ಹಾಲ್ಮಾರ್ಕ್‌ ತಪಾಸಣೆ : ಅಂಗಡಿ ಬಾಗಿಲು ಹಾಕಿ ಓಡಿದ ಚಿನ್ನಬೆಳ್ಳಿ ವರ್ತಕರು

KannadaprabhaNewsNetwork |  
Published : Sep 20, 2026, 02:45 AM IST
19ಎಚ್ಎಸ್ಎನ್10 : ಹೊಳೆನರಸೀಪುರದ ಚಿನ್ನಬೆಳ್ಳಿ ಅಂಗಡಿಗಳಿಗೆ ಹಾಲ್ಮಾರ್ಕ್ ಯುನಿಕ್ ಐಡೆಂಟಿಫಿಕೇ?ನ್ ನಂಬರ್ ಪರಿಶೀಲನಾಧಿಕಾರಿ ಯಶೋಧ ಅವರು ಶನಿವಾರ ಕೆಲವು ಚಿನ್ನಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ ಚಿನ್ನದ ಶುದ್ದತೆ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಸರ್ಕಾರದ ನಿಯಮದಂತೆ ಎಲ್ಲಾ ಜ್ಯುವೆಲ್ಲರಿ ಅಂಗಡಿಗಳು ಹಾಲ್ಮಾರ್ಕ್ ಯೂನಿಕ್ ಐಡೆಂಟಿಫೀಕೇಷನ್ (ಎಚ್‌ಯುಐಡಿ) ನಂಬರ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನು ಕೇಂದ್ರ ಸರ್ಕಾರ ೨೦೨೧ರಲ್ಲಿ ಜಾರಿಗೆ ತಂದಿದೆ. ಆದರೆ ರಾಜ್ಯದಲ್ಲಿ ಅನೇಕ ಜ್ಯುವೆಲ್ಲರಿ ಅಂಗಡಿಗಳು ಇನ್ನೂ ಈ ನಂಬರ್ ತೆಗೆದುಕೊಂಡಿಲ್ಲ. ಈ ನಂಬರ್ ತಗೆದುಕೊಳ್ಳದ ಅಂಗಡಿಗಳ ವಿರುದ್ಧ ಹಾಗೂ ಚಿನ್ನದ ಶುದ್ಧತೆ ಇಲ್ಲದಿದ್ದರೆ ಪ್ರಕರಣ ದಾಖಲಿಸುತ್ತೇವೆ. ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನ ಖರೀದಿಸುವವರು ಕಡ್ಡಾಯವಾಗಿ ಬಿಲ್ ಪಡೆದಿರಬೇಕು. ಬಿಲ್ ಪಡೆದು ಚಿನ್ನ ಖರೀದಿಸಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲು ಸಹಾಯವಾಗುತ್ತದೆ ಮತ್ತು ಚಿನ್ನ ಕಳುವಾದರೆ ಪೊಲೀಸರಿಗೆ ದೂರು ನೀಡಲು ಹಾಗೂ ಚಿನ್ನ ಸಿಕ್ಕಿದಾಗ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

ಹೊಳೆನರಸೀಪುರ: ಪಟ್ಟಣದಲ್ಲಿ ಶನಿವಾರ ಬೆಳಗ್ಗೆ ಚಿನ್ನದ ಶುದ್ಧತೆ ಪರಿಶೀಲಿಸುವ ಹಾಲ್ಮಾರ್ಕ್ ಯುನಿಕ್ ಐಡೆಂಟಿಫಿಕೇಷನ್ ನಂಬರ್ (ಹಾಲ್ ಮಾರ್ಕ್)ಪರಿಶೀಲನಾಧಿಕಾರಿ ಯಶೋಧ ಅವರು ಕೆಲ ಚಿನ್ನ- ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿದ ವಿಷಯ ತಿಳಿಯುತ್ತಿದ್ದಂತೆ ಕೆಲವು ಚಿನ್ನ- ಬೆಳ್ಳಿ ವರ್ತಕರು ಅಂಗಡಿಗಳಿಗೆ ಬೀಗ ಹಾಕಿ ತೆರಳಿದ್ದು, ಹಾಲ್ ಮಾರ್ಕ್ ಇದ್ದರೂ ಸಹ ಗ್ರಾಹಕರನ್ನು ವಂಚಿಸಬಹುದೇ ಎಂಬ ಪ್ರಶ್ನೆ ನಾಗರಿಕರನ್ನು ಕಾಡುತ್ತಿದೆ. ಗ್ರಾಹಕರ ಹಿತದೃಷ್ಟಿಯಿಂದ ಈ ರೀತಿಯ ತಪಾಸಣಾ ಭೇಟಿಯನ್ನು ನಿರಂತರವಾಗಿ ನಡೆಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಹಾಲ್‌ಮಾರ್ಕ್ ಯುನಿಕ್ ಐಡೆಂಟಿಫಿಕೇಷನ್ ನಂಬರ್ (ಹಾಲ್‌ಮಾರ್ಕ್) ಪರಿಶೀಲನಾಧಿಕಾರಿ ಯಶೋಧ ಅವರು ಕೆಲವು ಜ್ಯುವೆಲರ್ಸ್ ಗಳಿಗೆ ಭೇಟಿ ನೀಡಿ ಎಚ್.ಯು.ಐ.ಡಿ ನಂಬರ್ ತೆಗೆದುಕೊಂಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ ನಿಯಮದಂತೆ ಹಾಲ್ಮಾರ್ಕ್ ಹಾಕಿರುವ ಯಾವುದಾದರೂ ಒಂದು ಒಡವೆಯ ೨ ಗ್ರಾಂ ಚಿನ್ನವನ್ನು ಅಂಗಡಿಗಳಲ್ಲಿ ಪರಿಶೀಲನೆಗಾಗಿ ತೆಗೆದುಕೊಂಡರು.

ನಂತರ ಹಾಲ್ ಮಾರ್ಕ್ ಪರಿಶೀಲನಾಧಿಕಾರಿ ಯಶೋಧ ಅವರು ಮಾತನಾಡಿ, ಸರ್ಕಾರದ ನಿಯಮದಂತೆ ಎಲ್ಲಾ ಜ್ಯುವೆಲ್ಲರಿ ಅಂಗಡಿಗಳು ಹಾಲ್ಮಾರ್ಕ್ ಯೂನಿಕ್ ಐಡೆಂಟಿಫೀಕೇಷನ್ (ಎಚ್‌ಯುಐಡಿ) ನಂಬರ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎನ್ನುವ ನಿಯಮವನ್ನು ಕೇಂದ್ರ ಸರ್ಕಾರ ೨೦೨೧ರಲ್ಲಿ ಜಾರಿಗೆ ತಂದಿದೆ. ಆದರೆ ರಾಜ್ಯದಲ್ಲಿ ಅನೇಕ ಜ್ಯುವೆಲ್ಲರಿ ಅಂಗಡಿಗಳು ಇನ್ನೂ ಈ ನಂಬರ್ ತೆಗೆದುಕೊಂಡಿಲ್ಲ. ಈ ನಂಬರ್ ತಗೆದುಕೊಳ್ಳದ ಅಂಗಡಿಗಳ ವಿರುದ್ಧ ಹಾಗೂ ಚಿನ್ನದ ಶುದ್ಧತೆ ಇಲ್ಲದಿದ್ದರೆ ಪ್ರಕರಣ ದಾಖಲಿಸುತ್ತೇವೆ. ಜ್ಯುವೆಲ್ಲರಿ ಅಂಗಡಿಗಳಲ್ಲಿ ಚಿನ್ನ ಖರೀದಿಸುವವರು ಕಡ್ಡಾಯವಾಗಿ ಬಿಲ್ ಪಡೆದಿರಬೇಕು. ಬಿಲ್ ಪಡೆದು ಚಿನ್ನ ಖರೀದಿಸಿ ಏನಾದರೂ ವ್ಯತ್ಯಾಸ ಕಂಡು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲು ಸಹಾಯವಾಗುತ್ತದೆ ಮತ್ತು ಚಿನ್ನ ಕಳುವಾದರೆ ಪೊಲೀಸರಿಗೆ ದೂರು ನೀಡಲು ಹಾಗೂ ಚಿನ್ನ ಸಿಕ್ಕಿದಾಗ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಜಿ ರಾಮ್‌ ಜಿ’ ಅಡಿ ವಸತಿ ಯೋಜನೆಕೈಕೊಳ್ಳಲು ಕೇಂದ್ರ ಅವಕಾಶ: ಖಂಡ್ರೆ
ಭೂಗಳ್ಳನನ್ನು ಪಕ್ಕದಲ್ಲೇ ಕೂರಿಸಿಕೊಂಡು ಹಗರಣಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ: ಸಚಿವ