ವೈಭವದ ಹಾಲಸ್ವಾಮಿ ಮುಳ್ಳುಗದ್ದುಗೆ ಉತ್ಸವ

KannadaprabhaNewsNetwork |  
Published : Oct 06, 2025, 01:01 AM IST
ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ ಮುಳ್ಳು ಗದ್ದಿಗೆ ಉತ್ಸವ ವೈಭವದಿಂದ ಜರುಗಿತು.  | Kannada Prabha

ಸಾರಾಂಶ

ತೆಗ್ಗಿನಮಠದ ವರಸದ್ದೋಜಾತ ಶಿವಾಚಾರ್ಯರು ಉತ್ಸವಕ್ಕೆ ಚಾಲನೆ ನೀಡಿದರು.

ಹರಪನಹಳ್ಳಿ: ಪಟ್ಟಣದ ವಾಲ್ಮೀಕಿ ನಗರದಲ್ಲಿ ಸದ್ಗುರು ಶಿವಯೋಗಿ ಹಾಲಸ್ವಾಮಿ ಮುಳ್ಳು ಗದ್ದಿಗೆ ಉತ್ಸವ ಶನಿವಾರ ರಾತ್ರಿ ಅದ್ಧೂರಿ ಜರುಗಿತು.

ಪ್ರತಿ ವರ್ಷದ ಪದ್ಧತಿಯಂತೆ ವೀರಯ್ಯ ಸಣ್ಣ ಹಾಲಸ್ವಾಮಿ ರಾತ್ರಿ 11ಕ್ಕೆ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಸ್ಥಾಪಿಸಿದ ಬಳಿಕ ಹರಿಜನ ಕೇರಿಯಲ್ಲಿ ಇರುವ ಗಲ್ಲಿದುರ್ಗಾದೇವಿಯ ಕರಿಬಾನಿ ಕಟ್ಟಿಯನ್ನು ಮೂರು ಸುತ್ತು ಪ್ರದರ್ಶನ ಹಾಕಿ ಊರಮ್ಮ ದೇವಸ್ಥಾನಕ್ಕೆ ಬಂದ ನಂತರ ಸಣ್ಣ ಹಾಲಸ್ವಾಮಿಗಳು ಭಕ್ತರು ನಿರ್ಮಿಸಿದ್ದ ಹಸಿ ಜಾಲಿ ಮುಳ್ಳಿನ ಗದ್ದಿಗೆಯನ್ನು ಏರಿ ಕುಳಿತರು. ತೆಗ್ಗಿನಮಠದ ವರಸದ್ದೋಜಾತ ಶಿವಾಚಾರ್ಯರು ಉತ್ಸವಕ್ಕೆ ಚಾಲನೆ ನೀಡಿದರು.

ಭಕ್ತರ ಸಮ್ಮುಖದಲ್ಲಿ ಮುಳ್ಳಿನ ಗದ್ದಿಗೆಯ ಮೇಲೆ ಹಾರಿ, ಹಾರಿ ಕುಣಿದು ಭಕ್ತರಲ್ಲಿ ಉತ್ಸಾಹ ತುಂಬಿದರು. ನಂತರ ವಾಲ್ಮೀಕಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿ ಪುನಃ ಮಠ ತಲುಪಿದರು.

ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹಾಲೇಶ ದೋರೆಯೆ, ನಿನಗಾರು ಸರಿಯೇ ಬಹುಪರಾಕ್ ಎಂಬ ಘೋಷವಾಕ್ಯ ಹರ್ಷೋದ್ಗಾರ ಮುಗಿಲುಮುಟ್ಟಿತು. ಉತ್ಸವದಲ್ಲಿ ಸಕಲ ವಾದ್ಯಗಳು, ಕೋಲಾಟ ಕುಣಿತ ಉತ್ಸವಕ್ಕೆ ಮೆರಗು ನೀಡಿದವು.

ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ಅದ್ಯಕ್ಷ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ. ಅಣ್ಣಪ್ಪ, ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ, ಎಇಇ ವೈ.ವಸಂತಕುಮಾರ್, ಗಿಡ್ಡಳಿ ನಾಗರಾಜ್, ಮಂಡಕ್ಕಿ ಸುರೇಶ್, ವಿ.ರಮೇಶ್, ಪರಸಪ್ಪ, ವೆಂಕಟೇಶ ದ್ಯಾಮಜ್ಜಿ ದಂಡೆಪ್ಪ, ಪಿ.ಪರಶುರಾಮ, ಆರ್.ವಾಗೀಶ್ ಕೆ.ಮಹಾಬಲೇಶ್ವರ, ಮ್ಯಾಕಿ ಸಣ್ಣ ಹಾಲಪ್ಪ, ಕಮ್ಮಾರ ಅಂಜಿನಪ್ಪ, ತಿಮ್ಮಣ್ಣ, ಮ್ಯಾಕಿ ದುರುಗಪ್ಪ, ಸೇರಿದಂತೆ ಅಪಾರ ಭಕ್ತರು ಇದ್ದರು.

ಹರಪನಹಳ್ಳಿ ಪಟ್ಟಣದ ವಾಲ್ಮೀಕಿ ನಗರದಲ್ಲಿ ಸದ್ಗುರು ಶಿವಯೋಗಿ ಹಾಲಸ್ವಾಮಿಗಳವರ ಮುಳ್ಳು ಗದ್ದಿಗೆ ಉತ್ಸವ ವೈಭವದಿಂದ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ