ಅರಸೀಕೆರೆಯಲ್ಲಿ ವಿಶೇಷವಾಗಿ ಗುರುಪೂರ್ಣಿಮೆ ಆಚರಣೆ

KannadaprabhaNewsNetwork |  
Published : Jul 22, 2024, 01:22 AM IST
ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಗುರೂಜೀಗಳು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ನಗರದ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿನ ಶ್ರೀವಿಷ್ಣು ಪಂಚಾಯತ್ ದೇವಾಲಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿಯವರಿಗೆ ಮುಂಜಾನೆ ಫಲಪಂಚಾಮೃತ ಅಭಿಷೇಕ ಹಾಗೂ ಪವಮಾನ, ಶ್ರೀಲಕ್ಷ್ಮೀ ನರಸಿಂಹ ಮೂಲಮಂತ್ರ ಹೋಮ, ದಕ್ಷಿಣಾಮೂರ್ತಿ ಮಂತ್ರ ಹೋಮ, ದತ್ತಾತ್ರೇಯ ಮಂತ್ರ ಹೋಮದ ಪೂರ್ಣಾಹುತಿ ನೆರವೇರಿಸಿದ ನಂತರ ಗುರುಗಳಿಂದ ಸಂಸ್ಥಾನ ಪೂಜೆ ಆದಿತ್ಯ, ಅಂಬಿಕಾ ಪರಮೇಶ್ವರಿ, ಪಂಚಮುಖಿ ಗಣಪತಿ ಶ್ರೀಕಂಠೇಶ್ವರ,ಆಂಜನೇಯರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಮಹಾಪೂಜೆ, ಗುರುಪಾದುಕಾ ಪೂಜೆ, ಗುರುವಂದನೆ ನಡೆಯಿತು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಚತುರ್ಮುಖ ಬ್ರಹ್ಮನಿಂದ ಬಂದ ವೇದವನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಿ, ಮುಂದಿನ ಪೀಳಿಗೆಗೆ ಕೊಟ್ಟಂತಹ ವ್ಯಾಸ ಮಹರ್ಷಿಗಳನ್ನು ಆರಾಧಿಸಿ, ಪೂಜಿಸುವ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಶ್ರೀಮಾರುತಿ ಸಚ್ಚಿದಾನಂದ ಆಶ್ರಮದ ಪರಂಪರಾ ಅವಧೂತರಾದ ಸತೀಶ್ ಶರ್ಮ ಗೂರೂಜೀ ತಿಳಿಸಿದರು.ನಗರದ ಶ್ರೀವಿದ್ಯಾನಗರದ ಶ್ರೀಮಾರುತಿ ಸಚ್ಚಿದಾನಂದ ಆಶ್ರಮದಲ್ಲಿನ ಶ್ರೀವಿಷ್ಣು ಪಂಚಾಯತ್ ದೇವಾಲಯದಲ್ಲಿ ಗುರು ಪೂರ್ಣಿಮೆ ಅಂಗವಾಗಿ ಶ್ರೀಲಕ್ಷ್ಮೀ ನರಸಿಂಹಸ್ವಾಮಿಯವರಿಗೆ ಮುಂಜಾನೆ ಫಲಪಂಚಾಮೃತ ಅಭಿಷೇಕ ಹಾಗೂ ಪವಮಾನ, ಶ್ರೀಲಕ್ಷ್ಮೀ ನರಸಿಂಹ ಮೂಲಮಂತ್ರ ಹೋಮ, ದಕ್ಷಿಣಾಮೂರ್ತಿ ಮಂತ್ರ ಹೋಮ, ದತ್ತಾತ್ರೇಯ ಮಂತ್ರ ಹೋಮದ ಪೂರ್ಣಾಹುತಿ ನೆರವೇರಿಸಿದ ನಂತರ ಗುರುಗಳಿಂದ ಸಂಸ್ಥಾನ ಪೂಜೆ ಆದಿತ್ಯ, ಅಂಬಿಕಾ ಪರಮೇಶ್ವರಿ, ಪಂಚಮುಖಿ ಗಣಪತಿ ಶ್ರೀಕಂಠೇಶ್ವರ,ಆಂಜನೇಯರ ಮತ್ತು ಲಕ್ಷ್ಮೀನರಸಿಂಹಸ್ವಾಮಿ ಸನ್ನಿಧಿಯಲ್ಲಿ ಮಹಾಪೂಜೆ, ಗುರುಪಾದುಕಾ ಪೂಜೆ, ಗುರುವಂದನೆ ನಡೆಯಿತು.

ಗುರೂಜೀಗಳು ಆಶೀರ್ವಚನ ನೀಡಿ ಭಾರತೀಯ ಸನಾತನ ಸಂಸ್ಕೃತಿಗೆ ವೇದ, ಪುರಾಣ, ಉಪನಿಷತ್ತುಗಳ, ಬ್ರಹ್ಮಸೂತ್ರಗಳನ್ನು ಕೊಡುಗೆಯಾಗಿ ನೀಡಿದ ಮಹರ್ಷಿ ವೇದ ವ್ಯಾಸರ ಜಯಂತಿಯನ್ನು ನಾವುಗಳು ಆಷಾಢ ಶುಕ್ಲ ಪಕ್ಷದ ಹುಣಿಮೆಯನ್ನು ಗುರುಪೂರ್ಣಿಮೆ ಎಂದು ಆಚರಿಸುತ್ತಿದ್ದು, ಧರ್ಮ,ಅರ್ಥ,ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳೊಂದಿಗೆ ಮನುಕುಲವನ್ನು ಸನ್ಮಾರ್ಗ ನಡೆಸುವ ಸನಾತನ ಗುರುಪರಂಪರೆಗೆ ಸಮಾಜದಲ್ಲಿ ಮಹತ್ವದ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದೆ, ಆದರೆ ಇಂದಿನ ವೈಜ್ಞಾನಿಕ ಯುಗದಲ್ಲಿ ನಾವುಗಳು ನಮ್ಮ ಸಂಸ್ಕೃತಿ ಪರಂಪರೆಯ ಆಚಾರ ವಿಚಾರಗಳನ್ನು ಮರೆಯುತ್ತಿರುವ ಕಾರಣ ದೇಶದೆಲ್ಲೆಡೆ ಸುಖ, ಶಾಂತಿ ನೆಮ್ಮದಿ ಬದುಕನ್ನು ಕಳೆದುಕೊಂಡು ಜನತೆ ಪರಿತಪಿಸುವಂತಾಗಿದ್ದು, ವಿಶ್ವದೆಲ್ಲೆಡೆ ಸುಖ, ಶಾಂತಿ ನೆಮ್ಮದಿಯನ್ನು ಭಗವಂತ ಕರುಣಿಸಿ ಲೋಕ ಕಲ್ಯಾಣ ಪ್ರಾಪ್ತವಾಗಲೆಂದು ಅತ್ಯಂತ ಶ್ರದ್ದಾಭಕ್ತಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಆಗಮಿಕಾರದ ಉಡುಪಿಯ ಮರುಳೀ ಕೇದ್ಲಾಯ್ ಮಾತನಾಡಿ, ಭಾರತೀಯ ಸನಾತನ ಸಂಸ್ಕೃತಿಗೆ ಮಹಾಭಾರತವನ್ನು ಕೊಡುಗೆಯಾಗಿ ನೀಡಿದ ವೇದ ವ್ಯಾಸ ಮಹರ್ಷಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ಆರಾಧಿಸುವ ಗುರುಪೂರ್ಣಿಮೆ ವಿಶೇಷ ಶುಭ ದಿನವಾಗಿದ್ದು, ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಗುರಿ ಮತ್ತು ಗುರುವಿನ ಅತ್ಯಾವಶ್ಯಕತೆ ಇದ್ದೇ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಶಕ್ತಾನುಸಾರ ನೆರವೇರಿಸಿ ಗುರುಗಳ ಅನುಗ್ರಹ ಮತ್ತು ಆಶೀರ್ವಾದ ಪಡೆಯುವುದು ಜೀವನಕ್ಕೆ ಶ್ರೀರಕ್ಷೆಯಾಗಿರುತ್ತದೆ ಎಂದು ಹೇಳಿದರು.

ವಿದ್ಯಾನಗರ ಕ್ಷೇಮಾಭಿವೃದ್ಧಿ ಸಂಘದ, ಶ್ರೀಲಕ್ಷ್ಮಿನರಸಿಂಹ ಕ್ಷೇಮಾಭಿವೃದ್ಧಿ ಸಂಘ, ಅವಧೂತ ಶಿಷ್ಯ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ತಮ್ಮ ಭಕ್ತಿಭಾವನೆಗಳನ್ನು ಸಮರ್ಪಿಸಿದರು. ನಂತರ ಭಕ್ತಾದಿಗಳಿಗೆ ಸಾಮೂಹಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ