ಲೋಕಾ ಚುನಾವಣೆ ವೇಳೆ ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆ

KannadaprabhaNewsNetwork |  
Published : Apr 16, 2024, 01:13 AM ISTUpdated : Apr 16, 2024, 10:45 AM IST
69 | Kannada Prabha

ಸಾರಾಂಶ

ಅಭ್ಯರ್ಥಿ ಸುನಿಲ್ ಬೋಸ್ ಅವರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳಿಗಿಂತ ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ನೀಡಲಾಗುವುದು

  ಎಚ್.ಡಿ. ಕೋಟೆ :  ನಾನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ವೇಳೆ ನೀಡಿದ ಮತಗಳಿಗಿಂತ ಹೆಚ್ಚಿನ ಮತಗಳನ್ನು ಸುನಿಲ್ ಬೋಸ್ ಅವರಿಗೆ ನೀಡಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಹಂಪಾಪುರ ಗ್ರಾಮದಲ್ಲಿ ಸೋಮವಾರ ಕಾಂಗ್ರೆಸ್ ನಿಂದ ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ಪರ ನಡೆದ ಮತಯಾಚನೆ ಸಭೆಯಲ್ಲಿ ಅವರು ಮಾತನಾಡಿದರು.

ಅಭ್ಯರ್ಥಿ ಸುನಿಲ್ ಬೋಸ್ ಅವರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಎಲ್ಲ ಕ್ಷೇತ್ರಗಳಿಗಿಂತ ನಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಲೀಡ್ ನೀಡಲಾಗುವುದು ಎಂದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಮೀಸಲು ಅಭ್ಯರ್ಥಿ ಸುನಿಲ್ ಬೋಸ್ ಮಾತನಾಡಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಪ್ರಚಾರ ಮಾಡಿ ಈ ಕ್ಷೇತ್ರದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅನಿಲ್ ಚಿಕ್ಕಮಾದು ಅವರು ಜಯಗಳಿಸಿದ್ದರು ಎಂದರು.

ಕಳೆದ ಹತ್ತು ವರ್ಷಗಳ ಹಿಂದೆ ಬಿಜೆಪಿಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಜಾರಿಗೊಳಿಸದೆ ಇದ್ದರೂ ಸಹ, ಈ ಬಾರಿಯೂ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ, ಇದು ಹಾಸ್ಯಾಸ್ಪದ ಎಂದರು.

ವಿವಿಧ ಪಕ್ಷಗಳನ್ನು ತೊರೆದು ಅನೇಕ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.

ಮಾಜಿ ಸಂಸದ ಕಾಗಲವಾಡಿ ಎಂ. ಶಿವಣ್ಣ, ಚಲನಚಿತ್ರ ನಿರ್ಮಾಪಕ ಸಂದೇಶ್, ಪಕ್ಷದ ಅಧ್ಯಕ್ಷರಾದ ಏಜಾಜ್ ಪಾಷ, ಮಾದಪ್ಪ, ಪುರಸಭಾ ಸದಸ್ಯ ಎಚ್.ಸಿ. ನರಸಿಂಹಮೂರ್ತಿ, ನಿಗಮ ಮಂಡಳಿ ಮಾಜಿ ಅಧ್ಯಕ್ಷ ಸೀತಾರಾಂ, ನಂದಿನಿ ಚಂದ್ರಶೇಖರ್, ಮಂಜುನಾಥ್, ಅಭಿ, ಕೆಂಡಗಣ್ಣಸ್ವಾಮಿ, ಪ್ರಕಾಶ್, ಪಿ. ರವಿ, ಚಿಕ್ಕವೀರನಾಯಕ, ಸೋಮೇಶ್, ಸತೀಶ್ ಗೌಡ, ಮರಿಸಿದ್ದಯ್ಯ, ಜಿನ್ನಹಳ್ಳಿ ರಾಜನಾಯಕ, ಸದಾಶಿವಪ್ಪ, ಬೋರೆಗೌಡ, ರಾಜೇಗೌಡ, ಪ್ರಭು, ಕ್ಯಾತನಹಳ್ಳಿ ನಾಗರಾಜು, ಕುಮಾರ್, ಕವಿತಾ ಸೋಮು, ಸಿದ್ದನಾಯಕ, ಶಿವರಾಜು, ಗಿರೀಶ್, ಪ್ರೇಂಸಾಗರ್, ಸಿದ್ದರಾಮು, ಶೇಖರ್, ಸಿದ್ದನಾಯಕ, ಸಣ್ಣಸ್ಬಾಮಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ