ಹಾಲಾಪೂರ: ಓಪನ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ

KannadaprabhaNewsNetwork |  
Published : May 27, 2024, 01:00 AM IST
26ಕೆಪಿಕೆವಿಟಿ01 | Kannada Prabha

ಸಾರಾಂಶ

ಕವಿತಾಳ ಸಮೀಪದ ಹಾಲಾಪೂರ ಗ್ರಾಮದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ಓಪನ್ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು.

ಕನ್ನಡಪ್ರಭ ವಾರ್ತೆ ಕವಿತಾಳ

ಸಮೀಪದ ಹಾಲಾಪೂರ ಗ್ರಾಮದ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ವಿಎಸ್‌ಎಸ್ ಕ್ರಿಕೆಟ್ ಕ್ಲಬ್ ವತಿಯಿಂದ ಓಪನ್ ಹಾರ್ಡ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ದಿ.ಬಸವರಾಜಪ್ಪಗೌಡ ಚೇರಮನ್, ದಿ. ಶಿವಶಂಕರಗೌಡ ಯದ್ದಲದಿನ್ನಿ, ದಿ.ಅಮರೇಶಪ್ಪಗೌಡ ಹಾಲಾಪೂರ ಇವರ ಸ್ಮರಣಾರ್ಥವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯನ್ನು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟ್ಟರೆಡ್ಡಿ ಹಾಲಾಪೂರ ಉದ್ಘಾಟನೆ ಮಾಡಿ ಮಾತನಾಡಿ, ಕ್ರೀಡೆಯನ್ನು ಸಹೋದರ ಮನೋಭಾವದಿಂದ ಕಾಣಬೇಕು. ಸೋಲು ಗೆಲುವು ಸಮಾನತೆಯಿಂದ ಸ್ವೀಕರಿಸಿ ಕ್ರೀಡೆ ಯಶಸ್ವಿಗೊಳಿಸಬೇಕು. ಹಾಲಾಪೂರದ ಸರಕಾರಿ ಪ್ರೌಢಶಾಲೆಗೆ ನಮ್ಮ ಗ್ರಾಮದ ದಿ.ಬಸವರಾಜಪ್ಪಗೌಡರು ವಿಶಾಲವಾದ ಆರು ಎಕರೆ ಭೂಮಿ ದಾನವಾಗಿ ಕೊಟ್ಟು ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಅವರನ್ನು ನಾವು ಯಾವಾಗಲೂ ಸ್ಮರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಂತರ ಮಾತನಾಡಿದ ಬಿ.ಕರಿಯಪ್ಪ, ಕ್ರೀಡೆಯು ಮನುಷ್ಯನ ಆರೋಗ್ಯಕ್ಕೆ ಉತ್ತಮ ಶಕ್ತಿಯಾಗಿದ್ದು, ಅದಕ್ಕಾಗಿ ನಾವೆಲ್ಲರೂ ಕ್ರೀಡೆಯನ್ನು ಸೌಹಾರ್ದವಾಗಿ ಕಾಣಬೇಕು ಎಂದು ಹೇಳಿದರು. ವ್ಯವಸ್ಥಾಪಕರಾದ ಮಹಾಂತೇಶ ಪೂಜಾರಿ ಮಾತನಾಡಿ, ಈ ಒಂದು ಕ್ರಿಕೆಟ್ ಪಂದ್ಯದಲ್ಲಿ ಒಟ್ಟು 32 ಪಂದ್ಯಗಳು ನೋಂದಾವಣಿ ಮಾಡಿಸಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ತಾಪ ಸದಸ್ಯರಾದ ಕರಿಯಪ್ಪ, ಶಿವಶರಣಿಗೌಡ, ಬಸವರಾಜ ಯಮಿಗನೂರು, ಬಸವರಾಜ ಯದ್ದಲದಿನ್ನಿ, ಬಸವರಾಜ ಜಿನ್ನಾಪೂರ, ಕರಿಯಪ್ಪ ಸಜ್ಜಲಶ್ರಿ, ಚಂದಪ್ಪ, ಮೌನೇಶ,ಸುರೇಶ, ಶರಣಬಸವ, ವಿರುಪಾಕ್ಷಿ, ಮಹಾಂತೇಶ, ಬಸವರಾಜ,ಆದೇಶ, ವಿರುಪಾಕ್ಷಿಸ್ವಾಮಿ, ಅನ್ವರ್, ದುರಗೇಶ ಇನ್ನಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಚೆ ಕಚೇರಿಗಳ ಬಲವರ್ಧನೆ ವಿಷಯ ಪ್ರಸ್ತಾಪಿಸಿದ ಸಂಸದ ಬಿವೈಆರ್‌
ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ.ನೂರಲ್ ಹುದಾ ಕರೆ