ರಿಯಾಜಅಹ್ಮದ ಎಂ. ದೊಡ್ಡಮನಿ
ಏ. 1ರಂದು ನೆಗಳೂರಿನ ಲಿಂ. ಶಿವಾನಂದ ಶಿವಾಚಾರ್ಯ ಸ್ವಾಮಿಗಳ ಅನುಗ್ರಹದಿಂದ ಹಾಲೇಶ್ವರ ಕರ್ತೃ ಗದ್ದುಗೆ ಹಾಗೂ ದುರ್ಗಾದೇವಿ ಮೂರ್ತಿಗೆ ವೇ.ಮೂ. ಮಲ್ಲಯ್ಯ ಶಿವಯ್ಯ ಹಿರೇಮಠರಿಂದ ರುದ್ರಾಭಿಷೇಕ ನೆರವೇರಲಿದೆ. ಏ. 1ರಂದು ಮಧ್ಯಾಹ್ನ 12.31ಕ್ಕೆ 9 ಜೋಡಿ ಸಾಮೂಹಿಕ ವಿವಾಹಗಳು ಜರುಗಲಿವೆ. ಸಾನ್ನಿಧ್ಯವನ್ನು ಮುದುಕೇಶ್ವರ ಶಿವಾಚಾರ್ಯ ಸ್ವಾಮಿಗಳು ಮತ್ತು ಪೇಠಾಆಲೂರಿನ ಹಾಲೇಶ್ವರ ಶಿವಶರಣರು ವಹಿಸುವರು. ರಾತ್ರಿ 10.35ಕ್ಕೆ ಹಾಲಶಿವಯೋಗೀಶ್ವರರ ಅಡ್ಡಪಲ್ಲಕ್ಕಿ ಹಾಗೂ ಮುಳ್ಳುಗದ್ದುಗೆ ಕಾರ್ಯಕ್ರಮ ನಡೆಯಲಿದೆ.
ಏ. 2ರಂದು ಸಂಜೆ 5.31ಕ್ಕೆ ಹಾಲೇಶ್ವರ ಮಹಾರಥೋತ್ಸವ ಜರುಗಲಿದೆ. ಬಳಿಕ ನಡೆಯುವ ಧರ್ಮಸಭೆಯ ಸಾನ್ನಿಧ್ಯವನ್ನು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮಿಗಳು, ನೆಗಳೂರಿನ ಗುರುಶಾಂತೇಶ್ವರ ಶ್ರೀ, ಹಾಲೇಶ್ವರ ಶಿವಶರಣರು ಆಶೀರ್ವಚನ ನೀಡುವರು. ಆನಂತರ ಹಾಲಸೋಮೇಶ್ವರ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ ಮಕ್ಕಳಿಂದ, ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರಿಂದ ಸಾಂಸ್ಕೃತಿಕ, ಜಾನಪದ ಕಾರ್ಯಕ್ರಮ ಜರುಗಲಿವೆ.ಏ. 3ರಂದು ಸಂಜೆ 5.30ಕ್ಕೆ ಲಘು ರಥೋತ್ಸವ ನೆರವೇರಲಿದೆ. ಸಂಜೆ 7.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಡಾ. ಎಸ್.ಎಂ. ಮಠ, ಡಾ. ಮಹೇಶ ಕೇರಿ ಅವರು ಉಪನ್ಯಾಸ ನೀಡುವರು. ಕೊಪ್ಪಳದ ಜೈ ಕನ್ನಡ ಮೆಲೋಡಿಸ್ ಆರ್ಕೆಸ್ಟ್ರಾ ತಂಡದಿಂದ ಸಂಗೀತ ರಸಮಂಜರಿ, ಹಾಸ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ರೊಟ್ಟಿ ಜಾತ್ರೆ ಯಶಸ್ಸಿಗಾಗಿ ಸತತ ಎರಡು ತಿಂಗಳಿನಿಂದ ಜಾತ್ರಾ ಸಮಿತಿ ಅಧ್ಯಕ್ಷ ವೇ.ಮೂ. ಮಲ್ಲಯ್ಯ ಹಿರೇಮಠ, ಗೌರವ ಅಧ್ಯಕ್ಷ ಹಾಲಪ್ಪ ಕಬ್ಬೆರಳ್ಳಿ, ಉಪಾಧ್ಯಕ್ಷ ಹಾಲೇಶ ಸೂಡಿ, ಕಾಯದರ್ಶಿಗಳಾದ ಹಾಲಪ್ಪ ಹರ್ತಿ, ರವಿ ಸಂಶಿ, ಜಾತ್ರಾ ಸಮಿತಿ ಸದಸ್ಯರು, ಹಿರಿಯರು, ಮಹಿಳೆಯರು, ಯುವಕರು ಶ್ರಮಿಸುತ್ತಿದ್ದಾರೆ.