ದ.ಕ.ದಲ್ಲಿ ೮೭ ಎಚ್೧ಎನ್೧ ಪ್ರಕರಣಗಳು ಪತ್ತೆ: ಡಾ.ತಿಮ್ಮಯ್ಯ

KannadaprabhaNewsNetwork |  
Published : Aug 28, 2026, 02:45 AM IST
ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ  | Kannada Prabha

ಸಾರಾಂಶ

ದ.ಕ. ಜಿಲ್ಲೆಯಲ್ಲಿ ಈ ತಿಂಗಳ ೨೫ರವರೆಗೆ ೮೭ ಇನ್ಪ್ಲೂಯೆಂಜಾ (ಎಚ್೧ಎನ್೧) ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ೬೦ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಬಂಟ್ವಾಳ ೧೪, ಪುತ್ತೂರು ೭, ಬೆಳ್ತಂಗಡಿ ೫, ಸುಳ್ಯದಲ್ಲಿ ೧ ಪ್ರಕರಣ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ.

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಈ ತಿಂಗಳ ೨೫ರವರೆಗೆ ೮೭ ಇನ್ಪ್ಲೂಯೆಂಜಾ (ಎಚ್೧ಎನ್೧) ಪ್ರಕರಣಗಳು ಪತ್ತೆಯಾಗಿದೆ. ಅದರಲ್ಲಿ ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು ೬೦ ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಬಂಟ್ವಾಳ ೧೪, ಪುತ್ತೂರು ೭, ಬೆಳ್ತಂಗಡಿ ೫, ಸುಳ್ಯದಲ್ಲಿ ೧ ಪ್ರಕರಣ ಪತ್ತೆಯಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ. ನಗರದ ಡಿಎಚ್‌ಒ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಚ್ಐಪಿ ಮಾಹಿತಿಯ ಪ್ರಕಾರ ಜಿಲ್ಲೆಯಲ್ಲಿ ೨೦೨೫ರಲ್ಲಿ ಜನವರಿಯಿಂದ ಆಗಸ್ಟ್‌ ವರೆಗೆ ೭೧ ಪ್ರಕರಣಗಳಿತ್ತು. ಜನವರಿ ಯಿಂದ ಡಿಸೆಂಬರ್ ತನಕ ೨೦೭ ಪ್ರಕರಣಗಳು ಪತ್ತೆಯಾಗಿತ್ತು. ೨೦೨೪ರಲ್ಲಿ ಈ ಅವಧಿಯಲ್ಲಿ ೨೦೮ ಪ್ರಕರಣಗಳು ದಾಖಲಾಗಿತ್ತು ಎಂದರು.

ಇನ್ಪ್ಲೂಯೆಂಜಾ ಕಾಯಿಲೆ (ಐಎಲ್‌ಐ) ಮತ್ತು ತೀವ್ರ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿಗದಿತ ಕಣ್ಗಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದರು ಡಾ.ತಿಮ್ಮಯ್ಯ.

ದ.ಕ. ಜಿಲ್ಲೆಯಲ್ಲಿ ಎಚ್೧ಎನ್೧ ಸೋಂಕಿನ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಅಗತ್ಯ ಔಷಧ ಮತ್ತು ರಕ್ಷಣಾ ಸಾಮಗ್ರಿಗಳ ದಾಸ್ತಾನು ಹೊಂದಿದೆ. ಒಸೆಲ್ಟಾಮಿವಿ ಕ್ಯಾಪ್ಸೂಲ್‌ ಐಪಿ ೭೫ ಮಿ.ಗ್ರಾಂ ೧,೭೪೯, ೧೨ ಮಿ.ಗ್ರಾಂ/ಮಿಲಿ ಒರಲ್ ಸಸ್ಪೆನ್ಷನ್ ೩೪, ಒಸೆಲ್ಟಾಮಿವಿ ಕ್ಯಾಪ್ಸುಲ್‌ ಐಪಿ ೩೦ ಮಿ.ಗ್ರಾಂ ೧೦೦ ದಾಸ್ತಾನು ಇದೆ. ಅದಲ್ಲದೆ ಪಿಪಿಇ ಕಿಟ್, ಎನ್ ೯೫ ಮಾಸ್ಕ್‌ಗಳ ದಾಸ್ತಾನು ಇರಿಸಲಾಗಿದೆ ಎಂದರು.

ಇನ್ಪ್ಲೂಯೆಂಜಾ ಅಥವಾ ಇತರ ಯಾವುದೇ ಜ್ವರಗಳು ಕಾಣಿಸಿಕೊಂಡಾಗ ಇಂತಹ ಮಕ್ಕಳ ಮಾಹಿತಿ ಆರೋಗ್ಯ ಇಲಾಖೆಗೆ ನೀಡುವಂತೆ ಮತ್ತು ಮಕ್ಕಳನ್ನು ಶಾಲೆಗಳಿಗೆ ಕಳುಹಿಸದಂತೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಪೋಕ್ಲು ವ್ಯಾಪ್ತಿಯಲ್ಲಿ ಸಂಭ್ರಮದ ಈದ್ ಮಿಲಾದ್
ಟಿಟಿ ಮೇಲೆ ಲಾರಿ ಉರುಳಿ ನಾಲ್ವರಿಗೆ ಗಾಯ