ಕನ್ನಡಪ್ರಭ ವಾರ್ತೆ ಹಂಪಿ
ಹಂಪಿ ಉತ್ಸವದ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಈ ಕೆಳಕಂಡಂತೆ ವಿಜೇತರಾಗಿದ್ದಾರೆ.ರಾಜ್ಯ ಮಟ್ಟದ ವಿಜೇತರು ಮಹಿಳಾ ವಿಭಾಗ:
50 ಕಿಲೋ ವಿಭಾಗದಲ್ಲಿ ಬಾಗಲಕೋಟೆಯ ಗೋಪವ್ವ ವಿಜೇತರಾಗಿ ಹಂಪಿ ಕಿಶೋರಿ ಪಟ್ಟ ಗಳಿಸಿದ್ದಾರೆ. ಗದಗಿನ ಸ್ನೇಹ ದ್ವಿತೀಯ ಸ್ಥಾನ ಪಡೆದಿದ್ದಾರೆ. 51 -54 ಕಿಲೋ ವಿಭಾಗದಲ್ಲಿ ಹಳಿಯಾಳದ ಕಾವ್ಯ ವಿಜೇತರಾಗಿ ಹಂಪಿ ಕುಮಾರಿಯಾಗಿದ್ದಾಳೆ. ದ್ವಿತೀಯ ಸ್ಥಾನವನ್ನು ಬಾಗಲಕೋಟೆಯ ಸೋನಿಯಾ ಪಡೆದಿದ್ದಾರೆ.ಬಾಗಲಕೋಟೆಯ ಐಶ್ವರ್ಯ ಕರಿಗಾರ 55-57 ಕಿಲೋ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾಗಿ ಮಹಿಳಾ ಕೇಸರಿ ಪಟ್ಟ ಪಡೆದಿದ್ದಾರೆ. ಹಳಿಯಾಳದ ಕಾವೇರಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 58 ಕಿಲೋ ಮೇಲ್ಪಟ್ಟ ಸ್ಪರ್ಧೆಯಲ್ಲಿ ಹಳಿಯಾಳದ ಮನಿಷಾ ವಿಜೇತರಾಗಿ ಹಂಪಿ ಮಹಿಳಾ ಕಂಠೀರವರಾಗಿದ್ದಾರೆ. ಪ್ರತೀಕ್ಷಾ ಹಳಿಯಾಳ ದ್ವಿತೀಯ ಸ್ಥಾನ ಪಡೆದಿದ್ದಾರೆ.
ರಾಜ್ಯ ಮಟ್ಟದ ವಿಜೇತರು ಪುರುಷರ ವಿಭಾಗ:ರಾಜ್ಯ ಮಟ್ಟದ ಸ್ಪಧೆಯಲ್ಲಿ 57 ರಿಂದ 65 ಕಿಲೋ ವಿಭಾಗದಲ್ಲಿ ದಾವಣಗೆರೆಯ ಸತ್ಯರಾಜ ಹಂಪಿ ಕಿಶೋರ ಪ್ರಶಸ್ತಿ ಪಡೆದರೆ, ಮಂಜುನಾಥ ಕೆ. ದ್ವಿತೀಯ ಸ್ಥಾನ ಗಳಿಸಿದ್ದಾರೆ. 66-74 ರ ವಿಭಾಗದಲ್ಲಿ ಹಂಪಿ ಕುಮಾರರಾಗಿ ಬೆಳಗಾವ್ ಸುನೀಲ್ ಬೋಸ್ ವಿಜೇತರಾಗಿದ್ದಾರೆ. ದಾವಣಗೆರೆಯ ಯೋಗೀಶ ದ್ವಿತೀಯ ಸ್ಥಾನ ಗಳಿಸಿದ್ದಾರೆ.
86 ಕಿಲೋ ಮೇಲ್ಪಟ್ಟ ವಿಭಾಗದಲ್ಲಿ ಮುಧೋಳದ ತಿಮ್ಮನಗೌಡ ಹಂಪಿ ಕಂಠೀರವ ಪ್ರಶಸ್ತಿ ಗಳಿಸಿದ್ದಾರೆ.ಜಿಲ್ಲಾ ಮಟ್ಟದ ವಿಜೇತರು ಪುರುಷ ವಿಭಾಗ:
ಹರಪನಹಳ್ಳಿಯ ಜಮೀರ 57 -65 ಕಿಲೋ ವಿಭಾಗದಲ್ಲಿ ಜಮೀರ ಹಂಪಿ ಕಿಶೋರ ಆಗಿದ್ದಾರೆ, ಮಂಜುನಾಥ ದ್ವಿತೀಯ ಸ್ಥಾನ ಗಳಿಸಿದ್ದಾರೆ. 66 -74 ರ ವಿಭಾಗದಲ್ಲಿ ಹರಪನಹಳ್ಳಿ ಆಂಜನೇಯ ಹಂಪಿ ಕುಮಾರ ಆಗಿದ್ದರೆ, ಕೆ.ಪರಶುರಾಮ ದ್ವಿತೀಯ ಸ್ಥಾನ ಗಳಿಸಿದ್ದಾರೆ. 75-85 ವಿಭಾಗದಲ್ಲಿ ಹರಪನಹಳ್ಳಿ ಅರವಿ ಕೆಂಚಪ್ಪ ಹಂಪಿ ಕೇಸರಿಯಾಗಿದ್ದರೆ, ಮರಿಯಮ್ಮನಹಳ್ಳಿ ಎಲ್.ಹನುಮಂತ ದ್ವಿತೀಯ ಸ್ಥಾನ ಗಳಿಸಿದ್ದಾರೆ.86 ಕಿಲೋ ಮೇಲ್ಪಟ್ಟ ವಿಭಾಗದಲ್ಲಿ ಹರಪನಹಳ್ಳಿಯ ಚಿಕ್ಕೇರಿ ತಿಪ್ಪೇಸ್ವಾಮಿ ವಿಜೇತರಾಗಿ ಹಂಪಿ ಕಂಠೀರವ ಪ್ರಶಸ್ತಿ ಪಡೆದಿದ್ದಾರೆ. ಹಸನುಲ್ಲಾ ದ್ವಿತೀಯ ಸ್ಥಾನ ಗಳಿಸಿದ್ದಾರೆ.