ಕೆಲವು ಯುಟ್ಯೂಬರ್‌ಗಳು ರಾಜಕಾರಣಕೋಸ್ಕರ ಸದಾ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಇಂತಹ ಅಪಸ್ವರಗಳಿಗೆ ಕಿವಿಕೊಡಬಾರದು. ತಾಲೂಕಿನ ವಡ್ಡರಹಳ್ಳಿ ಕೆರೆ ಹೊರತುಪಡಿಸಿ ಎಲ್ಲಾ ಕರೆಗಳಿಗೆ ನೀರು ತುಂಬಿಸಲಾಗಿದೆ. ಇಲಾಖೆ ಅಧಿಕಾರಗಳನ್ನು ಗುರಿಯಾಗಿಸಿಕೊಂಡು ಕೆಲವರು ಶೋಷಣೆ ಮಾಡುತ್ತಿದ್ದಾರೆ.
ಮಳವಳ್ಳಿ:
ವ್ಯಕ್ತಿಯೊಬ್ಬರು ಭೂ ಗಳ್ಳನನ್ನು ಪಕ್ಕದಲ್ಲಿಯೇ ಕೂರಿಸಿಕೊಂಡು ತಾಲೂಕಿನ ಭೂ ಹಗರಣಗಳ ಬಗ್ಗೆ ಪ್ರಶ್ನೆ ಮಾಡುತ್ತಾರೆ ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಪರೋಕ್ಷವಾಗಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ವಿರುದ್ಧ ಕಿಡಿಕಾರಿದರು.ತಾಲೂಕಿನ ಕಿರುಗಾವಲು ವೀರಭದ್ರೇಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು, ತಮ್ಮ ಅವಧಿಯಲ್ಲಿ ಅಧಿಕಾರ ದುರುಪಯೋಗ ಪಡಿಸಿಕೊಂಡವರು. ಮಂಡ್ಯದಲ್ಲಿ ಭೂ ಹಗರಣದ ಬಗ್ಗೆ ಮಾತನಾಡುತ್ತಾರೆ. ಭೂ ಅಕ್ರಮದ ಬಗ್ಗೆ ಎಲ್ಲಾ ಮಾಹಿತಿಯೂ ಲಭ್ಯವಿದೆ. ಮಾಹಿತಿ ಹಕ್ಕು ನಿಯಮದಡಿ ಅರ್ಜಿ ಸಲ್ಲಿಸಿ ಪಡೆಯಬಹುದು ಎಂದು ತಿರುಗೇಟು ನೀಡಿದರು.
ಕೆಲವು ಯುಟ್ಯೂಬರ್‌ಗಳು ರಾಜಕಾರಣಕೋಸ್ಕರ ಸದಾ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಿಕ್ಕು ತಪ್ಪಿಸಲು ಹೊರಟಿದ್ದಾರೆ. ಇಂತಹ ಅಪಸ್ವರಗಳಿಗೆ ಕಿವಿಕೊಡಬಾರದು. ತಾಲೂಕಿನ ವಡ್ಡರಹಳ್ಳಿ ಕೆರೆ ಹೊರತುಪಡಿಸಿ ಎಲ್ಲಾ ಕರೆಗಳಿಗೆ ನೀರು ತುಂಬಿಸಲಾಗಿದೆ. ಇಲಾಖೆ ಅಧಿಕಾರಗಳನ್ನು ಗುರಿಯಾಗಿಸಿಕೊಂಡು ಕೆಲವರು ಶೋಷಣೆ ಮಾಡುತ್ತಿದ್ದಾರೆ. ಈ ಬಗ್ಗೆ ಸರಿ ತಪ್ಪುಗಳನ್ನು ಪ್ರಶ್ನೆ ಮಾಡಬೇಕಿದೆ ಎಂದರು.ಮುಂದಿನ ಡಿಸೆಂಬರ್ ತಿಂಗಳೊಳಗೆ ಸ್ಥಳೀಯ ಚುನಾವಣೆಗಳು ನಡೆಯಲಿದೆ. ಜ್ಞಾನದ ಅರಿವಿನೊಂದಿಗೆ ಭವಿಷ್ಯದ ಚಿಂತನೆಗಾಗಿ ಯುವ ಸಮೂಹ ಸೇವೆಯಲ್ಲಿ ಯಾರು ಪಾಲುದಾರರು ಆಗುತ್ತಾರೋ ಅವರನ್ನೇ ಆಯ್ಕೆ ಮಾಡಲಿದ್ದಾರೆ. ಉತ್ತಮ ನಾಯಕತ್ವ ಉಳ್ಳವರು ಭವಿಷ್ಯದ ನಾಯಕರಾಗುತ್ತಾರೆಂದು ಭವಿಷ್ಯ ನುಡಿದರು.
ಧರ್ಮ, ಜಾತಿಯ ಹೆಸರಿಯಲ್ಲಿ ರಾಜಕಾರಣ ಮಾಡುತ್ತಿರುವ ನಡುವೆಯೂ ಕಾಂಗ್ರೆಸ್ ಸರ್ಕಾರ ಯುವ ಪೀಳಿಗೆಗೆ ಸಂವಿಧಾನದ ಅರಿವು ಮತ್ತು ನಾಯಕತ್ವದ ಗುಣಗಳನ್ನು ಬೆಳಸುವ ನಿಟ್ಟಿನಲ್ಲಿ ಭಾರತ್ ಜೋಡೋ ಹಮ್ಮಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ನೊಂದಾಯಿಸಿಕೊಳ್ಳಬೇಕು ಎಂದು ಕರೆ ನೀಡಿದರು.