ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದಲ್ಲಿ ಭಾನುವಾರ ಹಿರೇಕಲ್ಮಠದ ಸಮುದಾಯ ಭಾವನದಲ್ಲಿ ತಾಲೂಕು ವೀರಶೈವ ಲಿಂಗಾಯಿತ ಪಂಚಮಸಾಲಿ ಸಮಾಜ ತಾಲೂಕು ಘಟಕ ಆಯೋಜಿಸಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಲ್ಬನ್ನು ಕಂಡುಹಿಡಿದು ಜಗತ್ತಿಗೆ ಬೆಳಕನ್ನು ಕೊಟ್ಟ ವಿಜ್ಞಾನಿ ಸರ್ ಐಸ್ಯಾಕ್ ನ್ಯೂಟನ್ ಬಾಲ್ಯದಲ್ಲಿ ಶಾಲೆಯಲ್ಲಿ ದಡ್ಡ ವಿದ್ಯಾರ್ಥಿ ಎಂದು ತಿರಸ್ಕತಗೊಂಡು ಮನೆಯಲ್ಲಿಯೇ ತಾಯಿ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದಿದ್ದರು. ಅನಂತರ ತನ್ನ ಸಂಶೋಧನೆಯಲ್ಲಿ ನೂರಾರು ಬಾರಿ ಸೋಲನ್ನು ಕಂಡರೂ ಛಲಬಿಡದೇ ಸತತ ಪ್ರಯತ್ನ, ಕಠಿಣ ಪರಿಶ್ರಮದಿಂದ ಬಲ್ಬನ್ನು ಆವಿಷ್ಕರಿಸಿದರು. ಹಾಗೆಯೇ ಯುವಕರು ಸೋಲಿಗೆ ಅಂಜದೇ ನಿರಂತರ ಪ್ರಯತ್ನ ಮಾಡಬೇಕು. ಆಗ ತಮ್ಮ ಕೆಲಸದಲ್ಲಿ ಖಂಡಿತಾ ಗೆಲುವು ಕಾಣುತ್ತಾರೆ. ಇದಕ್ಕೆ ಈ ಬಾರಿ ಐಎಎಸ್‌ನಲ್ಲಿ 41ನೇ ರ್ಯಾಂಕ್ ಪಡೆದಿರುವ ಈ ಹರಿಹರದ ಡಾ.ಸಚಿನ್ ಬಸವರಾಜ್ ಗುತ್ತೂರು ಅವರೇ ಸಾಕ್ಷಿ ಎಂದರು.ಐಎಎಸ್ 41ನೇ ರ್ಯಾಂಕ್ ವಿಜೇತ ಡಾ.ಸಚಿನ್ ಬಸವರಾಜ ಗುತ್ತೂರು ಸನ್ಮಾನ ಸ್ವೀಕರಿಸಿ, ಸಾಧನೆ ಮಾಡಲು ವಿದ್ಯಾರ್ಥಿಗಳಿಗೆ ನಿರ್ದಿಷ್ಟ ಮತ್ತು ಸ್ಪಷ್ಟವಾದ ಗುರಿ ಇರಬೇಕು. ನಂತರ ಪೋಷಕರ ಪ್ರೋತ್ಸಾಹ ಹಾಗೂ ನಿರಂತರ ಪ್ರಯತ್ನ ಇದ್ದರೆ, ಅಂದುಕೊಂಡಿದ್ದನ್ನು ಸಾಧಿಸಬಹುದು ಎಂದು ತಿಳಿಸಿದರು.
ರಾಜ್ಯ ದಾಸೋಹ ಕಮಿಟಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಅವರು ಸಮಾಜದ ಅಭಿವೃದ್ಧಿ ಕುರಿತು ಮಾತನಾಡಿದರು. ಅಧ್ಯಕ್ಷತೆ ತಾಲೂಕು ಅಧ್ಯಕ್ಷ ಬೆನಕನಹಳ್ಳಿ ಪಿ.ವೀರಣ್ಣ ಪಟ್ಟಣಶೆಟ್ಟಿ ವಹಿಸಿದ್ದರು.
ಹಾಲೇಶ್ ಕುಂಕೂವ ಸ್ವಾಗತಿಸಿದರು. ಪ್ರಸನ್ನ ಸಾಧಕರ ಪರಿಚಯ ಮಾಡಿಸಿದರು. ಗಿರೀಶ್ ನಾಡಿಗ್ ನಿರೂಪಿಸಿದರು.
(ಬಾಕ್ಸ್) * ಅಕ್ಟೋಬರಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಆಯೋಜನೆಗೆ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವೀರಶೈವ ಲಿಂಗಾಯಿತ ಪಂಚಮಸಾಲಿ ಸಂಘ ಅಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, 31 ವರ್ಷಗಳಿಂದಲೂ ನಿರಂತರ ಸಮಾಜದ ಸಂಘಟನೆ ಸೇವೆ ನಡೆಯುತ್ತಿದೆ. ಕಳೆದ ಕೆಲವಾರು ವರ್ಷಗಳಿಂದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಗಳು ನಡೆದಿಲ್ಲ. ಈ ವರ್ಷ ಅತಿ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ತಮ್ಮ ಹೆಸರು, ಅಂಕಪಟ್ಟಿ ಪ್ರತಿ, ಪೋಟೋಗಳನ್ನು ರಾಜ್ಯ ಸಮಿತಿ ಘಟಕಕ್ಕೆ ಕಳುಹಿಸಬೇಕು. ಇದನ್ನು ಪುಸ್ತಕದ ರೂಪದಲ್ಲಿ ಹೊರತರಲಾಗುತ್ತದೆ. ಬಹುಪಾಲು ಅಕ್ಟೋಬರ್ ತಿಂಗಳಲ್ಲಿ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ನಡೆಸುವ ಉದ್ದೇಶ ಹೊಂದಲಾಗಿದೆ. ಜೂನ್ 7ರಂದು ಈ ಕುರಿತು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
-1ಎಚ್.ಎಲ್.ಐ3: