ಬಡವರನ್ನು ಮುಖ್ಯವಾಹಿನಿಗೆ ತರಲು ಗ್ಯಾರಂಟಿ ಯೋಜನೆ ಸಹಕಾರಿ: ಶಾಸಕ ಜಿ.ಎಸ್. ಪಾಟೀಲ

KannadaprabhaNewsNetwork |  
Published : Apr 29, 2026, 02:30 AM IST
ಪೋಟೊ ಕ್ಯಾಪ್ಸನ್:ಡಂಬಳ ಹೋಬಳಿಯ ಹಾರೋಗೇರಿ ಗ್ರಾಮದಲ್ಲಿ  ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ, ಗದಗ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ  2024-25 ಆರ್.ಐ.ಡಿ.ಎಫ್   ಯೋಜನೆಯಡಿ ₹49ಲಕ್ಷದಡಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ.ಪೋಟೊ ಕ್ಯಾಪ್ಸನ್: ಡಂಬಳ ಹೋಬಳಿಯ ಹಾರೋಗೇರಿ ಗ್ರಾಮದಲ್ಲಿ ವಿಕಲಚೇತನರಿಗೆ ವೀಲ್ ಚೇರ ವಿತರಿಸಿದ ಶಾಸಕ ಜಿ.ಎಸ್.ಪಾಟೀಲ. | Kannada Prabha

ಸಾರಾಂಶ

ಡಾ. ಎಚ್.ಬಿ. ಹುಲಗಣ್ಣವರ ಮಾತನಾಡಿ, ರಾಜ್ಯ ಸರ್ಕಾರವು ಗ್ರಾಮೀಣ ಭಾಗದಲ್ಲಿ ಬಸ್, ವೈದ್ಯಕೀಯಕ್ಕೆ ಆದ್ಯತೆ ನೀಡುತ್ತಿದೆ. ಜತೆಗೆ ಜಾನುವಾರುಗಳ ಆರೋಗ್ಯಕ್ಕೂ ಪ್ರಾಧಾನ್ಯ ನೀಡುತ್ತಿದೆ ಎಂದರು.

ಡಂಬಳ: ಪಂಚ ಗ್ಯಾರಂಟಿಗಳ ಯೋಜನೆಗಳ ಮೂಲಕ ಜನರನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರಲು ಸರ್ಕಾರ ಶ್ರಮಿಸುತ್ತಿದೆ ಮತ್ತು ಕ್ಷೇತ್ರದ ಹಿತಕ್ಕಾಗಿ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದರು.

ಸಮೀಪದ ಹಾರೋಗೇರಿ ಗ್ರಾಮದಲ್ಲಿ ₹49 ಲಕ್ಷದಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ, ಪಿಂಚಣಿ ಆದೇಶ ಪ್ರತಿ, ಅಂಗವಿಕಲರಿಗೆ ವೀಲ್ ಚೇರ್‌ ವಿತರಿಸಿ ಮಾತನಾಡಿ, ₹150 ಕೋಟಿ ಯೋಜನೆಯಡಿ ಸರ್ಕಾರ ತೋಟಗಾರಿಕಾ ಕಾಲೇಜನ್ನು ಮಂಜೂರು ಮಾಡಿದೆ. ಕಾಲೇಜನ್ನು ಯಾವುದಾದರೂ ಖಾಸಗಿ ಕಟ್ಟಡದಲ್ಲಿ ಪ್ರಾರಂಭಿಸುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ. ಎಸ್ಸಿ ಕಾಲನಿಯಲ್ಲಿ ₹20 ಲಕ್ಷ, ಸರ್ಕಾರಿ‌ ಶಾಲೆಗೆ ಚಾವಣಿ ದುರಸ್ತಿಗೆ ₹4 ಲಕ್ಷ, ಮರುಳಸಿದ್ದೇಶ್ವರಕ್ಕೆ ₹5 ಲಕ್ಷ, ಡಂಬಳ ಕೆರೆಯ ಸೌಂದರೀಕರಣಕ್ಕೆ ₹5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.

ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಿಗಳು ಬಹಳ ಅಚ್ಚುಕಟ್ಟಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಮ್ಯ ಅವರು ಬಡವರ ಕುರಿತು ಅಪಾರ ಪ್ರೀತಿ ಹೊಂದಿದ್ದಾರೆ ಎಂದರು.ಡಾ. ಎಚ್.ಬಿ. ಹುಲಗಣ್ಣವರ ಮಾತನಾಡಿ, ರಾಜ್ಯ ಸರ್ಕಾರವು ಗ್ರಾಮೀಣ ಭಾಗದಲ್ಲಿ ಬಸ್, ವೈದ್ಯಕೀಯಕ್ಕೆ ಆದ್ಯತೆ ನೀಡುತ್ತಿದೆ. ಜತೆಗೆ ಜಾನುವಾರುಗಳ ಆರೋಗ್ಯಕ್ಕೂ ಪ್ರಾಧಾನ್ಯ ನೀಡುತ್ತಿದೆ ಎಂದರು.

ಮುಂಡರಗಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ, ತಹಸೀಲ್ದಾರ್ ಯರಿಸ್ವಾಮಿ ಪಿ.ಎಸ್. ಮಾತನಾಡಿದರು. ಕಾರ್ಯಕ್ರಮದಲ್ಲಿ‌ ವಕ್ಫ್‌ ಬೋರ್ಡ್ ಉಪಾಧ್ಯಕ್ಷ ಯುಸೂಫ್ ಈಟಿ, ಭುವನೇಶ್ವರಿ ಕಲ್ಲಿಕುಟಿಗರ, ಪುಲಕೇಶಗೌಡ ಪಾಟೀಲ, ಬಸವರಾಜ ಕಣವಿ, ತಿಪ್ಪಣ್ಣ ಬಜಮ್ಮನವರ, ಬಸವರಡ್ಡಿ ಬಂಡಿಹಾಳ, ಗೌಸುಸಾಬ್ ಡಂಬಳ, ಪರತಗೌಡ ಪಾಟೀಲ, ಮಹೇಶ ಗಡಗಿ, ಗೋಣಿಬಸಪ್ಪ ಕೊರ್ಲಹಳ್ಳಿ, ಮಲ್ಲಿಕಾರ್ಜುನ ಪ್ಯಾಟಿ, ಸುರೇಶ ಗಡಗಿ, ಬಾಬುಸಾಬ ಮೂಲಿಮನಿ, ಮಾರುತಿ ಹೊಂಬಳ, ರವಿ ಜವಿ, ಬಶೀರಸಾಬ ಒಡ್ಡಟ್ಟಿ, ಮನೋಜಗೌಡ ಪಾಟೀಲ್, ಭೀಮಪ್ಪ ಗದಗಿನ, ಬಸವರಾಜ ಕಣವಿ‌, ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಪಂಚ ಗ್ಯಾರಂಟಿ ದೇಶದೆಲ್ಲೆಡೆ ಅನುಷ್ಠಾನ: ಶರಣಪ್ಪ ಬೆಟಗೇರಿ
ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸಲು ಆಗ್ರಹ