ಸ್ವಾವಲಂಬಿ ಬದುಕಿಗೆ ಗ್ಯಾರಂಟಿ ಯೋಜನೆ ಜಾರಿ

KannadaprabhaNewsNetwork |  
Published : Jan 26, 2025, 01:31 AM IST
ಗಜೇಂದ್ರಗಡ ಸಮೀಪದ ದಿಂಡೂರು ಗ್ರಾಮದಲ್ಲಿ ಶಾಸಕ ಜಿ.ಎಸ್.ಪಾಟೀಲ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ದೇಶ ಹಾಗೂ ರಾಜ್ಯದಲ್ಲಿ ಜನರ ಆಶೋತ್ತರಗಳಿಗೆ ಪೂರಕವಾಗಿ ಆಡಳಿತ ನಡೆಸುತ್ತಾ ಬಂದಿರುವ ಸರ್ಕಾರವೆಂದರೆ ಅದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು

ಗಜೇಂದ್ರಗಡ: ಆರ್ಥಿಕ ಸಬಲತೆ ಜತೆಗೆ ಸ್ವಾವಲಂಬಿ ಜೀವನ ನಡೆಸಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆ ಟೀಕಿಸಿದ್ದ ವಿಪಕ್ಷಗಳೇ ನೆರೆಯ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿವೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಸಮೀಪದ ದಿಂಡೂರು ಗ್ರಾಮದಲ್ಲಿ ಕೇಂದ್ರ ರಸ್ತೆ ನಿಧಿ ₹೬ ಕೋಟಿ ಯೋಜನೆಯಡಿಯಲ್ಲಿ ಗಜೇಂದ್ರಗಡ-ಸೊರಬ ರಾಜ್ಯ ಹೆದ್ದಾರಿ ಹಾಗೂ ₹೭೦ ಲಕ್ಷ ವೆಚ್ಚದಲ್ಲಿ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ದೇಶ ಹಾಗೂ ರಾಜ್ಯದಲ್ಲಿ ಜನರ ಆಶೋತ್ತರಗಳಿಗೆ ಪೂರಕವಾಗಿ ಆಡಳಿತ ನಡೆಸುತ್ತಾ ಬಂದಿರುವ ಸರ್ಕಾರವೆಂದರೆ ಅದು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು. ದೇಶದ ಸ್ವಾತಂತ್ರ್ಯದಿಂದ ಹಿಡಿದು ಇಂದಿನವರೆಗೂ ಅಭಿವೃದ್ಧಿ ಜತೆಗೆ ಸರ್ವ ಸಮುದಾಯಗಳ ಆರ್ಥಿಕ ಗುಣಮಟ್ಟ ಸುಧಾರಣೆಗೆ ಮತ್ತು ಸ್ವಾವಲಂಭಿ ಯೋಜನೆ ಜಾರಿಗೆ ತರಲು ಕಾಂಗ್ರೆಸ್ ಸರ್ಕಾರಗಳು ಎಂದಿಗೂ ಹಿಂದೇಟು ಹಾಕಿಲ್ಲ. ಸಿಎಂ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಚುನಾವಣೆಗೂ ಮುನ್ನ ಘೋಷಿಸಿದ್ದ ಗ್ಯಾರಂಟಿ ಯೋಜನೆ ಜಾರಿಗೆ ತಂದಾಗ ವಿಪಕ್ಷಗಳು ಟೀಕಿಸಿದ್ದವು. ಆದರೆ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಹಸನಾಗುತ್ತದೆ ಎನ್ನುವದನ್ನು ಬಲವಾಗಿ ನಂಬಿರುವ ಕಾಂಗ್ರೆಸ್ ಸರ್ಕಾರವು ವಿಪಕ್ಷಗಳ ಟೀಕೆ ಕಡೆಗಣಿಸಿ ರಾಜ್ಯದ ಜನತೆಯ ಹಿತ ಹಾಗೂ ಅಭಿವೃದ್ಧಿಗಾಗಿ ಯೋಜನೆ ನಿಲ್ಲಿಸಲ್ಲ ಎಂದು ಸ್ಪಷ್ಟ ಪಡಿಸಿದ್ದೇವು. ಆದರೆ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಗ್ಯಾರಂಟಿ ಯೋಜನೆಯ ಬಗ್ಗೆ ಅಪಸ್ವರ ಎತ್ತಿದ್ದರು. ನೆರೆಯ ರಾಜ್ಯದಲ್ಲಿನ ಚುನಾವಣೆಯಲ್ಲಿ ವಿಪಕ್ಷಗಳು ಸಹ ಗ್ಯಾರಂಟಿ ಯೋಜನೆಗಳ ಮಾದರಿಯಲ್ಲಿ ಚುನಾವಣಾ ಪ್ರಣಾಳಿಕೆ ಘೋಷಿಸಿವೆ. ಹಾಗಾದರೆ ಬಿಜೆಪಿ ಘೋಷಿಸಿದರೆ ಸರಿ, ಕಾಂಗ್ರೆಸ್ ಘೋಷಿಸಿದರೆ ತಪ್ಪು ಎನ್ನುವ ಮನಸ್ಥಿತಿಯಲ್ಲಿರುವ ವಿಪಕ್ಷಗಳ ನಾಯಕರು ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಸಹ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೈಗೊಳ್ಳುತ್ತಿದೆ. ಈ ದೆಸೆಯಲ್ಲಿ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದ್ದು, ದಿಂಡೂರು ಗ್ರಾಮದಲ್ಲಿ ಇಂದು ₹೬ ಕೋಟಿ ವೆಚ್ಚದಲ್ಲಿ ೧೦ ಕಿಮೀ ರಸ್ತೆ ಡಾಂಬರೀಕರಣ ಪಂಚಾಯತ್ ರಾಜ್ ಇಲಾಖೆ ₹ ೭೦ ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ ದಿಂಡೂರು ಕ್ರಾಸ್‌ದಿಂದ ಮುಶಿಗೇರಿ ವರೆಗೆ ಆಯ್ದ ಭಾಗಗಳಲ್ಲಿ ರಸ್ತೆ ಡಾಂಬರೀಕರಣ ₹೫.೦೯ ಕೋಟಿ ವೆಚ್ಚದಲ್ಲಿ ನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ. ₹ ೭೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಲಾಗಿದೆ ಎಂದರು.

ಈ ವೇಳೆ ವಿ.ಆರ್. ಗುಡಿಸಾಗರ, ಎಚ್.ಎಸ್. ಸೋಂಪುರ, ಸಿ.ಬಿ. ಪಾಟೀಲ, ಬಸವರಾಜ ಬಿಂಗಿ, ಕೆ.ಡಿ.ಕಂಬಳಿ, ಪರಸ್ಪರ ರಾಠೋಡ, ಶರಣಪ್ಪ ಸಜ್ಜನರ, ರಾಮಲಿಂಗಪ್ಪ ಲಕ್ಕಲಕಟ್ಟಿ, ಅಪ್ಪಣ್ಣ ಮುಜಾವರ, ರಾಮಚಂದ್ರ ಹುದ್ದಾರ, ಸುರೇಶಗೌಡ ಪಾಟೀಲ, ಬಸವರಾಜ ಆಡಿನ, ಮಲ್ಲೇಶ ಹೊಸಳ್ಳಿ, ಶರಣು ಪೂಜಾರ, ಷರೀಪ ಸೌದಾಗರ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ