ಜಿಎಸ್‌ಟಿ ಇಳಿಕೆಯಿಂದ ಜನರಿಗೆ ಅನುಕೂಲ

KannadaprabhaNewsNetwork |  
Published : Sep 24, 2025, 01:00 AM IST
  ಕನ್ನಡಪ್ರಭ ವಾರ್ತೆ, | Kannada Prabha

ಸಾರಾಂಶ

ಕೇಂದ್ರ ಸರ್ಕಾರವು ಜಿ.ಎಸ್‌.ಟಿ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಕೇಂದ್ರ ಸರ್ಕಾರವು ಜಿ.ಎಸ್‌.ಟಿ ಕಡಿತಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.

ನಗರದ ಶ್ರೀಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ನೇತೃತ್ವದಲ್ಲಿ ಸಮಾವೇಶಗೊಂಡ ಪಕ್ಷದ ಮುಖಂಡರು, ಕಾರ್ಯಕರ್ತರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತಕ್ಕೆ ತೆರಳಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಪ್ರಧಾನಿ ನರೇಂದ್ರ ಮೋದಿ ಪರ ಜೈಕಾರ ಕೂಗಿ ಸಂಭ್ರಮಿಸಿದರು.

ವಿಜಯೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ವು ಜಿಎಸ್ ಟಿ ಕಡಿಮೆಗೊಳಿಸುವ ಮೂಲಕ ರೈತರಿಗೆ, ವಿದ್ಯಾರ್ಥಿಗಳಿಗೆ ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ನೆರವಾಗಿದೆ ಎಂದರು.

ದೇಶಾದ್ಯಂತ ಸೆ.22 ಜಿಎಸ್‌ಟಿ 2.0 ಹೊಸ ತೆರಿಗೆ ನೀತಿ ಜಾರಿಗೆ ಬರಲಿದ್ದು, ಪ್ರಸ್ತುತ ಇರುವ 4 ಸ್ಪ್ಯಾಬ್ ತೆರಿಗೆಗಳನ್ನು ಬದಲಾವಣೆ ಮಾಡಲಾಗಿದ್ದು, ಕೇವಲ ಶೇ.5ರಷ್ಟು ಮತ್ತು ಶೇ. 18ರಷ್ಟು ಎರಡು ಸ್ಪ್ಯಾಬ್ ತೆರಿಗೆ ಇರಲಿದೆ. ಈ ಹಿನ್ನೆಲೆ ಎರಡು ಸ್ಪ್ಯಾಬ್ ಪ್ರಕಾರ ಸಾಮಾನ್ಯ ಜನರಿಗೆ ಅಗತ್ಯವಾದ ವಸ್ತುಗಳ ದರವು ಇಳಿಕೆಯಾಗಲಿದೆ.

ನಿತ್ಯ ಬಳಸುವ ವಸ್ತುಗಳ, ಆಹಾರ ಉತ್ಪನ್ನಗಳು, ಆಟೋಮೊಬೈಲ್‌, ವಾಹನಗಳು ಸೇರಿ ಒಟ್ಟು 375 ವಸ್ತುಗಳ ಬೆಲೆ ಇಂದಿನಿಂದ ಕಡಿಮೆಯಾಗಲಿದೆ, ದೇಶದ ಜನರಿಗೆ ಅನುಕೂಲ ಮಾಡಿಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಈ ಮೂಲಕ ಅಭಿನಂದನೆ ಸಲ್ಲಿಸಲಾಗುವುದು. ಜಾತಿ ಗಣತಿ ಸಮೀಕ್ಷೆಯಲ್ಲಿ ಎಲ್ಲಾ ಸಮುದಾಯದವರು ಧರ್ಮ ಕಾಲಂನಲ್ಲಿ ಹಿಂದೂ ಎಂದು ಬರೆಸುವಂತೆ ಮನವಿ ಮಾಡಿದರು.

ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಓಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೊರೊಂದುಶೆಟ್ಟಿ ಮಾತನಾಡಿದರು.

ವಿಜಯೋತ್ಸವದಲ್ಲಿ ಮಾಜಿ ಅಧ್ಯಕ್ಷ ಆರ್.ಸುಂದರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡುಪ್ರಕಾಶ್, ಹೊನ್ನೂರು ಮಹಾದೇವಸ್ವಾಮಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಶಿವು ವಿರಾಟ್, ಜಿ. ಪಂ. ಮಾಜಿ ಸದಸ್ಯ ಬಾಲರಾಜು. ಚೂಡಾ ಮಾಜಿ ಅಧ್ಯಕ್ಷ ಶಾಂತಮೂರ್ತಿಕುಲಗಾಣ. ಚಾಮುಲ್ ಮಾಜಿ ಅಧ್ಯಕ್ಷ ನಾಗೇಂದ್ರ. ಅರಕಲವಾಡಿ ನಾಗೇಂದ್ರ, ನಗರ ಮಂಡಲ ಅಧ್ಯಕ್ಷ ಶಿವರಾಜ್, ಪ್ರಧಾನ ಕಾರ್ಯದರ್ಶಿ ಮಹೇಶ್, ಬೇಡರಪುರ ಬಸವಣ್ಣ. ನಟರಾಜು. ವೃಷಭೇಂದ್ರ ಸ್ವಾಮಿ. ಅಗರರಾಜು. ಮುನೇಶ್ , ಹುಲ್ಲಿನ ಶಿವಣ್ಣ. ಎಸ್ ಟಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಜಯಸುಂದರ್, ಜಿಲ್ಲಾಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಉಪಾಧ್ಯಕ್ಷ ಬುಲೆಟ್ ಚಂದ್ರು, ಎಸ್ ಸಿ ಮೋರ್ಚಾದ ಮೂಡಹಳ್ಳಿ ಮೂರ್ತಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸೂರ್ಯ ಕುಮಾರ್ ಕೊತ್ತಲವಾಡಿ ಮಾದಪ್ಪ. ಹರದನಹಳ್ಳಿ ರವಿ. ಆರ್ ಎಸ್ ಲಿಂಗರಾಜು ಉತ್ತುವಳ್ಳಿ ಮಹೇಶ್, ರಾಮಸಮುದ್ರ ಶಿವಣ್ಣ, ಗಿರೀಶ್. ಮಣಿ, ವೇಣುಗೋಪಾಲ್ ಇದ್ದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ