ಎಚ್. ವಿಶ್ವನಾಥ್ ರಾಜಕಾರಣಿಗಳಿಗೆ ದಾರಿ ದೀಪ: ಶಂಕರಭಾರತೀ ಸ್ವಾಮೀಜಿ ಅಭಿಮತ

KannadaprabhaNewsNetwork |  
Published : Sep 29, 2025, 01:02 AM IST
51 | Kannada Prabha

ಸಾರಾಂಶ

ಈವರೆಗೆ 9 ಪುಸ್ತಕಗಳನ್ನು ಬರೆದಿರುವ ಎಚ್. ವಿಶ್ವನಾಥ್ ಅವರು 10ನೇ ಪುಸ್ತಕವನ್ನು ಬರೆಯಲು ಸಜ್ಜಾಗಿರುವ ಅವರು ವಿಯೆಟ್ನಾಂ ಮತ್ತು ಕಾಂಬೋಡಿಯಾ ದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಅವರ ಚಿಂತನೆ ಮತ್ತು ಪ್ರವಾಸಗಳು ಜಗತ್ತಿನ ಎಲ್ಲ ರಾಜಕಾರಣಿಗಳಿಗೂ ಮಾದರಿ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ನಾಡಿನ ಸಕ್ರಿಯ ಮತ್ತು ಸಕಾರಾತ್ಮಕ ರಾಜಕಾರಣಿಯಾಗಿರುವ ಎಚ್. ವಿಶ್ವನಾಥ್ ಭವಿಷ್ಯದ ರಾಜಕಾರಣಿಗಳಿಗೆ ದಾರಿ ದೀಪ ಎಂದು ಯಡತೊರೆ ಯೋಗಾನಂದೇಶ್ವರ ಮಠದ ಶ್ರೀಗಳಾದ ಶಂಕರಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಸಿ.ಎಂ. ರಸ್ತೆಯಲ್ಲಿರುವ ಎಡತೊರೆ ಯೋಗಾನಂದೇಶ್ವರ ಮಠದಲ್ಲಿ ತಮ್ಮ ಅಭಿಮಾನಿಗಳು ಮತ್ತು ಪಟ್ಟಣದ ನಾಗರೀಕರು ಹಮ್ಮಿಕೊಂಡಿದ್ದ ವಿದೇಶ ಪ್ರಯಾಣದ ಶುಭ ಹಾರೈಕೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಮಾತನಾಡಿದರು.

ರಾಜಕಾರಣಿ ಗಳು ಸದಾ ಸ್ವ ಹಿತಾಶಕ್ತಿಗೆ ಕೆಲಸ ಮಾಡುತ್ತಾರೆ, ಆದರೆ ನಮ್ಮೂರಿನ ಈ ನಾಯಕ ರಾಜಕೀಯದ ಜತೆಗೆ ಸಾಹಿತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದು, ಇದು ಎಲ್ಲರೂ ಹೆಮ್ಮೆ ಪಡುವ ವಿಚಾರ ಎಂದರು.

ದೇಶದ ಇತರ ರಾಜಕಾರಣಿಗಳಿಗೆ ಮಾದರಿ:

ಎಂಡಿಎ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್ ಮಾತನಾಡಿ, ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ದೇಶದ ಇತರ ರಾಜಕಾರಣಿಗಳಿಗೆ ಮಾದರಿ ಎಂದುಹೇಳಿದರು.

ಈವರೆಗೆ 9 ಪುಸ್ತಕಗಳನ್ನು ಬರೆದಿರುವ ಎಚ್. ವಿಶ್ವನಾಥ್ ಅವರು 10ನೇ ಪುಸ್ತಕವನ್ನು ಬರೆಯಲು ಸಜ್ಜಾಗಿರುವ ಅವರು ವಿಯೆಟ್ನಾಂ ಮತ್ತು ಕಾಂಬೋಡಿಯಾ ದೇಶಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದು, ಅವರ ಚಿಂತನೆ ಮತ್ತು ಪ್ರವಾಸಗಳು ಜಗತ್ತಿನ ಎಲ್ಲ ರಾಜಕಾರಣಿಗಳಿಗೂ ಮಾದರಿ ಎಂದು ಹೇಳಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ. ಪುಟ್ಟಸಿದ್ದಶೆಟ್ಟಿ, ನವ ನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ಜಿಲ್ಲಾ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಪಿ. ತಮ್ಮಯ್ಯ, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮ ಶಂಕರ್, ದಲಿತ ಮುಖಂಡ ನಾಗರಾಜು, ಎಚ್. ವಿಶ್ವನಾಥ್ ಪತ್ನಿ ಶಾಂತಮ್ಮ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜಿಪಂ ಮಾಜಿ ಸದಸ್ಯರಾದ ಅಮಿತ್ ವಿ. ದೇವರಹಟ್ಟಿ, ಜಿ.ಆರ್. ರಾಮೇಗೌಡ, ಜಯರಾಮೇಗೌಡ, ಪುರಸಭೆ ಮಾಜಿ ಅಧ್ಯಕ್ಷ ತಮ್ಮನಾಯಕ ಸದಸ್ಯ ಕೆ.ಪಿ. ಪ್ರಭುಶಂಕರ್, ಮಾಜಿ ಸದಸ್ಯ ಎನ್. ಶಿವಕುಮಾರ್, ಕೆ.ಎಲ್. ರಾಜೇಶ್, ಕೆ.ಬಿ. ಸುಬ್ರಮಣ್ಯ, ಸಾಹಿತಿ ಹೆಗ್ಗಂದೂರು ಪ್ರಭಾಕರ್, ಜಿಲ್ಲಾ ಜಾನಪದ ಪರಿಷತ್ ಸದಸ್ಯ ಜಿ. ಪ್ರಕಾಶ್, ರಾಜ್ಯ ಸರ್ಕಾರಿನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ರಾಜಶೇಖರ್ ಇತರರು ಇದ್ದರು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ