ಕನ್ನಡಪ್ರಭ ವಾರ್ತೆ ಮಣಿಪಾಲ
ನಂತರ ಮಾತನಾಡಿದ ಲಕ್ಷ್ಮೀ ರಾಜೀವ ಶೆಟ್ಟಿ, ಮಹಿಳೆಯರು ತಮ್ಮ ಕನಸನ್ನು ತಾವೇ ನನಸು ಮಾಡಬೇಕು. ಇದಕ್ಕಾಗಿ ಲಭ್ಯವಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.
ಚಕ್ರಿ ಹೆಗ್ಡೆ ಮಾತನಾಡಿ, ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಸಿಎಸ್‌ಆರ್ ಚಟುವಟಿಕೆಯ ಭಾಗವಾಗಿ ಜಿಲ್ಲೆಯಲ್ಲಿ ವಿವಿಧ ತರಬೇತಿಗಳನ್ನು ಪ್ರಾಯೋಜಿಸುವ ಮೂಲಕ ಮಹಿಳಾ ಸಬಲೀಕರಣ ಮತ್ತು ಸರ್ಕಾರಿ ಶಾಲೆಗಳಿಗೆ ಬೇಕಾದ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ ಹಾಗೂ ಮುಂದಿನ ದಿನಗಳಲ್ಲಿಯೂ ಈ ಚಟುವಟಿಕೆ ಮುಂದುವರಿಯಲಿದೆ ಎಂದರು.ಸಮಾರಂಭದ ಅಧ್ಯಕ್ಷತೆ ವಹಿಸಿದ ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ್ ಪೈ ಮಾತನಾಡಿ, ಬೆಳೆಯುತ್ತಿರುವ ನಗರವಾದ ಉಡುಪಿ ಹಾಗೂ ಮಣಿಪಾಲದಂತಹ ಪ್ರದೇಶಗಳಲ್ಲಿ ಯಾವುದೇ ವ್ಯಾಪಾರ ವ್ಯವಹಾರ ಕೈಗೊಂಡರೂ ಉತ್ತಮವಾದ ಮಾರುಕಟ್ಟೆ ಲಭ್ಯವಿದೆ. ಬಂದಂತಹ ಅವಕಾಶಗಳನ್ನು ಸದುಪಯೋಗಿಸಿ ಮಹಿಳೆಯರು ಸ್ವಂತ ಉದ್ಯಮವನ್ನು ಸ್ಥಾಪಿಸುವಂತೆ ಕರೆ ನೀಡಿದರು.ಈ ತರಬೇತಿಯಲ್ಲಿ ಸುಮಾರು ೬೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.ಸಂಪನ್ಮೂಲ ವ್ಯಕ್ತಿಗಳಾದ ಮುಕ್ತಾ ಶ್ರೀನಿವಾಸ ಭಟ್, ರಶ್ಮಿ ಭಟ್, ಶ್ರೀಷ್ಮಾ, ರಮ್ಯ ಎ.ಸಿ. ಹಾಗೂ ಸನ್ನಿತಾ ಉಪಸ್ಥಿತರಿದ್ದರು. ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀ ಬಾಯಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸಿಬ್ಬಂದಿ ಗೀತಾ ಆರ್. ರಾವ್ ಪ್ರಾರ್ಥಿಸಿದರು. ಕಾರ್ಯಕ್ರಮ ಅಧಿಕಾರಿ ಪ್ರತಿಮಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.