ಕನ್ನಡಪ್ರಭ ವಾರ್ತೆ ಶಹಾಪುರ
ತಾಲೂಕಿನ ಸೈದಾಪುರ ಗ್ರಾಮದಲ್ಲಿ ನಡೆದ ಮಾಳಿಂಗರಾಯ ಜಾತ್ರಾ ಮಹೋತ್ಸವ ಹಾಗೂ ಹಾಲುಮತ ಸಂಸ್ಕೃತಿ ವೈಭವದ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಈ ಗ್ರಾಮದಲ್ಲಿ ಪ್ರತಿ ವರ್ಷ ಅತ್ಯಂತ ವಿಜೃಂಭಣೆಯಿಂದ ಬಹು ವಿಶಿಷ್ಟವಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಜಾತ್ರಾ ಸಮಯದಲ್ಲಿ ಸಪ್ತ ಪಲ್ಲಕ್ಕಿಗಳ ಆಗಮನ. ಹಾಲುಮತ ಜಾತ್ರೆಗೆ ಮೆರಗನ್ನು ತಂದಿದೆ. ಈ ಸಮಾಜದ ಪ್ರತಿಯೊಬ್ಬರು ಮೊದಲು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಅತ್ಯಂತ ಅವಶ್ಯಕವಾಗಿದೆ. ಹಿಂದುಳಿದಿರುವ ಈ ಸಮಾಜದಲ್ಲಿ ಒಗ್ಗಟ್ಟು ಮತ್ತು ಮುಂದೆ ತರಲು ಈ ಧಾರ್ಮಿಕ ಕಾರ್ಯ ಸಹಕಾರಿಯಾಗಿದೆ ಎಂದರು.ತಾಲೂಕು ಕುರುಬ ಸಂಘದ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಮಾತನಾಡಿ, ಕಾಯಕವೇ ಕೈಲಾಸವೆಂದು ನಂಬಿ ಕೃಷಿ, ಕುರಿ ಸಾಕಾಣಿಕೆ, ಪಶು ಸಂಗೋಪನೆಯಲ್ಲಿ ತೊಡಗಿರುವ ಹಾಲಿನಂತ ಮನಸ್ಸುಳ್ಳ ನಮ್ಮ ಸಮಾಜದ ಸಂಸ್ಕೃತಿ ಶ್ರೇಷ್ಠವಾಗಿದೆ. ಈ ದೇಶಕ್ಕೆ, ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಹಾಲುಮತ ಸಮಾಜ ಸರ್ವ ಶ್ರೇಷ್ಠ ಸಮಾಜವಾಗಿದೆ. ಈ ಜಾತ್ರಾ ಮಹೋತ್ಸವ ಹಾಗೂ ಹಾಲುಮತ ಸಂಸ್ಕೃತಿ ವೈಭವ ಯಶಸ್ವಿಯಾಗಲು ಪ್ರತಿಯೊಬ್ಬರ ಸಹಾಯ ಸಹಕಾರ ಅಗತ್ಯವಾಗಿದೆ ಎಂದರು.
ಫೆ.24ರೊಳಗೆ ರಾಯಣ್ಣನ ಮೂರ್ತಿ ಲೋಕಾರ್ಪಣೆ
ಸುಮಾರು 24 ಲಕ್ಷ ರು. ಗಳ ಸ್ವಂತ ವೆಚ್ಚದಲ್ಲಿ 18 ಅಡಿ ಎತ್ತರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಈಗಾಗಲೇ ಶಹಾಪುರ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಟೌನ್ ಹಾಲ್‌ನ ಮುಂದುಗಡೆ ನಿಲ್ಲಿಸಲಾಗಿದೆ.ಅಲ್ಲದೆ ಟೌನ್ ಹಾಲ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಭಾಭವನ ಎಂದು ನಾಮಕರಣ ಸಹ ಮಾಡಲಾಗಿದೆ. ಬರುವ ಫೆ.24ರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಲಕ ಈ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.
ಹಾಲುಮತದ ಕಲ್ಯಾಣ ಮಂಟಪಕ್ಕಾಗಿ ನಗರ ಹೊರ ವಲಯದ ಕನ್ಯಾಕೋಳೂರು ಹಾಸ್ಟೆಲ್‌ಗಳ ಸಂಕೀರ್ಣ ಬಳಿ 20 ಸಾವಿರ ಚದರಡಿ ಸಿ.ಎ ಸೈಟಿದೆ. ಅದನ್ನು ಹಾಲುಮತ ಸಮುದಾಯದವರು ಖರೀದಿಸಿದರೆ ಕಲ್ಯಾಣ ಮಂಟಪಕ್ಕೆ 1 ರಿಂದ 1.50 ಕೋಟಿ ರು. ಗಳ ಅನುದಾನ ಒದಗಿಸಿಕೊಡುವ ಕೆಲಸ ಮಾಡುತ್ತೇನೆ. ಈ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.ಸಸ