ಹಾನಗಲ್ಲ ಪುರಸಭೆ ಬಜೆಟ್‌: ₹ 3.50 ಕೋಟಿ ಆದಾಯ ನಿರೀಕ್ಷೆ

KannadaprabhaNewsNetwork |  
Published : Mar 14, 2026, 02:15 AM IST
ಹಾನಗಲ್ಲ ಪುರಸಭೆಯ 2026-27ನೇ ಸಾಲಿನ ಆಯವ್ಯಯಕ್ಕೆ ಶುಕ್ರವಾರ ಸವಣೂರ ಎ.ಸಿ. ಶುಭಂ ಶುಕ್ಲಾ ಅನುಮೋದನೆ ನೀಡಿದರು. | Kannada Prabha

ಸಾರಾಂಶ

ಹಾನಗಲ್ಲ ಪುರಸಭೆಯ 2026-27ನೇ ಸಾಲಿನ ಆಯವ್ಯಯಕ್ಕೆ ಶುಕ್ರವಾರ ಸವಣೂರ ಎ.ಸಿ. ಶುಭಂ ಶುಕ್ಲಾ ಅನುಮೋದನೆ ನೀಡಿದರು.

ಹಾನಗಲ್ಲ: ಹಾನಗಲ್ಲ ಪುರಸಭೆಗೆ 2026-27ನೇ ಸಾಲಿಗೆ 32.80 ಲಕ್ಷ ರು. ಮೊತ್ತದ ಉಳಿತಾಯದ ಆಯವ್ಯಯಕ್ಕೆ ಶುಕ್ರವಾರ ಪುರಸಭೆ ಆಡಳಿತಾಧಿಕಾರಿ ಆಗಿರುವ ಸವಣೂರ ಉಪವಿಭಾಗಾಧಿಕಾರಿ ಶುಭಂ ಶುಕ್ಲಾ ಅವರು ಅನುಮೋದನೆ ನೀಡಿದರು.ಪ್ರಸಕ್ತ ವರ್ಷ ಸ್ವಂತ ಮೂಲದಿಂದ 3.50 ಕೋಟಿ ರು. ಆದಾಯ ಮಾಡಿಕೊಳ್ಳುವ ಅಂದಾಜು ಮಾಡಲಾಗಿದೆ. ಆಸ್ತಿ ತೆರಿಗೆ, ನೀರು ಕರ, ವ್ಯಾಪಾರ ಪರವಾನಗಿ, ಜಾಹೀರಾತು, ಪುರಸಭೆ ಮಳಿಗೆ ಬಾಡಿಗೆ ಮತ್ತಿತರ ಆದಾಯ ಜಮೆಗೊಳ್ಳುವ ಉದ್ದೇಶ ಹೊಂದಲಾಗಿದೆ.ಸರಕಾರದ ವಿವಿಧ ಅನುದಾನಗಳಿಂದ 25 ಕೋಟಿ ರು. ನಿರೀಕ್ಷಿಸಲಾಗಿದೆ. ಅಮೃತ 2, ಎಸ್‌ಎಫ್‌ಸಿ, ಮುಕ್ತ, ನಿಧಿ, 16ನೇ ಹಣಕಾಸು, ಕುಡಿಯುವ ನೀರಿಗಾಗಿ ಅನುದಾನ, ಸ್ವಚ್ಛ ಭಾರತ ವಿಶೇಷ ಅನುದಾನದ ನಿರೀಕ್ಷೆ ಹೊಂದಲಾಗಿದೆ. ಇತರೆ ಮೂಲಗಳಿಂದ 20 ಲಕ್ಷ ಹಣ ಕೂಡಿಸುವ ಲೆಕ್ಕಾಚಾರ ಇದೆ. ಜಮೆಯ ಲೆಕ್ಕವನ್ನು ನೋಡಿಕೊಂಡು ಖರ್ಚಿನ ಅಂದಾಜು ಸಿದ್ಧಪಡಿಸಲಾಗಿದೆ. ಮುಖ್ಯವಾಗಿ ಕುಡಿಯುವ ನೀರಿನ ವ್ಯವಸ್ಥೆಗಾಗಿ 8 ಕೋಟಿ ರು. ಮೀಸಲಿಡಲಾಗುತ್ತಿದೆ. ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವಸತಿ ಗೃಹಗಳ ನಿರ್ಮಾಣದ ಗುರಿ ಹೊಂದಲಾಗಿದೆ. ಅಲ್ಲದೆ, ಪಾಳು ಬಿದ್ದ ಈಜುಕೊಳ ದುರಸ್ತಿಗೆ ಹಣ ವಿನಿಯೋಗಿಸುವುದು, ಪುರಸಭೆಯ ವಾಣಿಜ್ಯ ಮಳಿಗೆಗಳ ರಿಪೇರಿ, ಹೊಸ ಮಳಿಗೆಗಳ ನಿರ್ಮಾಣ, ಹೊಸ ಬಡಾವಣೆಗಳಲ್ಲಿ ಚರಂಡಿ, ರಸ್ತೆಗಳ ನಿರ್ಮಾಣ, ಘನತ್ಯಾಜ್ಯ ವಿಲೇವಾರಿ ಮತ್ತು ಉದ್ಯಾನಗಳ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಜಗದೀಶ ವೈ.ಕೆ, ಕಚೇರಿ ವ್ಯವಸ್ಥಾಪಕಿ ನಿರ್ಮಲಾ ನಾಗನೂರ, ಲೆಕ್ಕಿಗ ಅಶ್ವಿನಿ ಸುಣಗಾರ, ಸಾರ್ವಜನಿಕ ಸಂಪರ್ಕ ಅಧಿಕಾರಿ ಶಿವಾನಂದ ಕ್ಯಾಲಕೊಂಡ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ