ಗ್ಯಾರಂಟಿ ಯೋಜನೆಗಳು ಎಲ್ಲ ಜನಸಾಮಾನ್ಯರಿಗೆ ತಲುಪಿಸಲಾಗುತ್ತಿದೆ : ಎಂ. ಎಲ್.ದಿನೇಶ್

KannadaprabhaNewsNetwork |  
Published : Dec 02, 2024, 01:21 AM ISTUpdated : Dec 02, 2024, 11:53 AM IST
1ಕೆಎಂಎನ್ ಡಿ14 | Kannada Prabha

ಸಾರಾಂಶ

ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜೋತಿ, ಯುವನಿಧಿ ಯೋಜನೆಗಳು ಸರ್ಕಾರದಿಂದ ಮೇಲ್ವಿಚಾರಣೆ ಸಮಿತಿಯಿಂದ ಅರ್ಹ ಫಲಾನುಭವಿಗಳುಪರಿಪೂರ್ಣವಾಗಿ ಸದುಪಯೋಗ ಪಡೆದುಕೊಂಡಿರುವ ಬಗ್ಗೆ ಸಮಿತಿ ಮಾಹಿತಿ ಪಡೆಯಲಿದೆ.

 ಶ್ರೀರಂಗಪಟ್ಟಣ : ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಸದ್ಬಳಕೆ, ಅನುಷ್ಠಾನಕ್ಕಾಗಿ ಎಲ್ಲಾ ಅರ್ಹ ಜನ ಸಾಮಾನ್ಯರಿಗೆ ತಲುಪಿಸಲು ಕ್ರಮ ವಹಿಸಲಾಗುತ್ತಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್ ಹೇಳಿದರು.

ಪಟ್ಟಣದ ಶ್ರೀರಂಗನಾಥ ದೇವಾಲಯದ ಬಳಿ ಶ್ರೀರಂಗ ಸ್ನೇಹ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ತಾಲೂಕು ಮಟ್ಟದ ಅಧಿಕಾರಿಗಳು, ಉಸ್ತುವಾರಿ ಸಮಿತಿ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಜೋತಿ, ಯುವನಿಧಿ ಯೋಜನೆಗಳು ಸರ್ಕಾರದಿಂದ ಮೇಲ್ವಿಚಾರಣೆ ಸಮಿತಿಯಿಂದ ಅರ್ಹ ಫಲಾನುಭವಿಗಳುಪರಿಪೂರ್ಣವಾಗಿ ಸದುಪಯೋಗ ಪಡೆದುಕೊಂಡಿರುವ ಬಗ್ಗೆ ಸಮಿತಿ ಮಾಹಿತಿ ಪಡೆಯಲಿದೆ ಎಂದರು.

ಪಟ್ಟಣ ಹಾಗೂ ಗ್ರಾಪಂ ಮಟ್ಟದಿಂದಲೂ ಯೋಜನೆಗಳ ಸಮರ್ಪಕತೆ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕೆಂದು ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ಕೇಳಲಾಗಿದ್ದು, ಇದರಲ್ಲಿ ವಿಳಂಬವಾಗಿದ್ದರೆ ಪ್ರತಿಯೊಬ್ಬರಿಗೆ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ದೊರಕಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.

ಈ ವೇಳೆ ಪುರಸಭೆ ಸದಸ್ಯರಾದ ಎಸ್.ಎನ್.ದಯಾನಂದ್, ಮಾಜಿ ಅಧ್ಯಕ್ಷ ಎಲ್.ನಾಗರಾಜು, ಮಾಜಿ ಸದಸ್ಯ ಟಿ.ಕೃಷ್ಣ, ಮುಖಂಡರಾದ ಬಾಲು, ಲೋಕೇಶ್, ಸುಬ್ರಮಣ್ಯ, ಮಲ್ಲರಾಜ ಅರಸ್, ಪರಮೇಶ್, ಪೂರ್ಣ , ಮಂಜು, ರವಿ, ಕುಮಾರ್ , ಶಿವಮಲ್ಲು ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್‌ ಗೆಲ್ಲುತ್ತೆ: ಸುರ್ಜೇವಾಲಾ ವಿಶ್ವಾಸ
ದಾವಣಗೆರೆ ಟಿಕೆಟ್‌ ಘೋಷಣೆ ಮುನ್ನವೇ ಕೈ ನಾಮಪತ್ರ