ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿದ ಗ್ಯಾರಂಟಿ ಯೋಜನೆ: ಶಾಸಕ ಜಿ.ಎಸ್. ಪಾಟೀಲ

KannadaprabhaNewsNetwork |  
Published : Oct 08, 2025, 01:01 AM IST
ಪೋಟೊ ಕ್ಯಾಪ್ಸನ್: ಡಂಬಳ ಹೋಬಳಿಯ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ  ಮುಖ್ಯಮಂತ್ರಿ ವಿಶೇಷ ಅನುದಾನದಡಿ  ₹20ಲಕ್ಷ ರು ಕಪ್ಪತ್ತಗಿರಿ ರಸ್ತೆಯಲ್ಲಿರುವ ಶ್ರೀ ಯಲ್ಲಮ್ಮನ ದೇವಸ್ಥಾನಕ್ಕೆ ಕೊಳವೆ ಮಾರ್ಗ ಅಳವಡಿಕೆ ವಿದ್ಯುತ್ತಿಕರಣ ಮಾಡುವುದು. ₹76ಲಕ್ಷ ರು ಶ್ರೀ ಬೀರಲಿಂಗೇಶ್ವರ ಗುಡಿಯ ಸುತ್ತಲೂ ಸಿ.ಸಿ ರಸ್ತೆ ನಿರ್ಮಾಣ.₹15ಲಕ್ಷ ಕೆರೆಯ ಸುತ್ತ ಮೆಸ್ (ಜಾಲರಿ ಹಾಕಿ) ರಕ್ಷಣಾತ್ಮಕವಾಗಿ ಅಭಿವೃದ್ಧಿಗೆ ಗುದ್ಲಿ ಪೂಜೆ ಸಲ್ಲಿಸಿದ ಶಾಸಕ ಜಿ.ಎಸ್.ಪಾಟೀಲ.ಪೋಟೊ ಕ್ಯಾಪ್ಸನ್: ಬಸಾಪುರ ಗ್ರಾಮದಲ್ಲಿ ಗ್ರಂಥಾಲಯ, ಶಾಲಾ ಮೇಲ್ಛಾವಣಿ ನವೀಕರಣ ಕಟ್ಟಡ ಉದ್ಘಾಟಿಸಿದ ಶಾಸಕ ಜಿ.ಎಸ್.ಪಾಟೀಲ.ಪೋಟೊ ಕ್ಯಾಪ್ಸನ್:ಡಂಬಳ ಹೋಬಳಿಯ ಮುರಡಿ ತಾಂಡ ನಿವಾಸಿ  ಸರ್ಪಿಂಗ ಗೇಮನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಕಂಚಿನ ಪದಕ ಪಡೆದ ರಮೇಶ ಬೂದಿಹಾಳ ಯುವಕನಿಗೆ 1ಲಕ್ಷ ಚೆಕ್ಕನ್ನು ನೀಡದ ಶಾಸಕ ಜಿ.ಎಸ್.ಪಾಟೀಲ. | Kannada Prabha

ಸಾರಾಂಶ

ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಯಾರಿಗೂ ಲಂಚ ಕೊಡದೆ ನೇರವಾಗಿ ಜಾತಿ, ಮತ, ಪಂಥ ಎನ್ನದೆ ಎಲ್ಲರಿಗೂ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ.

ಡಂಬಳ: ಗ್ಯಾರಂಟಿ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಡಂಬಳ ಹೋಬಳಿಯ ಚಿಕ್ಕವಡ್ಡಟ್ಟಿ ಗ್ರಾಮದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ದೇಶದ, ಪ್ರತಿ ಗ್ರಾಮದಲ್ಲಿ ಗ್ರಂಥಾಲಯ, ಶಾಲಾ ಶೈಕ್ಷಣಿಕ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ. 2600 ಪುಸ್ತಕಗಳು ಇದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು, ಯುವಕರು ಸದುಪಯೋಗ ಪಡಿಸಿಕೊಳ್ಳಬೇಕು. ಓದುವಿಕೆಗೆ ಕೊನೆಯಿಲ್ಲ, ಓದು ಉತ್ತಮ ಸ್ಥಾನವನ್ನು ಕಲ್ಪಿಸುತ್ತದೆ ಎಂದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ಯಾರಿಗೂ ಲಂಚ ಕೊಡದೆ ನೇರವಾಗಿ ಜಾತಿ, ಮತ, ಪಂಥ ಎನ್ನದೆ ಎಲ್ಲರಿಗೂ ನೇರವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಕಾಂಗ್ರೆಸ್ ಯಾವಾಗಲೂ ಕಡುಬಡವರ, ರೈತರ, ಕಾರ್ಮಿಕರ ಪರವಾಗಿದೆ ಎಂದರು.

ಬಳಿಕ ಮುರಡಿ ಗ್ರಾಮದಲ್ಲಿ ಜನರ ಅಹವಾಲು ಆಲಿಸಿದರು. ಚಿಕ್ಕವಡ್ಡಟ್ಟಿ ಗ್ರಾಮದ ಆರೋಗ್ಯ ಕೇಂದ್ರಕ್ಕೆ ಸೂಕ್ತ ವೈದ್ಯರನ್ನು ನೇಮಿಸುವಂತೆ ಪೋನ್ ಕರೆ ಮೂಲಕ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಂಡರಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಡಿ. ಮೋರನಾಳ, ತಹಸೀಲ್ದಾರ್ ಯರಿಸ್ವಾಮಿ, ಇಒ ವಿಶ್ವನಾಥ ಹೊಸಮನಿ, ಸಮಾಜ ಕಲ್ಯಾಣ ಅಧಿಕಾರಿ ಉದಯಕುಮಾರ ಯಲಿವಾಳ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ಕೊಡ್ಲಿ, ಹಾರೂಗೇರಿ ಗ್ರಾಪಂ ಅಧ್ಯಕ್ಷೆ ಶಾಂತವ್ವ ಭರಮಕ್ಕನವರ, ಉಪಾಧ್ಯಕ್ಷೆ ರೇಖಾ ಭಜಂತ್ರಿ, ವಿ.ಬಿ. ಸೋಮನಕಟ್ಟಿಮಠ, ಯುಸುಫ್ ಈಟಗಿ, ಗೋಣಿಬಸಪ್ಪ ಕೊರ್ಲಹಳ್ಳಿ, ಮಹೇಶ ಗಡಗಿ, ಬಸವರಡ್ಡಿ ಬಂಡಿಹಾಳ, ಪುಲಕೇಶಗೌಡ ಪಾಟೀಲ, ಬಸವರಾಜ ಶಿರೋಳ, ಬಾಬು ಮೂಲಿಮನಿ, ರಾಜು ಡಾವಣಗೇರಿ, ಪ್ರಥಮದರ್ಜೆ ಗುತ್ತಿಗೆದಾರರಾದ ನಾಗರಾಜ ಸಜ್ಜನ, ಲಕ್ಷ್ಮಣ ಬಾದಾಮಿ, ಹಾಲೇಶ ಹಳ್ಳಿ, ಪ್ರಧಾನಿ ಕರಿ, ದೇವಪ್ಪ ಗೌರಿ, ಬಸಪ್ಪ ಮಾಯನ್ನವರ ಇತರರು ಇದ್ದರು.

PREV

Recommended Stories

ರಾಜ್ಯದಲ್ಲಿ 18500 ಶಿಕ್ಷಕರ ನೇಮಕ : ಮಧು ಬಂಗಾರಪ್ಪ
ವಾಯವ್ಯ ಸಾರಿಗೆಗೆ ಶೀಘ್ರ 700 ಹೊಸ ಬಸ್‌ : ಕಾಗೆ