ಜನರ ಬದುಕಿಗೆ ಆಸರೆಯಾದ ಗ್ಯಾರಂಟಿ

KannadaprabhaNewsNetwork |  
Published : Mar 27, 2025, 01:09 AM IST
26ಕೆಪಿಎಲ್204ನಗರದ ಸರಕಾರಿ ಬಾಲಿಕೆಯರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮ | Kannada Prabha

ಸಾರಾಂಶ

ಯುವನಿಧಿ ಮೂಲಕ ಡಿಪ್ಲೊಮಾ ಪದವೀಧರರಿಗೆ ₹ ೧೫೦೦ ಮತ್ತು ಪದವೀಧರರಿಗೆ ₹ ೩೦೦೦ವನ್ನು ೧೮ ತಿಂಗಳು ನೀಡುವ ಯೋಜನೆಯಾಗಿದೆ. ಇದರ ಅನುಕೂಲ ಪಡೆದು ಬದುಕು ಕಟ್ಟಿಕೊಳ್ಳಬಹುದು. ಒಬ್ಬ ಅದವೀಧರ ₹ ೫೪ ಸಾವಿರ ಮತ್ತು ಒಬ್ಬ ಡಿಪ್ಲೊಮಾ ಪದವೀಧರ ₹ ೨೭ ಸಾವಿರ ಭತ್ಯೆ ಪಡೆಯಲು ಅರ್ಹರಾಗಿದ್ದು ಇದೊಂದು ಮಹತ್ವದ ಯೋಜನೆಯಾಗಿದೆ.

ಕೊಪ್ಪಳ:

ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿಗೆ ಆಸರೆ ನೀಡಿದೆ. ಅದನ್ನು ಕೆಲವರು ಬಿಟ್ಟಿ ಎಂದು ಅಪಪ್ರಚಾರ ಮಾಡುತ್ತಿರುವುದು ನೋವಿನ ಸಂಗತಿ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಅಭಿಪ್ರಾಯಪಟ್ಟರು.

ನಗರದ ಸರ್ಕಾರಿ ಬಾಲಿಕಿಯರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ಹಮ್ಮಿಕೊಳ್ಳಲಾಗಿದ್ದ ಯುವನಿಧಿ ಯೋಜನೆಯ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವನಿಧಿ ಮೂಲಕ ಡಿಪ್ಲೊಮಾ ಪದವೀಧರರಿಗೆ ₹ ೧೫೦೦ ಮತ್ತು ಪದವೀಧರರಿಗೆ ₹ ೩೦೦೦ವನ್ನು ೧೮ ತಿಂಗಳು ನೀಡುವ ಯೋಜನೆಯಾಗಿದೆ. ಇದರ ಅನುಕೂಲ ಪಡೆದು ಬದುಕು ಕಟ್ಟಿಕೊಳ್ಳಬಹುದು. ಒಬ್ಬ ಅದವೀಧರ ₹ ೫೪ ಸಾವಿರ ಮತ್ತು ಒಬ್ಬ ಡಿಪ್ಲೊಮಾ ಪದವೀಧರ ₹ ೨೭ ಸಾವಿರ ಭತ್ಯೆ ಪಡೆಯಲು ಅರ್ಹರಾಗಿದ್ದು ಇದೊಂದು ಮಹತ್ವದ ಯೋಜನೆಯಾಗಿದೆ ಎಂದ ಅವರು, ಬಿಟ್ಟಿ ಭ್ಯಾಗ್ಯ ಎಂದವರೇ ಬೇರೆ ರಾಜ್ಯಗಳಲ್ಲಿ ಇವುಗಳನ್ನು ನಕಲು ಮಾಡಿ ಅಧಿಕಾರಕ್ಕೆ ಬರುತ್ತಿದ್ದಾರೆ ಬಿಜೆಪಿ ವಿರುದ್ಧ ಕಿಡಿಕಾರಿದರು.

ಉದ್ಯೋಗ ವಿನಿಮಯ ಕೇಂದ್ರದ ಜೆಬಿಟಿ ಹನುಮೇಶ ಮಾತನಾಡಿದರು.ಪ್ರಾಂಶುಪಾಲ ಡಾ. ಗಣಪತಿ ಕೆ. ಲಮಾಣಿ ಅಧ್ಯಕ್ಷತೆ ವಹಸಿದ್ದರು. ಗ್ಯಾರಂಟಿ ಯೋಜನೆ ಪ್ರಾಧಿಕಾರ ತಾಲೂಕು ಸದಸ್ಯ ಮಾನ್ವಿ ಪಾಶಾ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರದೀಪಕುಮಾರ ಯು., ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಅಶೋಕಕುಮಾರ, ಗ್ರಂಥಪಾಲಕ ಡಾ. ಮಲ್ಲಿಕಾರ್ಜುನ ಬಿ., ಉದ್ಯೋಗ ವಿನಿಮಯ ಕೇಂದ್ರದ ಆಪ್ತ ಸಮಾಲೋಚಕಿ ದುರ್ಗಾ ಶ್ಯಾನಬೋಗರ, ವಿದ್ಯಾರ್ಥಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ