ಕನ್ನಡಪ್ರಭ ವಾರ್ತೆ ಚಿತ್ತಾಪುರ
ಕಾಮಧೇನು ಎಂದರೆ ಗೋಮಾತೆ. ಇದರ ಆರಾಧನೆ ಪೂಜೆಯಿಂದ ಅಭಿಷ್ಟೇ ಪಡೆಯಬಹುದು, ಹಾಗೇಯೇ ರಾಯರ ಆರಾಧನೆಯಿಂದ ಎಲ್ಲಾ ಇಷ್ಟಾರ್ಥ ಬೇಡಿಕೆ ಪಡೆದುಕೊಳ್ಳಬಹುದು ಗುರುರಾಯರು ಸರ್ವರಿಗೆ ಕಾಮಧೇನು ಕಲ್ಪವೃಕ್ಷ ಎರಡೂ ಆಗಿದ್ದಾರೆ ಎಂದು ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಭಕ್ತರಿಗೆ ಸಂದೇಶ ನೀಡಿದರು.ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಪಟ್ಟಣದ ಪುರಾತನ ಮೂಲ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನು ಉದೇಶಿಸಿ ಮಾತನಾಡಿದರು. ಆಕಳು ಹೇಗೆ ಚಲಿಸುತ್ತಾ ಕರುವಿಗೆ ಹಾಲುಣಿಸುತ್ತದೆ ಹಾಗೇಯೇ ಎಲ್ಲೇಲ್ಲಿ ಭಕ್ತರಿದ್ದಾರೆ ಅವರಲ್ಲಿಗೆ ತೆರಳಿ ಉದ್ದಾರಗೊಳಿಸುತ್ತಾರೆ. ಕಲ್ಪವೃಕ್ಷ ಒಂದು ಕಡೆ ಇರುವ ದೇವಲೊಕದಲ್ಲಿರುವ ವೃಕ್ಷ ಪ್ರಾಥನೆ, ಭಜನೆಯಿಂದ ಎಲ್ಲಾ ಪ್ರಾಪ್ತಿ ರಾಯರ ಅನುಗ್ರಹದಿಂದ ಆಗುತ್ತದೆ ಎಂದರು.
ರಾಘವೇಂದ್ರ ಸ್ವಾಮಿ ಪೀಠದ ಭಕ್ತರ ಅಪೇಕ್ಷೆಯಂತೆ ಪ್ರಥಮ ಬಾರಿಗೆ ಆಗಮಿಸಿದ್ದೇವೆ. ತಮ್ಮೆಲ್ಲರ ಅಭಿಮಾನ ಅವರ ಭಕ್ತಿ, ಭವ್ಯ ಶೋಭಾಯಾತ್ರೆ, ಹನುಮ ಮಂದಿರದಿಂದ ಪ್ರಾರಂಭಿಸಿ ರಾಮದೇವನ ದರ್ಶನ ಮಾಡಿಸಿ ಸನ್ಮಾನಿಸಿದ್ದು ವಿಶೇಷವಾಗಿದೆ. ಈ ಭಾಗ ಅನೇಕ ಸಾಧು ಸಂತರ ಮಹಾತ್ಮರ ತಾಣ ಇಲ್ಲಿನ ಸಾಮಾರಸ್ಯ ಸಂತಸ ತಂದಿದೆ ಎಂದರು.ತುಂಗಾ ತೀರದಲ್ಲಿ ಸಶರೀರವಾಗಿ ಬೃಂದಾವನದಲ್ಲಿ ಇದ್ದುಕೊಂಡು ಅನುಗ್ರಹಿಸಿ ಇಷ್ಟಾರ್ಥ ಪೂರೈಸುತ್ತಾ ಕಷ್ಟ ಕಾರ್ಪಣ್ಯದೂರಮಾಡುತ್ತಾ ಯಾರು ಪೂಜಿಸುತ್ತಾರೋ ಅವರಿಗೆ ಬೇಡಿದ್ದನ್ನು ಪ್ರಾಪ್ತಿ ಮಾಡುತ್ತಾರೆ. ಗುರು ರಾಘವೇಂದ್ರರು ಒದು ಪ್ರಾಂತ ಒಂದು ಸಮುದಾಯದ ಗುರುಗಳಲ್ಲಾ ಎಲ್ಲಾ ಜನರಿಂದ ಪೂಜಿತರಾಗಿದ್ದಾರೆ ಎಲ್ಲಾ ಧರ್ಮದವರು ಅನುಯಾಯಿಗಳು ಹಂಬಲಿಸುವರು ಹಿಂದು, ಮುಸ್ಲಿಂ, ಕ್ರೈಸ್ತ ಸೇರಿ ಅನೇಕರು ಆರಾಧಿಸಿ ಅನುಗ್ರಹ ಪಡೆಯಬಹುದು ಎಂದರು.
ವಿದ್ವಾನ ಡಾ. ವಾದಿರಾಚಾರ್ಯರು ಮಾತನಾಡಿದರು. ಕಾರ್ಯಕ್ರಮದಲ್ಲಿ ತಾಲೂಕು ಬ್ರಾಹ್ಮಣ ಸಮಾಜ ಅಧ್ಯಕ್ಷ ಗಿರೀಶ ಜಾನಿಬ, ಗೌರವಾಧ್ಯಕ್ಷ ದೇವಿದಾಸ ಕುಲ್ಕರ್ಣಿ, ವಿಶ್ವನಾಥ ಅಫಜಲಪುರಕರ್, ಶಿವರಾಮ ಸರಾಫ್, ಗುಂಡೇರಾವ ಸರಾಫ, ಸುರೇಶ ಕುಲಕರ್ಣಿ, ಚಂದು ಜಾನಿಬ, ನರಹರಿ ಕುಲ್ಕರ್ಣಿ ಸೇರಿದಂತೆ ಇತರರು ಇದ್ದರು.