ಗುಂಡ್ಲುಪೇಟೆ: ಕಳೆದ ೨೦ ದಿನಗಳಿಂದ ಇಲ್ಲಿನ ಆಹಾರ ಇಲಾಖೆಗೆ ಅಧಿಕಾರಿಗಳು, ಸಿಬ್ಬಂದಿ ಇಲ್ಲದೆ ಬೀಗ ಬಿದ್ದಿತ್ತು. ಕನ್ನಡಪ್ರಭ ವರದಿ ಬೆನ್ನಲ್ಲೇ ಸೆ.೩೦ ರ ಸೋಮವಾರ ಆಹಾರ ಇಲಾಖೆ ಕಚೇರಿ ಕೆಲಸ ಆರಂಭಿಸಿದೆ.
ಕನ್ನಡಪ್ರಭಕ್ಕೆ ಮೆಚ್ಚುಗೆ: ಸಾರ್ವಜನಿಕರ ಪರವಾದ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದು ಕಳೆದ ೨೦ ದಿನಗಳಿಂದ ಅನಾಥವಾಗಿದ್ದ ಆಹಾರ ಇಲಾಖೆ ಕಚೇರಿ ಬಾಗಿಲು ತೆರೆಸಿದ ಕನ್ನಡಪ್ರಭಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ವಾರದಲ್ಲಿ ೩ ದಿನ ಬರ್ತಾರೆ!: ೨೦ ದಿನಗಳಿಂದ ಬಾಗಿಲು ಬಂದಾಗಿದ್ದ ಆಹಾರ ಇಲಾಖೆಗೆ ಕೊನೆಗೂ ಆಹಾರ ನಿರೀಕ್ಷಕರೊಬ್ಬರನ್ನು ಪ್ರಭಾರ ಆಹಾರ ನಿರೀಕ್ಷಕರಾಗಿ ನೇಮಕಗೊಂಡಿದ್ದಾರೆ, ಆದರೆ ಇವರು ವಾರದಲ್ಲಿ ಮೂರು ದಿನ ಮಾತ್ರ ಬರಲಿದ್ದಾರೆ. ಕೊಳ್ಳೇಗಾಲ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಪ್ರಸಾದ್‌ರನ್ನು ಗುಂಡ್ಲುಪೇಟೆ ಆಹಾರ ನಿರೀಕ್ಷಕರಾಗಿ ಪ್ರಭಾರ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಕೊಳ್ಳೇಗಾಲದಲ್ಲೂ ಕೆಲಸ ಮಾಡಬೇಕು, ಗುಂಡ್ಲುಪೇಟೆಯಲ್ಲಿ ಕೆಲಸ ಮಾಡಬೇಕಿರುವ ಕಾರಣ ವಾರದ ಸೋಮವಾರ, ಬುಧವಾರ, ಶುಕ್ರವಾರ ಗುಂಡ್ಲುಪೇಟೆಯಲ್ಲಿ ಕೆಲಸ ಮಾಡಲಿದ್ದಾರೆ. ಕೊಳ್ಳೇಗಾಲದಲ್ಲಿ ಮಂಗಳವಾರ, ಗುರುವಾರ, ಶನಿವಾರ ಕೆಲಸ ಮಾಡಲು ನಿಯೋಜನೆ ಆಗಿದೆ ಎಂದು ಆಹಾರ ನಿರೀಕ್ಷಕ ಎನ್.ಎಂ.ಪ್ರಸಾದ್ ಕನ್ನಡಪ್ರಭಕ್ಕೆ ತಿಳಿಸಿದರು.