ಕನ್ನಡಪ್ರಭ ವಾರ್ತೆ ಮಂಡ್ಯ
ಇದು ನಗರದ ಗುತ್ತಲು ಗ್ರಾಮದಲ್ಲಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿ ಪರಿಶೀಲಿಸಿದಾಗ ಕಂಡುಬಂದ ನರಕಸದೃಶ ದೃಶ್ಯಗಳು.
ಘಟಕವು ಐದು ಎಕರೆ ವಿಸ್ತೀರ್ಣದಲ್ಲಿದ್ದು, ನಗರದ ತ್ಯಾಜ್ಯ ನೀರು ಮೂರು ಕೊಳಗಳಲ್ಲಿ ಹಾಗೂ ಮೂರು ಹಂತಗಳಲ್ಲಿ ಟ್ರೀಟ್‌ಮೆಂಟ್ ಆಗದೆ ಗುತ್ತಲು ಕೆರೆ ಸೇರುತ್ತಿರುವುದನ್ನು ಉಪ ಲೋಕಾಯುಕ್ತ ಬಿ.ವೀರಪ್ಪ ತೀವ್ರ ಬೇಸರ ವ್ಯಕ್ತಪಡಿಸಿದರು.ಹಸಿರು ಬಣ್ಣಕ್ಕೆ ಕೆರೆ ನೀರು:
ಸ್ಮಶಾನ, ಕೆರೆ ಜಾಗ ಒತ್ತುವರಿ:
ಕೆರೆಯ ಅಭಿವೃದ್ಧಿ ಕುರಿತು ನಗರಸಭೆ, ನೀರಾವರಿ ಇಲಾಖೆ, ಕೊಳಚೆ ನಿರ್ಮೂಲನಾ ಮಂಡಳಿ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳನ್ನು ಕೇಳಿದರೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಉಪ ಲೋಕಾಯುಕ್ತರ ಎದುರು ಗ್ರಾಮಸ್ಥರು ಆರೋಪಿಸಿದರು.
ಯತ್ತಗದಹಳ್ಳಿ ಗ್ರಾಮಸ್ಥರ ಉಪಯೋಗಕ್ಕಾಗಿ ಗುತ್ತಲು ಕೆರೆಯಿಂದ ಬರುವ ಕೊಳಚೆ ನೀರನ್ನು ಸರಬರಾಜು ಮಾಡುತ್ತಿರುವುದಾಗಿ ಹಾಗೂ ಇದೇ ನೀರನ್ನು ಅರಕೇಶ್ವರ ದೇವಸ್ಥಾನದ ಸುತ್ತಮುತ್ತ ಸರಬರಾಜು ಮಾಡುತ್ತಿರುವುದರಿಂದ ಕೊಳಚೆ ನೀರನ್ನೇ ಉಪಯೋಗಿಸಿ ದೇವಸ್ಥಾನದ ಒಳಗೆ ಹೋಗಿ ಬರುತ್ತಿರುವುದಾಗಿ ಗ್ರಾಮಸ್ಥರು ಅಳಲು ವ್ಯಕ್ತಪಡಿಸಿದರು.
ಕುಡಿಯಲು ಯೋಗ್ಯವಾಗಿಲ್ಲ:
ಗುತ್ತಲು ಕೆರೆಯು ಬೇಲೂರು ಪಂಚಾಯಿತಿ ವ್ಯಾಪ್ತಿಗೆ ಬರುತ್ತಿದ್ದು, ಗ್ರಾಪಂ ಅಭಿವೃದ್ಧಿ ಅಧಿಕಾರಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪಿಡಿಓ ಸಿದ್ದರಾಆಜು ಅವರನ್ನು ಇದೇ ಮೊದಲಿಗೆ ನೋಡುತ್ತಿದ್ದೇವೆ ಎಂದು ಗ್ರಾಮಸ್ಥರು ಉಪಲೋಕಾಯುಕ್ತರಿಗೆ ತಿಳಿಸಿದಾಗ, ಸೇನೆಯಲ್ಲಿ ಸೇವೆ ಸಲ್ಲಿಸಿಬಂದಿರುವ ನಿಮಗೆ ಶಿಸ್ತು ಎನ್ನುವುದೇ ಇಲ್ವಲ್ರೀ ಎಂದು ಪ್ರಶ್ನಿಸಿದರು.
ಗುತ್ತಲು ಕೆರೆ ಅಭಿವೃದ್ಧಿಗೆ ೫ ಕೋಟಿ ರು. ಹಣವನ್ನು ಮೀಸಲಿಟ್ಟಿರುವುದಾಗಿ ನೀರಾವರಿ ಇಲಾಖೆ ಕಿರಿಯ ಅಭಿಯಂತರ ಜಿ.ಎನ್.ಕೆಂಪರಾಜು ಉಪ ಲೋಕಾಯುಕ್ತರಿಗೆ ತಿಳಿಸಿದರು. ಕೆರೆ ನೀರನ್ನು ಉಪಯೋಗಿಸಿ ಬೆಳೆದಿರುವ ಭತ್ತ, ರಾಗಿ, ಕಬ್ಬು ಹಾಗೂ ತರಕಾರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಆಹಾರ ಪದಾರ್ಥವನ್ನಾಗಿ ಉಪಯೋಗಿಸಲು ಯೋಗ್ಯವಾಗಿದೆಯೋ, ಇಲ್ಲವೋ ಎಂಬ ಬಗ್ಗೆ ವರದಿ ಪಡೆದುಕೊಂಡು ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.
ಗುತ್ತಲು ಕೆರೆಗೆ ಹರಿಯಬಿಡುತ್ತಿರುವ ತ್ಯಾಜ್ಯ ನೀರು ಹಾಗೂ ರಾಜಕಾಲುವೆಯ ನೀರನ್ನು ನಿಲ್ಲಿಸಲು ಹಾಗೂ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ತಕ್ಷಣವೇ ಕ್ರಮ ಕೈಗೊಂಡು ಪೂರಕ ದಾಖಲಾತಿಗಳೊಂದಿಗೆ ವರದಿ ಸಲ್ಲಿಸುವಂತೆ ಬೇವಿನಹಳ್ಳಿ ಗ್ರಾಪಂ ಪಿಡಿಒ, ನೀರಾವರಿ ಇಲಾಖೆ, ನಗರಸಭೆ, ಕೊಳಚೆ ನಿರ್ಮೂಲನಾ ಮಂಡಳಿ ಅಧಿಕಾರಿಗಳಿಗೆ ಆದೇಶಿಸಿದರು.ಮೂರು ತಿಂಗಳ ಗಡುವು:
ಮೂರು ತಿಂಗಳ ಒಳಗಾಗಿ ಕೆರೆಗೆ ಹರಿಯುತ್ತಿರುವ ರಾಜಕಾಲುವೆ ನೀರು, ಸಂಸ್ಕರಣಾ ಘಟಕದಿಂದ ಹರಿಯುತ್ತಿರುವ ತ್ಯಾಜ್ಯ ನೀರನ್ನು ನಿಲ್ಲಿಸಿ ಕೆರೆ ಅಭಿವೃದ್ಧಿಪಡಿಸುವುದಾಗಿ ಅಧಿಕಾರಿಗಳು ಉಪ ಲೋಕಾಯುಕ್ತರಿಗೆ ಭರವಸೆ ನೀಡಿದರು.ನೈಟ್ರೋಜನ್ ಮಟ್ಟ ೧೦ಕ್ಕಿಂತ ಕಡಿಮೆ ಇರಬೇಕು. ಆದರೆ, ಪರಿಸರ ಇಲಾಖೆ ಅಧಿಕಾರಿಗಳು ತೋರಿಸಿದ ವರದಿಯಂತೆ ೨೨ ಯುನಿಟ್‌ನಷ್ಟು ನೈಟ್ರೋಜನ್ ಇದ್ದು ಮಾರಕವಾಗಿದೆ ಎಂದು ಅಧಿಕಾರಿಗಳಿಗೆಎ ತಿಳಿಸಿದರು.