ಪ್ರೊ. ವಿ. ಬಿ. ಅರ್ತಿಕಜೆಗೆ ಸಂಸ್ಕಾರ ಭಾರತೀಯಿಂದ ‘ಆಚಾರ್ಯಾಭಿವಂದನಮ್’, ಗುರುವಂದನಾ ಸಮರ್ಪಣೆ

KannadaprabhaNewsNetwork |  
Published : Aug 01, 2026, 04:00 AM IST
ಪೊಟೋ: ೩೦ಪಿಟಿಆರ್- ಅರ್ತಿಕಜೆಪ್ರೊ. ವಿ. ಬಿ. ಅರ್ತಿಕಜೆ ಅವರಿಗೆ ಗುರುವಂದನಾ ಸಮರ್ಪಣೆ ಮಾಡಲಾಯಿತು. | Kannada Prabha

ಸಾರಾಂಶ

ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ, ಗುರು ಪೂರ್ಣಿಮೆ ಮತ್ತು ವ್ಯಾಸ ಹುಣ್ಣಿಮೆ ಸಲುವಾಗಿ ಪುತ್ತೂರಿನ ಹಿರಿಯ ಸಾಹಿತಿ, ಅಂಕಣಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ಬಿ. ಅರ್ತಿಕಜೆ ಮತ್ತು ಭಾಗ್ಯಲಕ್ಷ್ಮೀ ಅರ್ತಿಕಜೆ ದಂಪತಿಗೆ ‘ಆಚಾರ್ಯಾಭಿವಂದನಮ್’ ಗುರುವಂದನಾ ಸಮರ್ಪಣೆ ಮಾಡಲಾಯಿತು.

ಪುತ್ತೂರು: ಸಂಸ್ಕಾರ ಭಾರತೀ ಕರ್ನಾಟಕ ದಕ್ಷಿಣ ಪ್ರಾಂತ, ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ, ಗುರು ಪೂರ್ಣಿಮೆ ಮತ್ತು ವ್ಯಾಸ ಹುಣ್ಣಿಮೆ ಸಲುವಾಗಿ ಪುತ್ತೂರಿನ ಹಿರಿಯ ಸಾಹಿತಿ, ಅಂಕಣಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ವಿ. ಬಿ. ಅರ್ತಿಕಜೆ ಮತ್ತು ಭಾಗ್ಯಲಕ್ಷ್ಮೀ ಅರ್ತಿಕಜೆ ದಂಪತಿಗೆ ‘ಆಚಾರ್ಯಾಭಿವಂದನಮ್’ ಗುರುವಂದನಾ ಸಮರ್ಪಣೆ ಮಾಡಲಾಯಿತು.

ಜು.29ರಂದು ಪ್ರೊ. ವಿ.ಬಿ ಅರ್ತಿಕಜೆ ಅವರ ಪರ್ಲಡ್ಕ ಶಿವಪೇಟೆಯಲ್ಲಿನ `ಈಶಾನ` ನಿವಾಸದಲ್ಲಿ ಅಭಿನಂದನೆ ಕಾರ್ಯಕ್ರಮ ನಡೆಯಿತು.

ಪ್ರೊ. ವಿ.ಬಿ ಅರ್ತಿಕಜೆಯವರು ದೀಪ ಪ್ರಜ್ವಲನೆ ಮಾಡಿದರು. ಇದೇ ಸಂದರ್ಭ ಸಂಸ್ಕಾರ ಭಾರತಿಯ ವತಿಯಿಂದ ಅವರಿಗೆ ಗುರುವಂದನಾ ಸಮರ್ಪಣೆ ನೆರವೇರಿಸಲಾಯಿತು. ಜಿಲ್ಲಾ ಸಾಹಿತ್ಯ ಸಂಯೋಜಕಿ ಶಂಕರಿ ಶರ್ಮ ಸನ್ಮಾನ ಪತ್ರವನ್ನು ವಾಚಿಸಿದರು. ನಿವೃತ್ತ ಉಪನ್ಯಾಸಕಿ ಪ್ರೊ. ವತ್ಸಲಾ ರಾಜ್ಞಿಯವರು ಅತಿಥಿಗಳನ್ನು ಪರಿಚಿಯಿಸಿದರು. ಪ್ರಾಂತ ಉಪಾಧ್ಯಕ್ಷೆ ರೋಪಲೇಖಾ, ಜಿಲ್ಲಾ ಗೌರವಾಧ್ಯಕ್ಷರಾದ ಸರಪಾಡಿ ಅಶೋಕ್ ಶೆಟ್ಟಿ ಮತ್ತು ಸುದಾಮ ಕೆದಿಲಾಯರು ಶುಭ ಹಾರೈಸಿದರು. ಸನ್ಮಾನಿತರಾದ ವಿ.ಬಿ. ಅರ್ತಿಕಜೆಯವರು ತಮಗೆ ನೀಡಿದ ಗೌರವವನ್ನು ಪ್ರೀತ್ಯಾದರದಿಂದ ಸ್ವೀಕರಿಸಿ, ಕೃತಜ್ಞತೆಯ ನುಡಿಗಳನ್ನಾಡಿ ಶುಭ ಹಾರೈಸಿದರು.

ವಿದುಷಿ ಪ್ರೀತಿಕಲಾ ಅವರು ಧ್ಯೇಯಗೀತೆ ಹಾಗೂ ವಂದೇ ಮಾತರಂ ಹಾಡಿದರು. ಸಂಸ್ಕಾರ ಭಾರತೀಯ ಜಿಲ್ಲಾಧ್ಯಕ್ಷ ತಾರಾನಾಥ ಕೊಟ್ಟಾರಿಯವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರದರ್ಶನ ಕಲಾ ಸಂಯೋಜಕರಾದ ವಿದ್ವಾನ್ ದೀಪಕ್ ಕುಮಾರ್ ವಂದಿಸಿದರು. ವಿದುಷಿ ನಯನಾ ವಿ. ರೈ ಕಾರ್ಯಕ್ರಮ ನಿರ್ವಹಿಸಿದರು. ಮಾತೃಶಕ್ತಿ ಸಂಯೋಜಕಿ ಕೃಷ್ಣವೇಣಿ ಮುಳಿಯ, ಜಿಲ್ಲಾ ಉಪಾಧ್ಯಕ್ಷರಾದ ಪ್ರೊ. ದತ್ತಾತ್ರೇಯ ರಾವ್, ಜಿಲ್ಲಾ ಸಹ ಕೋಶಾಧಿಕಾರಿ ವಿದ್ವಾನ್ ಗೋಪಾಲಕೃಷ್ಣ, ಜಿಲ್ಲಾ ಸಹಕಾರ್ಯದರ್ಶಿಗಳಾದ ಶಶಿಕುಮಾರ್ ಇಂದ್ರ, ವೇಣೂರು ಮತ್ತು ಗಿರೀಶ್ ವೇಣೂರು, ಕಾರ್ಯಕಾರಿ ಸಮಿತಿ ಸದಸ್ಯರಾದ ಸಂಕಪ್ಪ ಶೆಟ್ಟಿ ಬಿ.ಸಿ.ರೋಡು, ಸುಮಂಗಲಾ ಗಿರೀಶ್ ಪುತ್ತೂರು, ಪದ್ಮಾ ಆಚಾರ್ಯ ಪುತ್ತೂರು ಹಾಗೂ ಸ್ಥಳೀಯ ಅಭಿಮಾನಿಗಳು ಉಪಸ್ಥಿತರಿದ್ದರು. ಶಾಂತಿ ಮಂತ್ರದೊಂದಿಗೆ ಶುಭ ಕಾರ್ಯಕ್ರಮವು ಸಂಪನ್ನಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುಷ್ಠಾನವಾಗದ ಆಲಮಟ್ಟಿ-ಯಾದಗಿರಿ ರೈಲ್ವೆ ಮಾರ್ಗ: ಉದಯಸಿಂಗ್ ರಾಯಚೂರ
ವೈಜ್ಞಾನಿಕ ಬೇಸಾಯದಿಂದ 100 ಟನ್‌ ಕಬ್ಬಿನ ಇಳುವರಿ