ಸಾಹಿತ್ಯದ ಮೂಲಕ ಜನಮನ ಗೆದ್ದಿರುವ ಸತೀಶ ಕುಲಕರ್ಣಿ: ಮಲ್ಲೇಶ ಕರಿಗಾರ

KannadaprabhaNewsNetwork |  
Published : Jun 01, 2025, 11:54 PM IST
ಹಾವೇರಿಯ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಸಾಹಿತಿ ಸತೀಶ ಕುಲಕರ್ಣಿ ಅವರು ಬರೆದ ಚಲನಚಿತ್ರಗಳ ಗೀತೆಗಳ ಪ್ರದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. | Kannada Prabha

ಸಾರಾಂಶ

ಸಾಹಿತಿ ಸತೀಶ ಕುಲಕರ್ಣಿ ಅವರ ನಾಲ್ಕು ಚಲನಚಿತ್ರಗಳಾದ ಇಂಗಳೆ ಮಾರ್ಗ, ಜುಲೈ 22, 1947, ಸಾವಿತ್ರಿಬಾಯಿ ಫುಲೆ, ದಂತ ಪುರಾಣ ಚಲನಚಿತ್ರಗಳಿಗೆ ಹಾಡು ಬರೆದು ಚಲನಚಿತ್ರಗಳು ರಾಜ್ಯದಲ್ಲಿ ಹೆಸರು ಮಾಡಿ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರಗಳಾಗಿವೆ.

ಹಾವೇರಿ: ಸಾಹಿತಿ ಸತೀಶ ಕುಲಕರ್ಣಿಯವರು ಕನ್ನಡದ ಖ್ಯಾತ ನಾಲ್ಕು ಚಲನಚಿತ್ರಗಳಿಗೆ ಅತ್ಯುತ್ತಮ ಸಾಹಿತ್ಯ ರಚಿಸಿ ಜನಮನ ಗೆದ್ದಿದ್ದಾರೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ತಿಳಿಸಿದರು.ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಅಭಿಮಾನಿ ಬಳಗ ಹಾಗೂ ಸಾಹಿತಿ ಕಲಾವಿದರ ಬಳಗದಿಂದ ಆಯೋಜಿಸಿದ್ದ ಸತೀಶ ಕುಲಕರ್ಣಿ ಅವರು ಬರೆದ ಚಲನಚಿತ್ರಗಳ ಗೀತೆಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾಹಿತಿ ಸತೀಶ ಕುಲಕರ್ಣಿ ಅವರ ನಾಲ್ಕು ಚಲನಚಿತ್ರಗಳಾದ ಇಂಗಳೆ ಮಾರ್ಗ, ಜುಲೈ 22, 1947, ಸಾವಿತ್ರಿಬಾಯಿ ಫುಲೆ, ದಂತ ಪುರಾಣ ಚಲನಚಿತ್ರಗಳಿಗೆ ಹಾಡು ಬರೆದು ಚಲನಚಿತ್ರಗಳು ರಾಜ್ಯದಲ್ಲಿ ಹೆಸರು ಮಾಡಿ ಪ್ರಶಸ್ತಿ ಪಡೆದ ಅತ್ಯುತ್ತಮ ಚಿತ್ರಗಳಾಗಿವೆ. ಜತೆಗೆ ಸಿನಿಮಾಗಳಲ್ಲಿ ನಟಿಸಿ ಹೆಸರು ಪಡೆದು ಹಾವೇರಿ ಜಿಲ್ಲೆಗೆ ಕೀರ್ತಿ ತಂದ ಅತ್ಯುತ್ತಮ ನಟರಾಗಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಸತೀಶ ಅವರ ಕೊಡುಗೆ ಅನನ್ಯವಾದದ್ದು. ಸಾಹಿತ್ಯದ ಯಾವ ಕೆಲಸವು ನನ್ನಿಂದ ಆಗುವುದಿಲ್ಲವೆಂದು ಎಂದೂ ಕೈಕಟ್ಟಿ ಕುಳಿತವರಲ್ಲ. ಮಾಡುವ ಮನಸ್ಸು, ಮಾಡಲೇಬೇಕೆಂಬ ಛಲದಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹೆಗ್ಗಳಿಕೆ ಸತೀಶ ಕುಲಕರ್ಣಿ ಅವರಿಗೆ ಸಲ್ಲಸಬೇಕು ಎಂದರು. ಪಂಡಿತ ಪುಟ್ಟರಾಜ ಗವಾಯಿಗಳ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಎಂ. ಓಂಕಾರಣ್ಣನವರ ಮಾತನಾಡಿ, ಜು. 13ರಂದು ಸತೀಶ ಕುಲಕರ್ಣಿಯವರ ಜನ್ಮದಿನ ಆಚರಿಸುವ ಅಂಗವಾಗಿ 75 ವರ್ಷ ತುಂಬುವ ಸುಸಮಯ. ಈ ಅಮೃತ ಮಹೋತ್ಸವ ಆಚರಿಸುವ ಪೂರ್ವಭಾವಿಯಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿ.ಕೆ. ದೇಸಾಯಿ, ವಿಜಯಕುಮಾರ ಮುದಕಣ್ಣನವರ, ವೈ.ಬಿ. ಆಲದಕಟ್ಟಿ, ಶ್ರೀಕಾಂತ ದೊಡ್ಡಕುರುಬರ, ರಾಜೇಶ್ವರಿ ಬಿಷ್ಟನಗೌಡ್ರ, ಲೀಲಾವತಿ ಭೋಜರಾಜ ಪಾಟೀಲ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ, ಅಮಿತ ಮೇವುಂಡಿಮಠ, ಯಾಸಿರ ನರಗುಂದ ಸೇರಿದಂತೆ ಇತರರು ಇದ್ದರು. ಅಕ್ಕಮಹಾದೇವಿ ಹಾನಗಲ್ಲ ಪ್ರಾರ್ಥಿಸಿದರು. ಮಂಜುನಾಥ ಸಣ್ಣಿಂಗಮ್ಮನವರ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ