ಹಳಿಯಾಳ ಪುರಸಭೆ: 23 ವಾರ್ಡ್‌ಗಳ ಕರಡು ಮೀಸಲಾತಿ ಪ್ರಕಟ

KannadaprabhaNewsNetwork |  
Published : Nov 14, 2025, 03:30 AM IST
13ಎಚ್.ಎಲ್.ವೈ-1: ಹಳಿಯಾಳ ಪುರಸಭೆ. | Kannada Prabha

ಸಾರಾಂಶ

ಪುರಸಭೆಯ 23 ವಾರ್ಡ್‌ಗಳಿಗೆ ಪ್ರಕಟಗೊಂಡ ಕರಡು ಮೀಸಲಾತಿಯು ಪುರಸಭೆಯ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರು ಸ್ಥಾಯಿ ಸಮಿತಿ ಚೇರ್‌ಮನ್ ಸೇರಿದಂತೆ ಹಲವು ಸದಸ್ಯರು ಮತ್ತೆ ತಮ್ಮದೇ ವಾರ್ಡ್‌ನಿಂದ ಸ್ಪರ್ಧಿಸಿದಂತೆ ಮಾಡಿದೆ.

ವಾರ್ಡ್‌ ಕಳೆದುಕೊಂಡ ಹಲವು ಸದಸ್ಯರು, ಹಾಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾಯಿ ಸಮಿತಿ ಚೇರ್‌ಮನ್

ಸ್ಪರ್ಧಿಸಲು ತಯಾರಿ ನಡೆಸಿದ ಆಕಾಂಕ್ಷಿಗಳಿಗೆ ನಿರಾಶೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಪುರಸಭೆಯ 23 ವಾರ್ಡ್‌ಗಳಿಗೆ ಪ್ರಕಟಗೊಂಡ ಕರಡು ಮೀಸಲಾತಿಯು ಪುರಸಭೆಯ ಹಾಲಿ ಅಧ್ಯಕ್ಷ, ಉಪಾಧ್ಯಕ್ಷರು ಸ್ಥಾಯಿ ಸಮಿತಿ ಚೇರ್‌ಮನ್ ಸೇರಿದಂತೆ ಹಲವು ಸದಸ್ಯರು ಮತ್ತೆ ತಮ್ಮದೇ ವಾರ್ಡ್‌ನಿಂದ ಸ್ಪರ್ಧಿಸಿದಂತೆ ಮಾಡಿದೆ.

ಕಾಂಗ್ರೆಸ್ ಹಾಲಿ 10 ಸದಸ್ಯರು ಹಾಗೂ ಬಿಜೆಪಿ 6 ಸದಸ್ಯರ ವಾರ್ಡ್‌ ಮೀಸಲಾತಿ ಬದಲಾಗಿದೆ. ಮಾಜಿ ಅಧ್ಯಕ್ಷರಾದ ಅಜರುದ್ದೀನ್‌ ಬಸರಿಕಟ್ಟಿ, ಶಂಕರ ಬೆಳಗಾಂವಕರ ಅವರ ವಾರ್ಡಗಳಿಗೆ ಅದೇ ಮೀಸಲಾತಿ ಮುಂದುವರಿದಿದ್ದರೆ, ಮಾಜಿ ಉಪಾಧ್ಯಕ್ಷರ ವಾರ್ಡ್‌ ಮೀಸಲಾತಿ ಬದಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ ಹಲವಾರು ಅಕಾಂಕ್ಷಿಗಳಿಗೆ ಪ್ರಕಟಿತ ಮೀಸಲಾತಿ ನಿರಾಸೆಯುಂಟು ಮಾಡಿದೆ.

ಅದೇ ಮೀಸಲಾತಿ:

ಕಾಂಗ್ರೆಸ್‌ನ ರುದ್ರಪ್ಪ ಕೇಸರೆಕರ, ಮಾಜಿ ಅಧ್ಯಕ್ಷ ಅಜರುದ್ದೀನ್‌ ಬಸರಿಕಟ್ಟಿ, ಶಂಕರ ಬೆಳಗಾಂವಕರ, ಸುರೇಶ ತಳವಾರ, ಶಮೀಮಬಾನು ಜಂಬೂವಾಲೆ ಹಾಗೂ ಬಿಜೆಪಿಯ ಸಂಗೀತಾ ಜಾಧವ ಅವರ ವಾರ್ಡ್‌ ಮೀಸಲಾತಿ ಬದಲಾಗಿಲ್ಲ.

ಬದಲಾದ ಮೀಸಲಾತಿ:

ಹಾಲಿ ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಸ್ಥಾಯಿ ಸಮಿತಿ ಚೇರ್‌ಮನ್ ಅನಿಲ ಚವ್ಹಾಣ, ಮಾಜಿ ಉಪಾಧ್ಯಕ್ಷರಾದ ಫಯಾಜ್ ಶೇಖ್, ಸುವರ್ಣಾ ಎಸ್.ಎಂ., ನವೀನ ಕಾಟ್ಕರ, ಪ್ರಭಾಕರ ಗಜಾಜೋಶ, ಮುಸರತಜಹಾ ಬಸ್ಸಾಪುರ, ಸುರೇಶ ವಗ್ರಾಯಿ, ಮೋಹನ ಮೇಲಗಿ ಹಾಗೂ ಬಿಜೆಪಿಯ ಚಂದ್ರಕಾಂತ ಕಮ್ಮಾರ, ಸಂತೋಷ ಘಟಕಾಂಬ್ಳೆ, ರಾಜೇಶ್ವರಿ ಹಿರೇಮಠ, ಶಾಂತಾ ಹಿರೇಕರ, ರೂಪಾ ಗಿರಿ ಹಾಗೂ ಉದಯ ಹೂಲಿ ಅವರ ನಿಧನದಿಂದ ತೆರವಾಗಿದ್ದ ಮಾರುಕಟ್ಟೆ ರಸ್ತೆ ವಾರ್ಡ್‌ ಹಾಗೂ ಜೆಡಿಎಸ್‌ನ ಶಬಾನಾ ಅಂಕೊಲೇಕರ ಅವರ ವಾರ್ಡ್‌ ಮೀಸಲಾತಿ ಬದಲಾಗಿದೆ.

ಮೀಸಲಾತಿ ವಿವರ ಇಂತಿದೆ:

1ನೇ ವಾರ್ಡ್‌ ಸಾಮಾನ್ಯ, 2ನೇ ವಾರ್ಡ್‌ ಸಾಮಾನ್ಯ, 3ನೇ ವಾರ್ಡ್‌ ಸಾಮಾನ್ಯ ಮಹಿಳೆ, 4ನೇ ವಾರ್ಡ್‌ ಹಿಂದುಳಿದ ವರ್ಗ (ಬಿ), 5ನೇ ವಾರ್ಡ್‌ ಹಿಂದುಳಿದ ವರ್ಗ (ಎ) ಮಹಿಳೆ, 6ನೇ ವಾರ್ಡ್‌ ಸಾಮಾನ್ಯ, 7ನೇ ವಾರ್ಡ್‌ ಸಾಮಾನ್ಯ, 8ನೇ ವಾರ್ಡ್‌ ಹಿಂದುಳಿದ ವರ್ಗ (ಎ), 9ನೇ ವಾರ್ಡ್‌ ಸಾಮಾನ್ಯ ಮಹಿಳೆ, 10ನೇ ವಾರ್ಡ್‌ ಹಿಂದುಳಿದ ವರ್ಗ (ಎ) ಮಹಿಳೆ, 11ನೇ ವಾರ್ಡ್‌ ಸಾಮಾನ್ಯ, 12ನೇ ವಾರ್ಡ್‌ ಸಾಮಾನ್ಯ, 13ನೇ ವಾರ್ಡ್‌ ಹಿಂದುಳಿದ ವರ್ಗ (ಎ), 14ನೇ ವಾರ್ಡ್‌ ಸಾಮಾನ್ಯ ಮಹಿಳೆ, 15ನೇ ವಾರ್ಡ್‌ ಹಿಂದುಳಿದ ವರ್ಗ (ಎ) ಮಹಿಳೆ, 16ನೇ ವಾರ್ಡ್‌ ಪರಿಶಿಷ್ಟ ಜಾತಿ, 17ನೇ ವಾರ್ಡ್‌ ಪರಿಶಿಷ್ಟ ಜಾತಿ, 18ನೇ ವಾರ್ಡ್‌ ಪರಿಶಿಷ್ಟ ಜಾತಿ ಮಹಿಳೆ, 19ನೇ ವಾರ್ಡ್‌ ಪರಿಶಿಷ್ಟ ಪಂಗಡ, 20ನೇ ವಾರ್ಡ್‌ ಸಾಮಾನ್ಯ ಮಹಿಳೆ, 21ನೇ ವಾರ್ಡ್‌ ಹಿಂದುಳಿದ ವರ್ಗ (ಎ), 22ನೇ ವಾರ್ಡ್‌ ಸಾಮಾನ್ಯ ಮಹಿಳೆ, 23ನೇ ವಾರ್ಡ್‌ ಸಾಮಾನ್ಯ ಮಹಿಳೆ.

ಈ ಅಧಿಸೂಚನೆಗೆ ಸಂಬಂಧಿಸಿದಂತೆ ಯಾವುದೇ ಸಲಹೆ, ಆಕ್ಷೇಪಣೆಗಳು ಸಲ್ಲಿಸಲು ಇಚ್ಛಿಸುವರು ಲಿಖಿತವಾಗಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಜಿಲ್ಲಾಧಿಕಾರಿಗೆ ಸಲ್ಲಿಸಲು ಅವಕಾಶವಿದೆ.

PREV

Recommended Stories

ಮೊಬೈಲ್‌ ಬಳಕೆ : ಉಗ್ರ, ವಿಕೃತ ಕಾಮಿಗೀಗ ಗ್ರಿಲ್‌
ಸುಪ್ರೀಂನಲ್ಲಿ ರಾಜ್ಯಕ್ಕೆ ಮೇಕೆದಾಟು ವಿಜಯ - ಯೋಜನೆ ಪ್ರಶ್ನಿಸಿದ್ದ ತಮಿಳುನಾಡು ಅರ್ಜಿ ವಜಾ