ಗ್ಯಾರಂಟಿಗಳಿಂದ ಗ್ರಾಮೀಣ ಮಹಿಳೆಯರಿಗೆ ನೆರವು

KannadaprabhaNewsNetwork |  
Published : Nov 29, 2025, 12:15 AM IST
28ಎಚ್ಎಸ್ಎನ್5 : ಗ್ಯಾರಂಟಿ ಅನುಷ್ಟಾನ ಸದಸ್ಯ ಮಹೇಶ್  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕಿ ಶಾಂತಮ್ಮ ಮಾತನಾಡಿ, ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿಯಿಂದ ಬೇಸತ್ತಿದ್ದು, ಆನೆಗಳು ಮನೆ ಬಾಗಿಲಿಗೆ ಬರುತ್ತಿವೆ ಅಲ್ಲಿನ ಜನರೆಲ್ಲಾ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಆತಂಕದಿಂದ ಇದ್ದಾರೆ. ಚುನಾವಣೆ ಪೂರ್ವದಲ್ಲಿ ಸುರೇಶ್ ಹಾಗೂ ಪತ್ನಿ ಸೆರಗೊಡ್ಡಿ ಮತ ನೀಡಿ ಎಂದು ಬೇಡಿದ್ದರು. ಆದರೆ ಇಂದು ನಾವು ರಸ್ತೆ ಕೆರೆ, ಆನೆಗಳ ಸಮಸ್ಯೆ ಬಗೆಹರಿಸಿ ಎಂದು ಸೆರಗೊಡ್ಡಿ ಬೇಡುವ ಸ್ಥಿತಿಗೆ ಬಂದಿದ್ದೇವೆ. ಅಂದು ಮತ ಕೇಳಲು ಬಂದವರು ಇಲ್ಲಿಯತನಕ ತಲೆ ಹಾಕಿಲ್ಲ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರುಪಂಚ ಗ್ಯಾರಂಟಿ ಯೋಜನೆಗಳಿಂದ ಗ್ರಾಮಾಂತರ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ, ಬಡ ಕುಟುಂಬಗಳ ಫಲಾನುಭವಿಗಳಿಗೆ ಅನುಕೂಲವಾಗಿದೆ ಎಂದು ಗ್ಯಾರಂಟಿ ಅನುಷ್ಠಾನ ಸದಸ್ಯ ಮಹೇಶ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಅಡಿಯಲ್ಲಿ ಅಧಿಕಾರಕ್ಕೆ ಬಂದಿದ್ದು ಎಲ್ಲಾ ಫಲಾನುಭವಿಗಳಿಗೆ ಸರಿಯಾಗಿ ಯೋಜನೆಗಳು ತಲುಪುತ್ತಿದೆ‌. ಇದರಿಂದ ಸಾಕಷ್ಟು ಜನ ಮಹಿಳೆಯರು ಸಂತೃಪ್ತಿಗೊಂಡಿದ್ದಾರೆ ಶಕ್ತಿ ಯೋಜನೆಯಿಂದ ಬಡ ಕುಟುಂಬದಲ್ಲಿ ಬೆಳಕು ಕಾಣುತ್ತಿದೆ ಇದಕ್ಕಾಗಿ ನಾವು ಮುಖ್ಯಮಂತ್ರಿ ಹಾಗೂ ಡಿಕೆಶಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜಿಲ್ಲೆಯ ಎಲ್ಲಾ ತಾಲೂಕಿನ ರಸ್ತೆಗಳು, ಕೆರೆಗಳು ಅಭಿವೃದ್ಧಿ ಕಾಣುತ್ತಿವೆ. ಆದರೆ ನಮ್ಮ ರಸ್ತೆಗಳ, ಸ್ಥಿತಿ ನೋಡಲು ಅಸಾಧ್ಯ, ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ಅದನ್ನು ಸರಿಪಡಿಸಲು ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಗ್ಯಾರಂಟಿಗಳನ್ನು ಅನ್ಯ ರಾಜ್ಯದವರು ಕಾಪಿ ಮಾಡಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ ಎಂದರು.

ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕಿ ಶಾಂತಮ್ಮ ಮಾತನಾಡಿ, ಮಲೆನಾಡು ಭಾಗದಲ್ಲಿ ಆನೆಗಳ ಹಾವಳಿಯಿಂದ ಬೇಸತ್ತಿದ್ದು, ಆನೆಗಳು ಮನೆ ಬಾಗಿಲಿಗೆ ಬರುತ್ತಿವೆ ಅಲ್ಲಿನ ಜನರೆಲ್ಲಾ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಆತಂಕದಿಂದ ಇದ್ದಾರೆ. ಚುನಾವಣೆ ಪೂರ್ವದಲ್ಲಿ ಸುರೇಶ್ ಹಾಗೂ ಪತ್ನಿ ಸೆರಗೊಡ್ಡಿ ಮತ ನೀಡಿ ಎಂದು ಬೇಡಿದ್ದರು. ಆದರೆ ಇಂದು ನಾವು ರಸ್ತೆ ಕೆರೆ, ಆನೆಗಳ ಸಮಸ್ಯೆ ಬಗೆಹರಿಸಿ ಎಂದು ಸೆರಗೊಡ್ಡಿ ಬೇಡುವ ಸ್ಥಿತಿಗೆ ಬಂದಿದ್ದೇವೆ. ಅಂದು ಮತ ಕೇಳಲು ಬಂದವರು ಇಲ್ಲಿಯತನಕ ತಲೆ ಹಾಕಿಲ್ಲ, ಅಭಿವೃದ್ಧಿ ಮಾಡುತ್ತಾರೆ ಎಂದು ಭರವಸೆ ಮೇಲೆ ಮತ ನೀಡಿದ್ದೇವೆ ಹೊರತು ಪಕ್ಷ ನೋಡಿ ಅಲ್ಲ, ಅದನ್ನು ಹುಸಿ ಮಾಡಿದ್ದಾರೆ, ಮುಂದಿನ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ತಾಲೂಕಿನಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ಪವಿತ್ರ, ಮಂಜುಳ, ಪ್ರೇಮ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ : ಡಿಕೆ ಸಿಡಿಮಿಡಿ ! - ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ ?
ಎಂದಿಗೂ ಬೆನ್ನಿಗೆ ಚೂರಿ ಹಾಕಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌