ಜುಲೈ 12ರಂದು ಮೆಗಾ ಲೋಕ್ ಅದಾಲತ್

KannadaprabhaNewsNetwork |  
Published : Jun 12, 2025, 01:18 AM ISTUpdated : Jun 12, 2025, 01:19 AM IST
ಕುಂದಗೋಳದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಭಾಂಗಣದಲ್ಲಿ ಮೇಘಾ ಲೋಕ್‌ ಅದಾಲತ್‌ ಕುರಿತು ಬ್ಯಾಂಕುಗಳ ಮುಖ್ಯಸ್ಥರೊಂದಿಗೆ ಸಭೆ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಬರುವ ಜುಲೈ 12 ರಂದು ಜರುಗುವ ಅದಾಲತ್ ನಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ರಿಕವರಿ ಆಗದೇ ಇರುವ ಪ್ರಕರಣಗಳನ್ನು ಬ್ಯಾಂಕು ಮತ್ತು ಸಾಲಗಾರರ ಮದ್ಯ ಬಹು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಟ್ ಬಾಕಿ ಸಹಿತ ನ್ಯಾಯಾಲಯದಲ್ಲಿ ಈಗಾಗಲೇ ದಾಖಲಾಗಿರುವ ದಾವೆಗಳನ್ನು ರಾಜಿ‌ ಮೂಲಕ ಇತ್ಯರ್ಥಪಡಿಸಲಾಗುವುದು.

ಕುಂದಗೋಳ: ರಾಷ್ಟ್ರೀಕೃತ, ಖಾಸಗಿ ಸಹಿತ ಹಲವು ಬ್ಯಾಂಕುಗಳಲ್ಲಿನ ಚೆಕ್‌ ಅಮಾನ್ಯ, ರಿಕವರಿ ಪೆಂಡಿಂಗ್ ಸಹಿತ ಇನ್ನಿತರ ಹಣಕಾಸು ವ್ಯವಹಾರ ಪ್ರಕರಣಗಳನ್ನು ರಾಜೀ‌ ಮೂಲಕ ಇತ್ಯರ್ಥಪಡಿಸಲು ಬರುವ ಜುಲೈ 12 ರಂದು ಬೃಹತ್ ಮೆಗಾ ಲೋಕ್ ಅದಾಲತ್ ಏರ್ಪಡಿಸಲಾಗಿದೆ.

ಈ‌ ಕುರಿತು ಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯದ ಸಭಾಂಗಣದಲ್ಲಿ ಬ್ಯಾಂಕುಗಳ ಮುಖ್ಯಸ್ಥರ ಸಭೆಯಲ್ಲಿ ಹಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಅಬ್ದುಲ್ ಖಾದರ್, ದಿವಾಣಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಗಾಯತ್ರಿ ಮಾಹಿತಿ‌ ನೀಡಿದರು.

ಬರುವ ಜುಲೈ 12 ರಂದು ಜರುಗುವ ಅದಾಲತ್ ನಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ರಿಕವರಿ ಆಗದೇ ಇರುವ ಪ್ರಕರಣಗಳನ್ನು ಬ್ಯಾಂಕು ಮತ್ತು ಸಾಲಗಾರರ ಮದ್ಯ ಬಹು ವರ್ಷಗಳಿಂದ ನೆನಗುದಿಗೆ ಬಿದ್ದಿರುವ ಕಟ್ ಬಾಕಿ ಸಹಿತ ನ್ಯಾಯಾಲಯದಲ್ಲಿ ಈಗಾಗಲೇ ದಾಖಲಾಗಿರುವ ದಾವೆಗಳನ್ನು ರಾಜಿ‌ ಮೂಲಕ ಇತ್ಯರ್ಥಪಡಿಸಲಾಗುವುದು. ಈ‌ ಕುರಿತು ವಾದಿ ಹಾಗೂ‌ ಪ್ರತಿವಾದಿಗಳಿಂದ ಮಾಹಿತಿ ಪಡೆಯಲಾಗುವುದು. ತದನಂತರ ರಾಜಿಯಾಗುವಂತಹ ಕ್ರಿಮಿನಲ್ ಕೇಸುಗಳಿಂದ ಅನಗತ್ಯವಾಗುವ ಆರ್ಥಿಕ ಹೊರೆ ತಪ್ಪಿಸಿ ಇಬ್ಬರಿಗೂ ಅನುಕೂಲ‌ ಮಾಡಿಕೊಡುವ ಮಹಾತ್ವಾಕಾಂಕ್ಷೆಯ ಈ ಲೋಕ್ ಅದಾಲತ್ ನಲ್ಲಿ ಭಾಗವಹಿಸಲು‌ ಕರೆ ನೀಡಿದರು.

ಇದು ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಕಕ್ಷಿಗಾರ ರ ನೈಜತೆಯನ್ನು ಪರಿಕ್ಷಿಸಿ, ರಾಜೀ ಸಂಧಾನಕ್ಕೆ ಒಪ್ಪಿಸಿಕೊಳ್ಳಲಾಗುವುದು ಎಂದ ನ್ಯಾಯಮೂರ್ತಿಗಳು, ಮೇಘಾ ಲೋಕಾ ಅದಾಲತ್ತನ್ನು ರಾಜ್ಯ ಉಚ್ಚ‌ನ್ಯಾಯಾಲಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೊರಡಿಸಿರುವ ಮಾರ್ಗಸೂಚಿ (ಎಸ್.ಓ.ಪಿ.) ನಿಯಮಾವಳಿ ಅನುಸಾರ‌ ಮಾಡಲಾಗುವುದು. ಬ್ಯಾಂಕುಗಳು ಇದಕ್ಕೆ ಸಹಕಾರ ನೀಡಬೇಕು. ಪ್ರತಿಯೊಂದು ರಿಕವರಿಗೂ ಎವಿಡೆನ್ಸ್ ಮುಖ್ಯವಾಗಿದ್ದು ರಾಜಿ ಸಂದಾನದಿಂದ ಕೋರ್ಟ್‌ನ ದಾವಾ, ಖರ್ಚು ಸಹಿತ ಸಮಯವೂ ಉಳಿತಾಯವಾಗುತ್ತದೆ. ಕಳೆದ ಅದಾಲತ್ ನಲ್ಲಿ ₹1.5 ಕೋಟಿಗೂ ಹೆಚ್ಚು ಹಣ ರಿಕವರಿ ಜತೆಗೆ ನೂರಾರು ಜನರಿಗೆ ಕಾನೂನು ನೆರವೂ ಸಹ ಸಿಕ್ಕಿದೆ ಎಂದು‌ ಮಾಹಿತಿ ನೀಡಿದರು.

ತಿಂಗಳು ಸಮಯಾವಕಾಶವಿದೆ. ಹೀಗಾಗಿ ಬ್ಯಾಂಕಿನವರು ಪ್ರಕರಣಗಳ ಕುರಿತು‌ ಮಾಹಿತಿ ನೀಡಿದಲ್ಲಿ ಸಂಬಂದಿಸಿದವರಿಗೆ ನೋಟಿಸ್ ನೀಡಲಾಗುವುದು. ಕೆಲವೊಂದು‌ ಬ್ಯಾಂಕುಗಳಲ್ಲಿ ಪ್ರಿನ್ಷಿಪಲ್ ಅಮೌಂಟ್ ನಲ್ಲೂ ಸಹ ಡಿಸ್ಕೌಂಟ್ ಇದೆ. ಒಟ್ಟಾರೆ ಲೋಕ್ ಅದಾಲತ್ ಕುರಿತು ಜಾಗೃತಿಯ ಜತೆಗೆ ಪ್ರಕರಣಗಳ ಸಾಧಕ, ಭಾದಕಗಳ ಕುರಿತು ಆಯಾ ವ್ಯಕ್ತಿಗಳಿಗೆ‌ ಮನವರಿಕೆ ಮಾಡಿ ಕೊಡುವ ಕಾರ್ಯ ನ್ಯಾಯಾಲಯಗಳಿಂದಾಗುತ್ತದೆ ಎಂದರು.

ಕರ್ನಾಟಕ ಬ್ಯಾಂಕ್, ಕೆವಿಜಿ ಸಹಿತ ಅನೇಕ ಬ್ಯಾಂಕುಗಳ ‌ವ್ಯವಸ್ಥಾಪಕರು ತಮ್ಮಲ್ಲಿರುವ ಪ್ರಕರಣಗಳ ಸಂಖ್ಯಾ ‌ಮಾಹಿತಿ ಒದಗಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?