಾಂಗಣವಿದ್ದರೂ, ಅದು ಇನ್ನಷ್ಟು ಹಸಿರಾಗಬಹುದು ಎಂದು ಅಭಿಪ್ರಾಯಪಟ್ಟರು.
ಸೌರಮಾನ ಶ್ರೀಲಕ್ಷ್ಮೀನರಸಿಂಹ ಜಯಂತಿ ಹಾಗೂ ಸ್ವಾತಿ ಪೂಜೆ
ನಗರದ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಶಾಖಾ ಮಠ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸೌರಮಾನ ಶ್ರೀ ಲಕ್ಷ್ಮೀನರಸಿಂಹ ಜಯಂತಿ ಹಾಗೂ ವಿಶೇಷ ಸ್ವಾತಿ ಪೂಜೆ ಆಯೋಜಿಸಿತ್ತು.
ಸಂಜೆ ತೀರುವೀದಿ ಉತ್ಸವದಲ್ಲಿ ಅನೇಕ ಭಕ್ತಾದಿಗಳು ಭಾಗವಹಿಸಿದ್ದರು. ದೇವಸ್ಥಾನದ ಸಿಇಒ ಕೆ.ಆರ್. 0ಯೋಗಾನರಸಿಂಹನ್, ಪುರೋಹಿತ ವೀರರಾಘವನ್, ತಾತಾಚಾರ್, ರಾಘವ, ವಿಶ್ವನಾಥ್, ಬಾಲಾಜಿ, ಶಂಕರ ಇದ್ದರು.