ಕನ್ನಡಪ್ರಭದ ಸರಣಿ ವರದಿಗೆ ಸಿಕ್ಕ ಫಲ । ಮೂವರು ಒತ್ತುವರಿದಾರರಿಗೆ ನೋಟಿಸ್
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಇಲ್ಲಿನ ಹಿರೀಕಾಟಿ ಎಂಬಲ್ಲಿ ಸರ್ಕಾರಿ ಖರಾಬು ಜಾಗ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡಪ್ರಭ ಪ್ರಕಟಿಸಿದ್ದ ಸರಣಿ ವರದಿ ಫಲಕೊಟ್ಟಿದೆ. ‘ಕನ್ನಡಪ್ರಭ’ದ ವರದಿ ತರುವಾಯ ಎಚ್ಚೆತ್ತ ತಾಲೂಕು ಆಡಳಿತ ಮೂವರು ಒತ್ತುವರಿದಾರರಿಗೆ ನೋಟಿಸ್ ಜಾರಿ ಮಾಡಿದೆ. 7 ದಿನಗಳ ಒಳಗಾಗಿ ಒತ್ತುವರಿ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಹಸೀಲ್ದಾರ್ ಎಂ.ಎಸ್. ತನ್ಮಯ್ ಆದೇಶಿಸಿದ್ದಾರೆ. ಈ ಮೂಲಕ ಕಬಳಿಕೆಕೋರರಿಗೆ ಶಾಕ್ ನೀಡಿದ್ದಾರೆ.ಹಿರೀಕಾಟಿ ಗ್ರಾಮದ ಸ.ನಂ.199ರಲ್ಲಿ ಸರ್ಕಾರಿ ಕಟ್ಟೆ ಖರಾಬು ಜಮೀನಿನನ್ನು ಮೂವರು ಒತ್ತುವರಿ ಮಾಡಿಕೊಂಡಿದ್ದಾರೆಂದು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 104ರ ಪ್ರಕಾರ ಜೂ.22ರಂದು ನೋಟಿಸ್ ಜಾರಿ ಮಾಡಿದ್ದಾರೆ. ಬೇಗೂರು ರಾಜಸ್ವ ನಿರೀಕ್ಷಕ ಉಲ್ಲಾಸ್ ಅವರು ನೀಡಿದ ವರದಿಯಾಧರಿಸಿ ಕ್ರಮ ಕೈಗೊಳ್ಳಲಾಗಿದೆ.ತೆರವು ಮಾಡಲು ತಪ್ಪಿದ್ದಲ್ಲಿ ಭೂ ಕಂದಾಯ ಕಾಯ್ದೆ ಪ್ರಕಾರ ಕ್ರಮ ವಹಿಸಲಾಗುವುದು ಎಂದು ತಹಸೀಲ್ದಾರ್ ಎಚ್ಚರಿಸಿದ್ದಾರೆ.
ಜೂ.9ರಂದು ‘ಹಿರೀಕಾಟಿ ಸರ್ಕಾರಿ ಕಟ್ಟೆ ಜಾಗವೇ ಕ್ರಷರ್ ರಸ್ತೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ದಿನವೇ ತಹಸೀಲ್ದಾರ್ ಎಂ.ಎಸ್. ತನ್ಮಯ್ ಅವರು ವರದಿ ಗಮನಿಸಿ, 3 ದಿನದಲ್ಲಿ ವರದಿಗೆ ಸೂಚನೆ ನೀಡಿ, ಒತ್ತುವರಿ ಸ್ಥಳ ಸಮೀಕ್ಷೆಗೆ ಸೂಚಿಸಿದ್ದರು.
ಈ ಸಂಬಂಧ ಜೂ.22ರಂದು ಸಹ ‘ಹಿರೀಕಾಟಿ ಸರ್ಕಾರಿ ಕಟ್ಟೆ ಒತ್ತುವರಿ ಸಾಬೀತು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಪ್ರಕ್ರಿಯೆಯನ್ನು ಹಿಂಬಾಲಿಸಿತ್ತು.
---೨೫ಜಿಪಿಟಿ೩ಸರ್ಕಾರಿ ಕಟ್ಟೆ ಜಾಗ ಒತ್ತುವರಿ ಮಾಡಿಕೊಂಡವರಿಗೆ ಜೂ.೨೨ ರಂದು ನೋಟೀಸ್ ಜಾರಿಯಾಗಿರುವುದು.೨೫ಜಿಪಿಟಿ೪ಕಳೆದ ಜೂ.೯ ರ ಕನ್ನಡಪ್ರಭ ʼಹಿರೀಕಾಟಿ ಸರ್ಕಾರಿ ಕಟ್ಟೆ ಜಾಗವೇ ಕ್ರಷರ್ ರಸ್ತೆʼ ಎಂದು ವರದಿ ಪ್ರಕಸಿತ್ತು.೨೫ಜಿಪಿಟಿ೫ಜೂ.೧೦ ರ ಕನ್ನಡಪ್ರಭ ಹಿರೀಕಾಟಿ ಸ್ಥಳ ಒತ್ತುವರಿ : ೩ ದಿನದಲ್ಲಿ ವರದಿಗೆ ಸೂಚನೆ ಎಂದು ವರದಿ ಪ್ರಕಟಿಸಿತ್ತು.೨೫ಜಿಪಿಟಿ೬ಜೂ.೨೨ ರ ಕನ್ನಡಪ್ರಭ ಹಿರೀಕಾಟಿ ಸರ್ಕಾರಿ ಕಟ್ಟೆ ಒತ್ತುವರಿ ಸಾಬೀತು ಎಂದು ವರದಿ ಪ್ರಕಟಿಸಿತ್ತು.