ಹಾನಗಲ್ಲ: ಇಲ್ಲಿಯ ಶಿಲಾ ಮಂದಿರದ ಲೋಕಾರ್ಪಣೆ, ಶ್ರೀ ಗ್ರಾಮದೇವಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ಆ. ೧೮, ೧೯, ೨೦ರಂದು ನಡೆಯಲಿವೆ.
ರಾತ್ರಿ ೮.೩೦ರಿಂದ ನಡೆಯುವ ಮನರಂಜನಾ ಕಾರ್ಯಕ್ರಮದಲ್ಲಿ ಟಿವಿ ಕಲಾವಿದ ಅಶೋಕ ಪೊಳಲಿ ತಂಡದಿಂದ ವಿಶಿಷ್ಟ ನೃತ್ಯ. ಅಂತಾರಾಷ್ಟ್ರೀಯ ಜಾದೂ ಪ್ರಶಸ್ತಿ ವಿಜೇತ ಜಾದೂಗಾರ ಮಂಗಳೂರು ಸತೀಶ ಹೆಮ್ಮಾಡಿ ಮತ್ತು ಸಂಗಡಿಗರಿಂದ ಮಿರಾಕಲ್ ಮ್ಯಾಜಿಕ್, ರಾಘವೇಂದ್ರ ಮೋಳೆ ಸಾರಥ್ಯದಲ್ಲಿ ಸ್ಮಾರ್ಟ್ ಡ್ಯಾನ್ಸ ಅಕಾಡೆಮಿ ಶಿರಸಿ ಇವರಿಂದ ಡ್ಯಾನ್ಸ ಕಾರ್ಯಕ್ರಮ ನಡೆಯುವವು.
ಆ. ೨೦ರಂದು ಬೆಳಗ್ಗೆ ೭ ಗಂಟೆಗೆ ದ್ವಾರತೋರಣ ಪೂಜೆ, ಮಹಾಗಣಪತಿ ಪೂಜೆ. ೧೧ ಗಂಟೆಗೆ ನೇತ್ರೋನ್ಮಿಲನ ನಂತರ ಹುಬ್ಬಳ್ಳಿ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮೀಜಿಗಳ ಸಾನಿಧ್ಯದಲ್ಲಿ ನಗರದ ಶಕ್ತಿದೇವತೆ ಶ್ರೀ ಗ್ರಾಮದೇವಿ (ದ್ಯಾಮವ್ವ) ಪ್ರಾಣ ಪ್ರತಿಷ್ಠಾಪನೆ ಹಾಗೂ ಕಲಾ ಆವಾಹನಾ, ಕದಳಿ ಛೇದನ, ಬಿಂಬ ದರ್ಶನ, ಕಲಾಹೋಮ, ಪ್ರಾಣಪ್ರತಿಷ್ಠಾ ಹೋಮ, ಕಳಸಾರೋಹಣ ಪ್ರರ್ಣಾಹುತಿ, ಕುಮಾರಿಕಾ ಪ್ರಜೆ, ಸುಹಾಸಿನಿ ಪೂಜೆ, ಅಷ್ಟಾವಧಾನ ಸೇವೆ ನಂತರ ಮಹಾಮಂಗಳಾರತಿ ನಡೆಯುವುದು. ಸಂಜೆ ೬ ಗಂಟೆಗೆ ಮಹಾಸಂಸ್ಥಾನ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯುವ ಧರ್ಮಸಭೆಯಲ್ಲಿ ಕುಂಚಿಟಿಗ ಮಹಾಸಂಸ್ಥಾನ ಹೊಸದುರ್ಗದ ಡಾ.ಶಾಂತವೀರ ಮಹಾಸ್ವಾಮಿಗಳು, ನರಶೀಪುರದ ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು, ಚಿತ್ರದುರ್ಗ ಭೋವಿಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು, ರಾಜನಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಡಾ. ಪ್ರಸನ್ನಾನಂದಪುರಿ ಮಹಾಸ್ವಾಮಿಗಳು, ಶಿವಶರಣ ಮಾದಾರ ಚನ್ನಯ್ಯ ಗುರುಪಿಠದ ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳು, ಗೋಸಾಯಿ ಸಂಸ್ಥಾನಮಠದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಮಹಾಸ್ವಾಮಿಗಳು, ಸೇವಾಲಾಲ ಬಂಜಾರ ಗುರುಪೀಠದ ತಿಪ್ಪೇಶ್ವರ ಸ್ವಾಮೀಜಿಗಳು ಸಾನಿಧ್ಯ ವಹಿಸುವರು. ಗ್ರಾಮದೇವಿ ಜಾತ್ರಾ ಟ್ರಸ್ಟನ ಅಧ್ಯಕ್ಷ ಮಂಜುನಾಥ ನಾಗಜ್ಜನವರ ಅಧ್ಯಕ್ಷತೆ ವಹಿಸುವರು. ಸಂಸದ ಬಸವರಾಜ ಬೊಮ್ಮಾಯಿ, ಶಾಸಕ ಶ್ರೀನಿವಾಸ ಮಾನೆ ಅತಿಥಿಗಳಾಗಿ ಪಾಲ್ಗೊಳ್ಳುವರು.ರಾತ್ರಿ ೮.೩೦ರಿಂದ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಟಿವಿ ಕಲಾವಿದರನ್ನೊಳಗೊಂಡ ಝೇಂಕಾರ ಮೆಲೋಡಿಸ್ ಬಟ್ಕಳ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯುವವು.