ಮುಳಗುಂದ: ವಿದ್ಯಾರ್ಥಿ ಜೀವನ ಸುಂದರ ಬದುಕು ನಿರ್ಮಾತೃ ಗುರು. ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದ ಬೆಳಕು ನೀಡಿದವರು ಗುರು. ಅವರ ಸ್ಮರಣೆ ನಿತ್ಯ ನಡೆಯಲಿ ಎಂದು ಧಾರವಾಡ ಮುರುಘಾಮಠ ಹಾಗೂ ಮುಳಗುಂದದ ಗವಿಮಠದ ಮಲ್ಲಿಕಾರ್ಜುನ ಸ್ವಾಮಿಗಳು ತಿಳಿಸಿದರು.ಭಾನುವಾರ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಎಸ್‍ಜೆಜೆಎಂ ಸಂಯುಕ್ತ ಪಪೂ ಮಹಾವಿದ್ಯಾಲಯದ 2001- 02ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಡಿದರು.
ಕೆ.ಎ. ಬಳಿಗೇರ ಮಾತನಾಡಿ, ಯಾವುದೇ ಸಾಧಕರನ್ನು ನೋಡಿದಾಗ ಅವರ ಹಿಂದೆ ಒಬ್ಬ ಗುರುವಿನ ಶ್ರಮವಿರುತ್ತದೆ. ಸಾಮಾನ್ಯ ವ್ಯಕ್ತಿಗಳನ್ನು ಅಸಾಮಾನ್ಯರನ್ನಾಗಿ ಮಾಡಿದವರು ಗುರುಗಳು. ಅವರ ಸ್ಮರಣೆ ಒಂದು ದಿನಕ್ಕೆ ಸೀಮಿತವಾಗದೇ ಗುರುವಿನ ಸ್ಮರಣೆ ನಿತ್ಯವಾಗಬೇಕು ಎಂದರು.ಕೆ.ಎಲ್. ಕರಿಗೌಡ್ರ ಮಾತನಾಡಿ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಣ ಕಲಿಯುವಾಗ ಕಲಿಸಿದ ಗುರುಗಳನ್ನು ಬದುಕಿನುದ್ದಕ್ಕೂ ಮರೆಯುವುದಿಲ್ಲ. ಅಂತಹ ಒಂದು ಗುರುಗಳಿಗೆ ಗೌರವ ಸಲ್ಲಿಸುವ ಪರಂಪರೆ, ಸಂಸ್ಕೃತಿ ಹೀಗೆ ಮುಂದುವರಿಯಬೇಕು ಎಂದರು.
ಕಲಿಸಿದ ಗುರುಗಳನ್ನು ಬಾಲಲೀಲಾ ಮಹಾಂತ ಶಿವಯೋಗಿಗಳ ಗವಿಮಠದಿಂದ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದವರೆಗೆ ವಿಶೇಷವಾಗಿ ಮೆರವಣಿಗೆ ಮಾಡುವ ಮೂಲಕ ಬರಮಾಡಿಕೊಂಡರು. ಶಿಕ್ಷಕರನ್ನು ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರನ್ನು ಸನ್ಮಾನಿಸಲಾಯಿತು. ಅಗಲಿದ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶ್ರದ್ದಾಂಜಲಿ ಅರ್ಪಿಸಿ ಮೌನಾಚರಣೆ ಮಾಡಲಾಯಿತು. ಈ ವೇಳೆ ಎಸ್.ಎಂ. ನೀಲಗುಂದ, ಡಾ. ಎಸ್.ಸಿ. ಚವಡಿ, ಬಿ.ಸಿ. ಬಡ್ನಿ, ಎಫ್.ಎಸ್. ಅಮೋಘಿಮಠ, ಎಸ್.ಸಿ. ಕುರ್ತಕೋಟಿ, ವಿಜಯ ನೀಲಗುಂದ, ಎಸ್.ಸಿ. ಕುರ್ತಕೋಟಿ, ಪಿ.ಎ. ವಂಟಕರ, ಪ್ರಾ. ಎ.ಎಂ. ಅಂಗಡಿ, ಮುಖ್ಯೋಪಾಧ್ಯಾಯ ಇ.ಎಂ. ಗುಳೇದಗುಡ್ಡ, ಬಿ.ಜಿ. ಯಳವತ್ತಿ, ವೈ.ಎಚ್. ಚಲವಾದಿ, ಎಚ್.ಎಂ. ಮಜ್ಜಿಗುಡ್ಡ, ಎಸ್,ಎಫ್. ಮುದ್ದಿನಗೌಡ್ರ ಸೇರಿದಂತೆ 2001- 02ನೇ ಸಾಲಿನ ವಿದ್ಯಾರ್ಥಿಗಳು ಇದ್ದರು.