ಗುರುಕುಲಮ್ ಟ್ರಸ್ಟ್‌ನಿಂದ ಮಕ್ಕಳಿಗೆ 3ಡಿ ತಂತ್ರಜ್ಞಾನದ ಶಿಕ್ಷಣ

KannadaprabhaNewsNetwork |  
Published : Jun 01, 2025, 02:40 AM IST
ಪೋಟೋ: 31ಎಸ್‌ಎಂಜಿಕೆಪಿ01ಶಿವಮೊಗ್ಗದ ಪತ್ರಿಕಾಭವನದಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗುರುಕುಲಮ್ ಕಾರ್ಯದರ್ಶಿ ಜಿ. ಅರುಣ್‌ಕುಮಾರ್ ಮಾತನಾಡಿದರು.  | Kannada Prabha

ಸಾರಾಂಶ

ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ 3ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್‌ನಿಂದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಗುರುಕುಲಮ್ ಕಾರ್ಯದರ್ಶಿ ಜಿ. ಅರುಣ್‌ಕುಮಾರ್ ತಿಳಿಸಿದರು.

ಶಿವಮೊಗ್ಗ : ಶಿವಮೊಗ್ಗದಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ 3ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಶ್ರೀ ವಿದ್ಯಾರಣ್ಯ ಗುರುಕುಲಮ್ ಟ್ರಸ್ಟ್‌ನಿಂದ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದು ಗುರುಕುಲಮ್ ಕಾರ್ಯದರ್ಶಿ ಜಿ. ಅರುಣ್‌ಕುಮಾರ್ ತಿಳಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿವಮೊಗ್ಗದ ಬಿ.ಬಿ. ರಸ್ತೆಯಲ್ಲಿರುವ ಶ್ರೀರಾಮ ನಿವಾಸದಲ್ಲಿ ಬೆಳಗಿನ ಅವಧಿಯಲ್ಲಿ ನರ್ಸರಿ, ಎಲ್‌ಕೆಜಿ, ಯುಕೆಜಿಯನ್ನು ನಡೆಸುತ್ತಿದ್ದು, ಕಲಾಸಕ್ತರಿಗೆ ಅನುಕೂಲವಾಗುವಂತೆ ಭಾರತೀಯ ಕಲಾ ಪ್ರಕಾರದ ಶಿಕ್ಷಣ ನೀಡುತ್ತಾ ಬರುತ್ತಿದೆ ಎಂದರು.

ಆಧುನಿಕ ಶಿಕ್ಷಣದ ಜೊತೆಯಲ್ಲಿಯೇ ಭಾರತೀಯ ಲಲಿತ ಕಲೆಗಳಾದ ಗಮಕ, ಸಂಗೀತ, ನೃತ್ಯ, ಚಿತ್ರಕಲೆ, ಮೃದಂಗವಾದ, ಕೊಳಲುವಾದನ, ಪಿಟೀಲುವಾದನ ಶಿಕ್ಷಣವನ್ನು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ನೀಡುತ್ತಾ ಬರಲಾಗುತ್ತಿದೆ ಎಂದರು.

ಮೌಲ್ಯಾಧಾರಿತ ಶಿಕ್ಷಣವೊಂದೇ ಮಕ್ಕಳಲ್ಲಿ ಅಡಗಿರುವ ಸಪ್ತ ಪ್ರತಿಭೆಯನ್ನು ಹೊರತರಿಸಿ, ಉತ್ತಮ ವ್ಯಕ್ತಿತ್ವ ರೂಪಿಸುತ್ತದೆ. ಕೇವಲ ಅಂಕಗಳಿಕೆಗೆ ಪ್ರಧಾನವಾಗಿರುವ ಕಾಲಘಟ್ಟದಲ್ಲಿ ಮಕ್ಕಳ ಪ್ರತಿಭೆಗಳು, ಚಿಂತನೆ, ಸಹಜತೆ, ಕ್ರೀಯಾಶೀಲತೆ ಎಲ್ಲವೂ ಮೂಲೆಗುಂಪಾಗುತ್ತಿರುವ ಸಾಮಾಜಿಕವಾಗಿ ದೀರ್ಘಾವಧಿ ಆರೋಗ್ಯಕರ ಬೆಳವಣಿಗೆಯಲ್ಲ ಎಂಬುದು ತಿಳಿದ ಸಂಗತಿಯೇ ಆಗಿದೆ. ಈ ನಿಟ್ಟಿನಲ್ಲಿ ಮಕ್ಕಳ ವ್ಯಕ್ತಿತ್ವ ನಿರ್ಮಾಣಕ್ಕೆಂದೇ ಸಂಕಲ್ಪತೊಟ್ಟು ಶಿಕ್ಷಣ ಆರಂಭಗೊಂಡಿದೆ ಎಂದರು.

ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ವಿಚಾರಗಳನ್ನೊಳಗೊಂಡ ಮೌಲ್ಯಯುತ ಶಿಕ್ಷಣವನ್ನು ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ನೀಡಲು ಆರಂಭಿಸಿದೆ. ಜೂನ್ 2 ರಂದು ಆರಂಭಗೊಳ್ಳಲಿದ್ದು, ಆಸಕ್ತರು ದೂ.ಸಂ. : 9844444820 ಅಥವಾ 7760104592 ರನ್ನು ಸಂಪರ್ಕಿಸಬಹುದು ಎಂದರು.

ಗೋಷ್ಠಿಯಲ್ಲಿ ಟ್ರಸ್ಟ್‌ನ ಅಧ್ಯಕ್ಷ ಎನ್.ಎಲ್. ಪ್ರಸಾದ್, ಮಂಜುನಾಥ್, ಪವನ್ ಕಾರಂಜಿ, ಗೋಪಾಲ್‌ಕೃಷ್ಣ ಭಾಗವತ್, ಪ್ರಾಂಶುಪಾಲರಾದ ವೀಣಾ ಅರುಣ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ
ರಾಜಕ್ಕೆ ಕೇಂದ್ರ ಬಜೆಟ್ಟಲ್ಲಿ ಚೊಂಬು : ಸಿಎಂ ಸಿಡಿಮಿಡಿ