* ಪ್ರಾತಃಸ್ಮರಣೀಯರು
ಡಾ.ಫ.ಗು.ಹಳಕಟ್ಟಿ, ರೆವರೆಂಡ್ ಉತ್ತಂಗಿ ಚನ್ನಪ್ಪ ಹಾಗೂ ಹರ್ಡೆಕರ್ ಮಂಜಪ್ಪ 19-20ನೇ ಶತಮಾನದ ಲಿಂಗಾಯತ ರತ್ನತ್ರಯರು ಎಂದು ಸಾಹಿತಿ ರಮೇಶ ಮಠಪತಿ ಬಣ್ಣಿಸಿದರು.
ಲಿಂಗಾಯತ ಮಹಾ ಮಠದಿಂದ ನಗರದ ಬಸವಗಿರಿಯಲ್ಲಿ ಇತ್ತಿಚೇಗೆ ಆಯೋಜಿಸಿದ್ದ ಮಾಸಿಕ ಶರಣ ಸಂಗಮದಲ್ಲಿ ಲಿಂಗಾಯತ ರತ್ನತ್ರಯರು ಕುರಿತು ವಿಶೇಷ ಉಪನ್ಯಾಸ ನೀಡಿ, ಕಿತ್ತು ತಿನ್ನುವ ಬಡತನವನ್ನು ಅಪ್ಪಿಕೊಂಡು, ಎಷ್ಟೇ ಕಷ್ಟ-ನಷ್ಟಗಳು ಎದುರಾದರೂ ವಚನ ಧರ್ಮಕ್ಕಾಗಿ ತಮ್ಮನ್ನು ತಾವು ಗಂಧದ ಕೊರಡಿ ನಂತೆ ಸವೆದ ಮಹನೀಯರಿವರು ಎಂದು ಹೇಳಿದರು.ಕಲ್ಯಾಣ ಕ್ರಾಂತಿಯ ನಂತರ ಎಂಟು ನೂರು ವರ್ಷಗಳವರೆಗೆ ಭೂಗತವಾಗಿದ್ದ ವಚನ ಸಾಹಿತ್ಯವನ್ನು ಹೆಕ್ಕಿ, ಸಂಗ್ರಹಿಸಿ, ಸಂಶೋಧನೆಗೈದು, ಪ್ರಕಟಿಸಿ, ಸಾಹಿತ್ಯ ಲೋಕಕ್ಕೆ ಸಮರ್ಪಿಸಿ ವಚನ ಪಿತಾಮಹ ಎನಿಸಿದವರು ಹಳಕಟ್ಟಿ ಎಂದರು.
ಹಳಕಟ್ಟಿ, ಉತ್ತಂಗಿ ಚನ್ನಪ್ಪ ಹಾಗೂ ಹರ್ಡೆಕರ್ ಮಂಜಪ್ಪ ಸದಾ ಸ್ಮರಣೀಯರು. ಅವರ ಆದರ್ಶ ಮಾನವ ಕುಲಕೋಟಿಗೆ ಮಾರ್ಗದರ್ಶಿಯಾಗಿದೆ ಎಂದು ತಿಳಿಸಿದರು.
ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀ ಸಾನ್ನಿಧ್ಯ ವಹಿಸಿ ಮಾತನಾಡಿ, ಸುಂದರ ಬದುಕಿನ ಸೂತ್ರಗಳಾದ ವಚನಗಳನ್ನು ಉಳಿಸಲು ಅಂದು ಶರಣರು ಪ್ರಾಣ ಕೊಟ್ಟರು. ವಚನಗಳಿಗಾಗಿ ದುಡಿದ ಅಂಥ ಮೂರು ಅಮೂಲ್ಯ ರತ್ನಗಳ ಚಿಂತನೆ ನಡೆದದ್ದು ಅರ್ಥಪೂರ್ಣ ಎಂದು ತಿಳಿಸಿದರು.
ಶರಣಬಸವ ಮಠಪತಿ ಉದ್ಘಾಟಿಸಿದರು. ಮಹಾನಂದ ಶ್ರೀಕಾಂತ ಬೀಕ್ಲೆ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಸದಸ್ಯೆಯರು ಪ್ರಾರ್ಥನೆಗೈದರು. ಶ್ರೇಯಸ್ ಪಾಟೀಲ ಗುರು ಪೂಜೆ ನೆರವೇರಿಸಿದರು. ಸಂಧ್ಯಾರಾಣಿ ಮುತ್ತಂಗೆ ಸ್ವಾಗತಿಸಿದರು. ವರ್ಷಾ ಸಂತೋಷ್ ಪಾಟೀಲ ಭಕ್ತಿ ದಾಸೋಹಗೈದರು.--ಚಿತ್ರ 25ಬಿಡಿಆರ್50ಬೀದರ್‌ನ ಬಸವಗಿರಿಯಲ್ಲಿ ನಡೆದ ಶರಣ ಸಂಗಮ ಕಾರ್ಯಕ್ರಮದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾದ ಶರಣಬಸವ ಮಠಪತಿ, ಕಲ್ಲಪ್ಪ ಡಿಗ್ಗಿ ಹಾಗೂ ರಾಜಮ್ಮ ಚಿಕ್ಕಪೇಟೆ ಅವರನ್ನು ಅಭಿನಂದಿಸಲಾಯಿತು.--