ಹೊಸಕೋಟೆ: ವ್ಯವಹಾರದಲ್ಲಿ ನಷ್ಟವಾದ್ದರಿಂದ ಮನನೊಂದ ಯುವಕನೊಬ್ಬ ಸಿಂಗಲ್ ಬ್ಯಾರಲ್ ಗನ್‌ನಿಂದ ಫೈರಿಂಗ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಸೊಮವಾರ ಬೆಳಿಗ್ಗೆ ನಡೆದಿದೆ. ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ದೇವಿಶೆಟ್ಟಿಹಳ್ಳಿ ಬೈಯೇಶ್(28) ಫೈರಿಂಗ್ ಮಾಡಿಕೊಂಡು ಮೃತಪಟ್ಟಿರುವ ಯುವಕ.
ಕುಟುಂಬಸ್ಥರೆಲ್ಲ ತಿರುಪತಿ ಪ್ರವಾಸಕ್ಕೆ ತೆರಳಿದ್ದರು. ಪ್ರವಾಸ ಮುಗಿಸಿ ಸೋಮವಾರ ಬೆಳಗ್ಗೆ ಮನೆಗೆ ಬಂದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಮಧ್ಯಾಹ್ನ ಯುವಕನ ಅಂತ್ಯಕ್ರಿಯೆ ದೇವಶೆಟ್ಟಿಹಳ್ಳಿ ಗ್ರಾಮದಲ್ಲಿ ಜರುಗಿತು.
ಪೋಷಕರು ನೀಡಿದ ದೂರಿನ ಮೇರೆಗೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಫೋಟೊ: 12 ಹೆಚ್‌ಎಸ್‌ಕೆ 3ಆತ್ಮಹತ್ಯೆ ಮಾಡಿಕೊಂಡ ಯುವಕ ಬೈಯೇಶ್