ಹಲಬೆರಕೆ ಹಾಲಿನ ಘಟಕದ ಮೇಲೆ ದಾಳಿ: ಐವರ ಬಂಧನ

KannadaprabhaNewsNetwork |  
Published : Jan 16, 2026, 12:45 AM IST
15ಕೆಜಿಎಫ್‌3 | Kannada Prabha

ಸಾರಾಂಶ

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಳ್ಳಗೆರೆ ಗ್ರಾಮದಲ್ಲಿ ಅಕ್ರಮವಾಗಿ ಕಲಬೆರಕೆ ಹಾಲು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧಾರಿಸಿ ಆಂಡ್ರಸನ್‌ಪೇಟೆ ಪೊಲೀಸರ ಕಾರ್ಯಾಚರಣೆ.

ಕನ್ನಡಪ್ರಭ ವಾರ್ತೆ ಕೆಜಿಎಫ್ಕೆಜಿಎಫ್‌ನ ಆಂಧ್ರ ಗಡಿಯಲ್ಲಿ ಕಲಬೆರೆಕೆ ಹಾಲು ತಯಾರಿಕಾ ಘಟಕದ ಮೇಲೆ ಎಸ್ಪಿ ಶಿವಾಂಶು ರಜಪೂತ್ ದಾಳಿ ನಡೆಸಿ ಹಾಲಿನಲ್ಲಿ ಕೆಮಿಕಲ್ ಬೆರೆಸಿ ಮಾರಾಟ ಮಾಡುತ್ತಿದ್ದು 5 ಜನರನ್ನು ಬಂಧಿಸಿ ಅಪಾರ ಪ್ರಮಾಣದ ಹಾಲಿಗೆ ಕಲಬೆರಕೆ ಮಾಡುತ್ತಿದ್ದು ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬಳ್ಳಗೆರೆ ಗ್ರಾಮದಲ್ಲಿ ಅಕ್ರಮವಾಗಿ ಕಲಬೆರಕೆ ಹಾಲು ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯನ್ನಾಧಾರಿಸಿ ಆಂಡ್ರಸನ್‌ಪೇಟೆ ಪೊಲೀಸರು ಮತ್ತು ಆಹಾರ ಸುರಕ್ಷತಾ ಅಧಿಕಾರಿ ಪ್ರತೀಶ ಜಿ.ಪಿ. ಅವರೊಂದಿಗೆ ಜ. 14 ರಂದು ರಾತ್ರಿ 10.30 ಗಂಟೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಲಾಗಿ, ಆಂಧ್ರಪ್ರದೇಶದ ವಾಸಿಗಳಾದ ವೆಂಕಟೇಶಪ್ಪ, ಬಾಲಾಜಿ, ದಿಲೀಪ್, ಬಾಲ್‌ರಾಜ್ ಮತ್ತು ಮನೋಹರ್ ಹಾಗೂ ಇತರರು ಸೇರಿ ಹಾಲಿನ ಪುಡಿ, ಪಾಮ್ ಆಯಿಲ್ ಮತ್ತು ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಯಂತ್ರೋಪಕರಣಗಳ ಸಹಾಯದಿಂದ ಅಕ್ರಮವಾಗಿ ಕಲಬೆರಕೆ ಹಾಲು ತಯಾರಿಸುತ್ತಿರುವುದು ಬೆಳಕಿಗೆ ಬಂದಿತು.

ಹಾಲಿನ ಮಿಶ್ರಣಕ್ಕೆ ಅಂಗನವಾಡಿ ನಂದಿನಿ ಹಾಲಿನ ಪುಡಿ:

ನಂದನಿ ಹಾಲಿನ ಪೌಡರ್, ಪ್ರಭಾತ್ ಹಾಲಿನ ಪೌಡರ್ ಕಂಪನಿಗಳ 25 ಕೆ.ಜಿ ತೂಕದ ಒಟ್ಟು 56 ಮಿಲ್ಕ್ ಪೌಡರ್ ಚೀಲಗಳ 500 ಗ್ರಾಂ ನಂದಿನಿ ಮೀಲ್ಕ್ ಪೌಡರ್‌ನ 350 ಪಾಕೆಟ್, 1 ಕೆ.ಜಿ ತೂಕದ ನಂದಿನಿ ಮೀಲ್ಕ್ ಪೌಡರ್ 40 ಪಾಕೆಟ್, ಅಂಗನವಾಡಿ ಶಾಲೆಗೆ ನೀಡಿರುವ ಪೌಷ್ಠಿಕ ಆಹಾರದ ಪುಷ್ಟಿ 2.5 ಕೆ.ಜಿ ಯ 10 ಪಾಕೆಟ್, ಮಿಲೆಟ್ ಮಿಲ್ಕ್ ಲಡ್ಡು 1.8 ಕೆ.ಜಿ ಯ 12 ಪಾಕೆಟ್‌ಗಳು, ಬೆಲ್ಲದ ಪುಡಿ 500 ಗ್ರಾಂನ 4 ಪಾಕೆಟ್‌ಗಳು, ಆರ್.ಕೆ.ಗೋಲ್ಡ ಕಂಪನಿಯ ಪಾಮ್ ಆಯಿಲ್‌ನ 90 ಬಾಕ್ಸ್‌ಗಳು (1 ಬಾಕ್ಸ್‌ನಲ್ಲಿ 800 ಗ್ರಾಂನ 10 ಪಾಕೆಟ್) 38 ಲೀಟರ್ ಸಾಮರ್ಥ್ಯದ 51 ಹಾಲು ತುಂಬಿದ ಕ್ಯಾನ್‌ಗಳು, 27 ಖಾಲಿ ಕ್ಯಾನ್‌ಗಳು ಪತ್ತೆಯಾಗಿದೆ. ಎರಡು ಮಿಕ್ಸರ್, ನಾಲ್ಕು ಜಾರ್‌ಗಳು, 4 ಪ್ಲಾಸ್ಟಿಕ್ ಬಕೆಟ್, ಒಂದು ಎಲೆಕ್ಟಿçಕ್ ಮಿಕ್ಸರ್, ಮಹೇಂದ್ರ ವಾಹನ, ಟಾ.ಟಾ. ಎಸಿ ಹಾಲಿನ ಕ್ಯಾನ್‌ಗಳನ್ನು ಸಾಗಿಸಲು ಬಳಸುತ್ತಿದ್ದ ಎಂಬ ಎರಡು ಗೂಡ್ಸ್ ವಾಹನಗಳನ್ನು ವಶಪಡಿಸಿಕೊಂಡಿದ್ದು ಇವುಗಳ ಬೆಲೆ 22,50,000 ಆಗಿದ್ದು, ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ. ಡಿವೈಎಸ್ಪಿ ವಿ. ಲಕ್ಷ್ಮಯ್ಯ ಮತ್ತು ಇನ್‌ಸ್ಪೆಕ್ಟರ್‌ಗಳಾದ ಪಿ.ಎಂ.ನವೀನ್ ಮತ್ತು ಮಾರ್ಕಂಡಯ್ಯ ಎಸ್.ಟಿ ರವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ, ಹಾಲು ಕಲಬೆರೆಕೆಗೆ ಉಪಯೋಗಿಸುವ ವಸ್ತುಗಳು ಮತ್ತು ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಪಿಎಸ್ಐ ಮಂಜುನಾಥ.ಬಿ, , ಅಣ್ಣಪ್ಪ ಎ.ಎಸ್.ಐ ಮತ್ತು ಸಿಬ್ಬಂದಿ ರಾಜೇಂದ್ರ, ವೇಣುಗೋಪಾಲ್, ಲೊಕೇಶ್, ಗೋಪಿ, ರಮೆಶ್ ಈರಪ್ಪ ಜಂಬಗಿ, ರವಿಕುಮಾರ್, ಮನೋಹರ್ ಅವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿಗಳಾದ ಶಿವಾಂಶು ರಜಪೂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.೧೫ಕೆಜಿಎಫ್೩ಹಾಲಿಗೆ ರಸಾಯನಿಕಗಳನ್ನು ಮಿಶ್ರಣ ಮಾಡಿರುವ ಹಾಲು.೧೫ಕೆಜಿಎಫ್೪ಕೃತಕ ಹಾಲನ್ನು ತಯಾರಿಸಲು ಹಾಲಿನ ಪುಡಿ ಮೂಟೆಗಳನ್ನು ವಶಪಡಿಸಿಕೊಂಡಿರುವ ಪೊಲೀಸ್‌ರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನರೇಗಾ ಯೋಜನೆ ಹೆಸರು ಬದಲಿಸುವ ಮೂಲಕ ಮತ್ತೊಮ್ಮೆ ಗಾಂಧಿ ಹತ್ಯೆ
ಶ್ರೀರಂಗಪಟ್ಟಣ: ಕೋಟ್ಪಾ ಕಾಯ್ದೆ ನಿಯಮದಡಿ ವಿಶೇಷ ಕಾರ್ಯಾಚರಣೆ