ಹಂಪಿ ವಿರುಪಾಕ್ಷೇಶ್ವರ ಸನ್ನಿಧಾನಕ್ಕೆ ಪಾದಯಾತ್ರೆ

KannadaprabhaNewsNetwork | Published : Oct 14, 2023 1:01 AM

ಸಾರಾಂಶ

ಬೂದಗುಂಪಾ, ಹಾಲಸಮುದ್ರಾ, ತಿಮ್ಮಾಪುರ ಗ್ರಾಮದ ಶ್ರೀಬಸವೇಶ್ವರ ಭಜನಾ ಸಂಘದ ನೇತೃದಲ್ಲಿ ತ್ರಿವಳಿ ಗ್ರಾಮದ ಗ್ರಾಮದ ಭಕ್ತರು ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿಜಯನಗರ ಜಿಲ್ಲೆಯ ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗ್ರಾಮದ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಸುಮಾರು ೩೫ಕ್ಕೂ ಹೆಚ್ಚು ಭಕ್ತರು ೩೨ನೇ ವರ್ಷದ ಪಾದಯಾತ್ರೆ ಮಾಡಿದರು.

ಕಾರಟಗಿ: ಲೋಕ ಕಲ್ಯಾಣಾರ್ಥ ತ್ರಿವಳಿ ಗ್ರಾಮದ ಜನರು ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ಸನ್ನಿಧಾನಕ್ಕೆ ಸುಮಾರು ೩೫ಕ್ಕೂ ಹೆಚ್ಚು ಜನರು ಶುಕ್ರವಾರ ೩೨ನೇ ವರ್ಷದ ಪಾದಯಾತ್ರೆ ಕೈಗೊಂಡರು.ತಾಲೂಕಿನ ಬೂದಗುಂಪಾ, ಹಾಲಸಮುದ್ರಾ, ತಿಮ್ಮಾಪುರ ಗ್ರಾಮದ ಶ್ರೀಬಸವೇಶ್ವರ ಭಜನಾ ಸಂಘದ ನೇತೃದಲ್ಲಿ ತ್ರಿವಳಿ ಗ್ರಾಮದ ಗ್ರಾಮದ ಭಕ್ತರು ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿಜಯನಗರ ಜಿಲ್ಲೆಯ ಹಂಪಿ ವಿರುಪಾಕ್ಷೇಶ್ವರ ಸ್ವಾಮಿ ದೇವಸ್ಥಾನಕ್ಕೆ ಗ್ರಾಮದ ಮಹಿಳೆಯರು, ಮಕ್ಕಳು, ಹಿರಿಯರು ಸೇರಿದಂತೆ ಸುಮಾರು ೩೫ಕ್ಕೂ ಹೆಚ್ಚು ಭಕ್ತರು ೩೨ನೇ ವರ್ಷದ ಪಾದಯಾತ್ರೆ ಮಾಡಿದರು. ಬಳಿಕ ಗ್ರಾಮಸ್ಥರು ಊರಿನ ಪ್ರಮುಖ ಬೀದಿಗಳಲ್ಲಿ ಭಜನೆ ಮಾಡುವ ಮೂಲಕ ಪಾದಯಾತ್ರಿಗಳಿಗೆ ಬೀಳ್ಕೊಟ್ಟರು.ನಂತರ ಶಿವಮೂರ್ತಿಯಪ್ಪ ಜಂತಕಲ್ ಮಾತನಾಡಿ, ಪಾದಯಾತ್ರೆ ಸಕಲ ರೈತರಿಗೆ ಮಳೆ-ಬೆಳೆ ಸಮೃದ್ಧಿಯಾಗಲಿ. ಸಕಲರಿಗೂ ಆ ದೇವರು ಒಳಿತು ಮಾಡಲಿ ಎಂದು ಪ್ರತಿವರ್ಷ ಗ್ರಾಮದ ಭಕ್ತರು ಪಾದಯಾತ್ರೆ ಕೈಗೊಂಡಿದ್ದು ಈ ವರ್ಷವೂ ಪಾದಯಾತ್ರೆ ಮಾಡುತ್ತಿದ್ದೇವೆ. ಶನಿವಾರ ಸಂಜೆ ಪಂಪಾ ವಿರುಪಾಕ್ಷೇಶ್ವರ ಸನ್ನಿಧಿಗೆ ತಲುಪುತ್ತೇವೆ ಎಂದರು.ಈ ವೇಳೆ ಶರಣಪ್ಪ ಜಂತಗಲ್, ಪರಪ್ಪ ಜಂತಕಲ್, ಪಂಪಾಪತಿ ಕಂಡ್ರಿ, ನೀಲಕಂಠಪ್ಪ ಸೌಕಾರ್ ಬಸವರಾಜಪ್ಪ ಮರಳಿ, ಯಂಕಪ್ಪ ಗೋಡೆಕರ್, ಶೇಖರಪ್ಪ, ಈಶಪ್ಪ ಜಂತಕಲ್, ಅಡಿವೆಯಸ್ವಾಮಿ ಮಹದೇವಪ್ಪ ಶೀಲವಂತರ, ಮರೇಗೌಡ ಮಾಲಿಪಾಟೀಲ್ , ಬಸವರಾಜ್, ಪಂಪನಗೌಡ ಜಂತಕಲ್, ಸಿದ್ದಲಿಂಗಪ್ಪ, ಅಮರೇಶ್ ಬನ್ನಿಗಿಡ, ಜೆ.ಮಹದೇವಮ್ಮ, ಶರಣಮ್ಮ, ಚೆನ್ನಮ್ಮ, ನಿಂಗಮ್ಮ, ಸರಸ್ವತಿ ಶಕುಂತಲಾ, ರಾಜೇಶ್ವರಿ ಸೇರಿದಂತೆ ಗ್ರಾಮಸ್ಥರು ಪಾದಯಾತ್ರೆ ಕೈಗೊಂಡರು.

Share this article