ಸಾಧನೆಗೆ ಗುರುಗಳ ಆಶೀರ್ವಾದ ಬೇಕು: ಲತಾ

KannadaprabhaNewsNetwork |  
Published : Mar 11, 2024, 01:20 AM IST
23ಕೆಪಿಎಲ್28 ಕೊಪ್ಪಳ ನಗರದಲ್ಲಿ ಶಾಂತಿನಿಕೇತನ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಸಮಾರಂಭ | Kannada Prabha

ಸಾರಾಂಶ

ಮಕ್ಕಳನ್ನು ಪಠ್ಯದ ಹುಳಗಳನ್ನಾಗಿ ಮಾಡುತ್ತಿದ್ದಾರೆ. ಮಗುವಿಗೆ ಆತ್ಮ ಸ್ಥೈರ್ಯ, ಬದುಕಿನ ಮಜುಲಗಳ ಮತ್ತು ಸುತ್ತಮುತ್ತಲಿನ ಪರಿಸರ, ಮಾನವಿಯ ಮೌಲ್ಯಗಳನ್ನ ಬೆಳೆಸಿಕೊಳ್ಳಿ.

ಕೊಪ್ಪಳ: ಸಾಧನೆಗೆ ಗುರುಗಳ ಆಶೀರ್ವಾದ ಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷೆ ಲತಾ ಚಿನ್ನೂರ ಹೇಳಿದರು.ಅವರು ನಗರದ ಸಾಹಿತ್ಯ ಭವನದಲ್ಲಿ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿದರು.ಮಕ್ಕಳು ಟಿವಿ ಹಾಗೂ ಮೊಬೈಲ್ ನಿಂದ ದೂರವಿರಿ, ಮಕ್ಕಳ ಶೈಕ್ಷಣಿಕ ಬೆಳವಣಿಗೆ ಶಿಕ್ಷರ ಮೇಲೆ ಮಕ್ಕಳ ಶ್ರದ್ಧೆ ಬಹಳ ಮುಖ್ಯ ಎಂದರು.ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ಶರಣಪ್ಪ ಬಾಚಲಾಪುರ ಮಾತನಾಡಿ, ಮಕ್ಕಳನ್ನು ಪಠ್ಯದ ಹುಳಗಳನ್ನಾಗಿ ಮಾಡುತ್ತಿದ್ದಾರೆ. ಮಗುವಿಗೆ ಆತ್ಮ ಸ್ಥೈರ್ಯ, ಬದುಕಿನ ಮಜುಲಗಳ ಮತ್ತು ಸುತ್ತಮುತ್ತಲಿನ ಪರಿಸರ, ಮಾನವಿಯ ಮೌಲ್ಯಗಳನ್ನ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.ಮಗುವಿನಿಂದ ತಂದೆ ತಾಯಿ ದೂರವಿರಬೇಡಿ. ಮಗುವಿಗೆ ಕನಿಷ್ಠ 6 ವರ್ಷಗಳ ನಂತರ ಶಿಕ್ಷಣ ನೀಡಬೇಕು ಎನ್ನುವುದು ತಜ್ಞರ ಅಭಿಪ್ರಾಯ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕುಕನೂರ, ಕನ್ನಡ‌ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಾ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸುತ್ತಿರುವ ಸಂಸ್ಥೆ ‌ನಮ್ಮದು ಎಂದರು.ಮುಖ್ಯ ಅತಿಥಿಗಳಾಗಿ ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರ, ನಗರಸಭೆ ಸದಸ್ಯ ಮಲ್ಲಪ್ಪ ಕವಲೂರು, ನಾಗರತ್ನ ಕುಕನೂರ, ಮುಖಂಡರಾದ ಮುಸ್ತಫಾ ಕುದರಿಮೋತಿ, ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಬಸವರಾಜ ತಳಕಲ್ಲ, ಭರಮಗೌಡ ಗೆಜ್ಜಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣವನ್ನು ರಾಜ್ಯ ಸರ್ಕಾರ ಕೇಂದ್ರೀಕರಣಗೊಳಿಸಿದೆ
ಭಗವಂತನ ನಂಬಿಕೆ ಮೂಡಿಸುವುದು ಮಠಗಳ ಕರ್ತವ್ಯ