ಕನ್ನಡಪ್ರಭ ವಾರ್ತೆ ಮೂಲ್ಕಿ
ಭಾರತದ ಕ್ರೈಸ್ತ ಚರ್ಚುಗಳ ಒಕ್ಕೂಟ, ಮಂಗಳೂರು ಹಾಗೂ ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿಯ ಸಹಯೋಗದಲ್ಲಿ ಹಳೆಯಂಗಡಿ ಇಂಡಿಯನ್ ಯೋಗ ಮಂದಿರದಲ್ಲಿ ಜರಗಿದ ಗುಲಾಬಿ ಹಾಗೂ ಇತರ ಹೂವಿನ ಸಸಿಗಳ ಸಂರಕ್ಷಣೆ ಹಾಗೂ ಕಸಿ ಕಟ್ಟುವ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತದ ಕ್ರ್ಯೆಸ್ತ ಚರ್ಚುಗಳ ಒಕ್ಕೂಟದ ಅಧ್ಯಕ್ಷ ಡೇನಿಯಲ್ ದೇವರಾಜ್ ಮಾತನಾಡಿ, ಗ್ರಾಮಸ್ಥರು ಎಲ್ಲಾ ಬಗೆಯ ಹೂವಿನ ಸಸಿಗಳನ್ನು ಬೆಳೆಸಿ, ಸಂರಕ್ಷಿಸುವುದರಿಂದ ಉತ್ತಮ ಗಾಳಿಯಿಂದ ಆರೋಗ್ಯ ವೃದ್ದಿಯಾಗುತ್ತದೆಯೆಂದು ಹೇಳಿದರು.ವೃಂದಾ ಭಟ್ ಹೂವಿನ ಸಸಿಗಳ ಕಸಿ ಕಟ್ಟುವ ವಿಧಾನ ಹಾಗೂ ಹೂವಿನ ಸಸಿಗಳನ್ನು ಬೆಳೆಸುವ ಸಂರಕ್ಷಿಸುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿತೆ ಮೂಲಕ ಮಾಹಿತಿ ನೀಡಿದರು. ಗ್ರಾಮಸ್ಥರಿಗೆ ಉಚಿತವಾಗಿ ವಿವಿಧ ಬಗೆಯ ಹೂವಿನ ಸಸಿಗಳನ್ನು ವಿತರಣೆ ಮಾಡಿದರು.
ಮೂಡಬಿದಿರೆ ಡಿಕ್ಸನ್ ಸ್ವಾಗತಿಸಿದರು. ಸಿಎಸ್‌ಐ ಶಾಲಾ ಶಿಕ್ಷಕಿ ಪ್ರಸನ್ನಿ ವಂದಿಸಿದರು. ನ್ಯಾಯಾಲಯದ ಮಹಮ್ಮದ್ ಅಕ್ಬರ್ ನಿರೂಪಿಸಿದರು.