ಶ್ರೇಯಸ್ಸಿಗೆ ಗುರುವಿನ ಆಶೀರ್ವಾದ ಅತಿ ಮುಖ್ಯ

KannadaprabhaNewsNetwork |  
Published : Nov 28, 2024, 12:33 AM IST
ಪಟ್ಟಣದ ಕುಂಬಾರ ಬೀದಿ ಶ್ರೀ ಅಮ್ಮನ ಮರದ ದೇವಿ ದೇವಸ್ಥಾನದ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ಕಾರ್ತಿಕೋತ್ಸವ ಅಂಗವಾಗಿ ಮಹಾರುದ್ರಾಭಿಷೇಕ ಹಾಗು ಪುಷ್ಪ ಅಲಂಕಾರ, ಸಾಮೂಹಿಕ ವಿವಾಹ, ಧರ್ಮಸಂದೇಶ ಸಮಾರಂಭವನ್ನು ಸ್ವಾಮೀಜಿಯವರು ಉದ್ಗಾಟಿಸಿದರು. | Kannada Prabha

ಸಾರಾಂಶ

ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಚೈತನ್ಯ ಕಾಣಬೇಕದಾರೆ ಗುರುವಿನ ಆಶೀರ್ವಾದ ಬೇಕು ಎಂದು ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ನ್ಯಾಮತಿ

ಗುರುವಿನ ಗುಲಾಮ ಆಗುವತನಕ ಮುಕ್ತಿ ಸಿಗದಣ್ಣ, ಒಂದು ಗುರು ಒಂದು ಗುರಿಯನ್ನಿಟ್ಟುಕೊಳ್ಳಬೇಕು, ಕಲಿಸಿದ ಗುರು ಕಲಿಯುವಂತ ವಿದ್ಯಾರ್ಥಿ ಈ ಎರಡು ಮುಖ್ಯವಾದವು. ಮನುಷ್ಯನ ಸರ್ವತೋಮುಖ ಅಭಿವೃದ್ಧಿಗೆ ಚೈತನ್ಯ ಕಾಣಬೇಕದಾರೆ ಗುರುವಿನ ಆಶೀರ್ವಾದ ಬೇಕು ಎಂದು ಕೋಣಂದೂರು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ತಿಳಿಸಿದರು.

ಪಟ್ಟಣದ ಕುಂಬಾರ ಬೀದಿ ಶ್ರೀ ಅಮ್ಮನಮರದ ದೇವಿ ದೇವಸ್ಥಾನದ 22ನೇ ವರ್ಷದ ವಾರ್ಷಿಕೋತ್ಸವ ಮತ್ತು ಕಾರ್ತಿಕೋತ್ಸವ ಅಂಗವಾಗಿ ಮಹಾರುದ್ರಾಭಿಷೇಕ ಹಾಗೂ ಪುಷ್ಪ ಅಲಂಕಾರ, ಸಾಮೂಹಿಕ ವಿವಾಹ, ಧರ್ಮಸಂದೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಮ್ಮನ ಮರದ ದೇವಿ ಅನುಗ್ರಹದಿಂದ ಮತ್ತು ದೇವಿಯ ಸ್ಮರಣೆಯಿಂದ ನಿವೇಲ್ಲರೂ ತಮ್ಮ ತಮ್ಮ ಕಾಯಕವನ್ನು ಸಗುಮವಾಗಿ ಮಾಡುತ್ತಿದ್ದೀರಿ. ಹೊನ್ನಾಳಿ ಹಿರೇಕಲ್ಮಠದ ಲಿಂ.ಶ್ರೀ ಒಡೆಯರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮುಕ್ತ ಆಶೀರ್ವಾದದಿಂದ ನೀವೆಲ್ಲಾ ಒಗ್ಗಟ್ಟಿನಿಂದ ಶ್ರೀ ದೇವಿಯ ಬೇವಿನ ಕಟ್ಟೆಯನ್ನು ಬೃಹತ್‌ ಆಕಾರವಾಗಿ ದೇವಸ್ಥಾನವನ್ನು ನಿರ್ಮಾಣಮಾಡಿದ್ದೀರಿ ಎಂದರು. ಈ ಭಾಗದಲ್ಲಿ ಸಾಮೂಹಿಕ ವಿವಾಹವನ್ನು ಮೊಟ್ಟ ಮೊದಲು ಪ್ರಾರಂಭಿಸಿದ್ದು ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ್‌ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಎಂದು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಹೊನ್ನಾಳಿ ಹಿರೇಕಲ್ಮಠದ ಶ್ರೀ ಒಡೆಯರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಭೂಮಿ, ನೀರು ಗಾಳಿ ಆಕಾಶ ವಾಯು, ಅನಿಲ ಭಗವಂತನ ಸಂಪತ್ತು. ನಾವೆಲ್ಲಾ ಬೇಕಾದಷ್ಟು ಬಳಸಿ ಬದಕನ್ನು ಹಸನು ಮಾಡಿಕೊಂಡು ಸಾರ್ಥಕ ಮಾಡಿಕೊಳ್ಳಬೇಕೆಂದರು.

ವರ್ತಕ ನುಚ್ಚಿನ ವಾಗೀಶ್‌ ಮಾತನಾಡಿ, ಕಳೆದ ವರ್ಷ ಮತ್ತು ಈ ವರ್ಷ ಸಾಮೂಹಿಕ ವಿವಾಹ ನಡೆದಿಲ್ಲ. ಆದರೆ ಸಾಮೂಹಿಕ ವಿವಾಹ ಕೈ ಬಿಡುವುದಿಲ್ಲ. ಅದಕ್ಕೆ ಇನ್ನು ಹೆಚ್ಚಿನ ಪ್ರಾಧಾನ್ಯತೆ ನೀಡುತ್ತೇವೆ. ಶ್ರೀ ಅಮ್ಮನ ಮರದ ದೇವಿ ದೇವಸ್ಥಾನಕ್ಕೆ ಒಂದು ಮಿನಿ ರಥ ನಿರ್ಮಿಸಲು ನಾನು ನನ್ನ ತಂದೆ ತಾಯಿಯ ಹೆಸರಿನಲ್ಲಿ ₹25 ಸಾವಿರ ದೇಣಿಗೆ ನೀಡುತ್ತೇನೆ ಎಂದರು.

ಜೆಡಿಎಸ್‌ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಕುಂಬಾರ ತಿಪ್ಪೇಶಪ್ಪ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಮ್ಮನಮರದ ಅಧ್ಯಕ್ಷ ಹೊಸಮನೆ ಶಂಕರಪ್ಪ ವಹಿಸಿದ್ದರು. ಕೋಹಳ್ಳಿ ಹಿರೇಮಠ ವಿಶ್ವರಾಧ್ಯಶಾಸ್ತ್ರಿ, ಹೊಸಮನೆ ಕುಂಬಾರ ಮಲ್ಲಿಕಾರ್ಜುನ, ಹಾಲಿನ ಚನ್ನೇಸ, ಮಲ್ಲೇಶಪ್ಪ, ಪುಟ್ಟಪ್ಪ, ಎಂ.ಕರಿಬಸಪ್ಪ, ಹೆಚ್‌.ರೇವಣಪ್ಪ, ಚನ್ನಬಸಪ್ಪ, ಶ್ರೀದೇವಿ, ಹವಳದ ಲೀಮಗರಾಜ್‌, ಡಿ.ಎಂ.ವಿಜೇಂದ್ರ ಮಹೇಂದ್ರಕರ್‌, ಬಸವರಾಜಪ್ಪ ಮತ್ತಿತರರಿದ್ದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ