ಭದ್ರಾವತಿ : ಗೃಹ ಲಕ್ಷ್ಮೀ ಹಣದಿಂದ ಅಂಗಡಿಯನ್ನು ತೆರೆದು ಇತರರಿಗೆ ಪ್ರೇರಣೆಯಾದ ಮಹಿಳೆ

KannadaprabhaNewsNetwork |  
Published : Dec 24, 2024, 12:49 AM ISTUpdated : Dec 24, 2024, 12:06 PM IST
ಪೋಟೋ ಎಚ್ ಎಚ್ ಆರ್ ಪಿ 1,2,3.ಹೊಳೆಹೊನ್ನೂರು ಸಮೀಪದ ಯಡೇಹಳ್ಳಿ ಗ್ರಾಮದಲ್ಲಿ ಖುರ್ಷಿದ್ ಎಂಬ ಮಹಿಳೆ ಗೃಹಲಕ್ಷ್ಮೀ ಹಣದಿಂದ ತೆರೆದ ಅಂಗಡಿಯನ್ನು ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಮನು ಉದ್ಘಾಟಿಸಿದರು. | Kannada Prabha

ಸಾರಾಂಶ

ಭದ್ರಾವತಿ ತಾ. ಯಡೇಹಳ್ಳಿ ಖುರ್ಷಿದ್ ಗೃಹ ಲಕ್ಷ್ಮೀ ಹಣದಿಂದ ಅಂಗಡಿಯನ್ನು ತೆರೆದು ಇತರರಿಗೆ ಪ್ರೇರಣೆಯಾಗಿದ್ದಾರೆ.14 ವರ್ಷಗಳ ಹಿಂದೆ ತನ್ನ ಒಬ್ಬನೇ ಮಗನನ್ನು ಮತ್ತು12 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.

ಹೊಳೆಹೊನ್ನೂರು: ಭದ್ರಾವತಿ ತಾ. ಯಡೇಹಳ್ಳಿ ಖುರ್ಷಿದ್ ಗೃಹ ಲಕ್ಷ್ಮೀ ಹಣದಿಂದ ಅಂಗಡಿಯನ್ನು ತೆರೆದು ಇತರರಿಗೆ ಪ್ರೇರಣೆಯಾಗಿದ್ದಾರೆ.14 ವರ್ಷಗಳ ಹಿಂದೆ ತನ್ನ ಒಬ್ಬನೇ ಮಗನನ್ನು ಮತ್ತು12 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಒಂಟಿಯಾಗಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. 

ಇಂತಹ ಮಹಿಳೆ ಗೃಹಲಕ್ಷ್ಮಿಯ ಪ್ರತಿ ತಿಂಗಳ ಎರಡು ಸಾವಿರ ರು. ಕೂಡಿಟ್ಟು ಅಂಗಡಿಯನ್ನು ತೆರೆದು ಬದುಕು ಸಾಗಿಸಲು ಮುಂದಾಗಿದ್ದಾರೆ. ಅಂಗಡಿ ಉದ್ಘಾಟನೆ ನೆರವೇರಿಸಿದ ಖುರ್ಷಿದ್‌ ಗೆ ಎಲ್ಲರೂ ಶುಭ ಕೋರಿದ್ದಾರೆ. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಮನು, ಗ್ರಾಪಂ ಸದಸ್ಯ ಮಹಮದ್ ಅಲಿ, ಎಸ್.ಎಂ.ಹಾಲೇಶಪ್ಪ, ನಾಗರಾಜ್ ಗೌಡ, ಪಿ.ಎನ್.ಜಗದೀಶ್, ಸಾಹಿಲ್, ಇಮ್ರಾನ್, ಆದಿಲ್, ಬಾಷಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ