ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದಲ್ಲಿ ಕಳೆದ ೪೮ ದಿನಗಳಿಂದ ನಡೆಯುತ್ತಿರುವ ಧರಣಿ ಸ್ಥಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ೧೫ ದಿನದ ಹಿಂದೆ ಸಫಾರಿ ಕೇಂದ್ರದ ಮುಂದೆ ರೈತಸಂಘದ ನಡೆಸಿದ ಹೋರಾಟದಲ್ಲಿ ಅ.೧೦ ರೊಳಗೆ ತಹಸೀಲ್ದಾರ್ ಲಾಗಿನ್‌ನಲ್ಲಿರುವ ರೈತರ ಹಕ್ಕುಪತ್ರ, ಸಾಗುವಳಿ ಫೈಲ್‌ಗಳಿಗೆ ಎನ್‌ಒಸಿ ನೀಡಿ ಕ್ಲಿಯರ್ ಎಂದು ಅರಣ್ಯ ಇಲಾಖೆ ಎಸಿಎಫ್ ಭರವಸೆ ನೀಡಿದ್ದರು. ಆದರೆ ಇಂದಿನವರೆಗೂ ಒಂದು ಫೈಲ್ ಬಂದಿಲ್ಲ ಎಂದು ಆರೋಪಿಸಿದರು.
ಬೆಳವಾಡಿ ಗ್ರಾಮದ ಸರ್ವೆ ನಂ.20 ರ 279 ಎಕರೆಯಲ್ಲಿ 1991ರಲ್ಲಿ 9 ಜನರಿಗೆ ಸಾಗುವಳಿ ವಿತರಣೆಯಾಗಿತ್ತು. 2002ರಲ್ಲಿ 178 ಎಕರೆ ಪರಿಭಾವಿತ ಅರಣ್ಯ,87 ಎಕರೆ ಗೋಮಾಳ ಎಂದು ಏಕಾಏಕಿ ನೋಟಿಫಿಕೇಶನ್ ಮಾಡಿ, 70 ವರ್ಷದಿಂದ ಉಳುಮೆ ಮಾಡುತ್ತಿರುವ ರೈತರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ತಡೆ ನೀಡುತ್ತಿರುವುದು ಖಂಡನೀಯ ಎಂದರು.ಸರ್ಕಾರ ಪ್ರತಿ ಜಿಲ್ಲೆಗೆ ೫೦ ಸಾವಿರ ನಿವೇಶನ ಗುರುತು ಮಾಡುವ ಹೆಸರಿನಲ್ಲಿ ಗೋಮಾಳ ಕಬಳಿಸುತ್ತಿದೆ. ಗೋಮಾಳದಲ್ಲಿ 250 ಎಕರೆ ಇದ್ದರೂ 100 ಎಕರೆ ಬೇಕು ಎಂದು ಎಲ್ಲವನ್ನೂ ಗೋಮಾಳವೆಂದು ತೋರಿಸಿ, ಉಳುಮೆ ಮಾಡುತ್ತಿರುವ ರೈತರನ್ನು ಎತ್ತಂಗಡಿ ಮಾಡುತ್ತಿದೆ ಎಂದು ಆರೋಪಿಸಿದರು.
ರೈತರ ಹೋರಾಟಕ್ಕೂ ಬಗ್ಗದಿದ್ದರೆ ಅತೀ ಶೀಘ್ರದಲ್ಲೆ ಪಟ್ಟಣಧಲ್ಲಿ ಬೃಹತ್ ರೈತ ಸಮಾವೇಶ ನಡೆಲಾಗುತ್ತದೆ ಅಲ್ಲದೆ ಅ.೧೭ರಿಂದ ಎನ್‌ಒಸಿ ಸಿಗುವವರೆಗೂ ಬಂಡೀಪುರ ಸಫಾರಿ ಬಂದ್ ಚಳುವಳಿ ಮಾಡಲಾಗುವುದು ಎಂದರು.
ಮುಂಬರುವ ಜಿಪಂ,ತಾಪಂ ಚುನಾವಣೆಯಲ್ಲಿ ರೈತ ವಿರೋಧಿಗಳಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಗುಡುಗಿದರು.