ಕಾಟಿಪಳ್ಳ ಬ್ಲಾಕ್ 8ಎ ಬ್ಲಾಕ್ ನ ಪರಿಶಿಷ್ಟ ಪಂಗಡ ಕುಟುಂಬದ ವಿಕಲ ಚೇತನೆ ಗಿರಿಜಾ ಎಂಬವರಿಗೆ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಗಣೇಶ ಪುರ ಕಾಟಿಪಳ್ಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ಅಂದಾಜು ವೆಚ್ಚ ದಲ್ಲಿ ನಿರ್ಮಾಣವಾದ ಮನೆಯನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಹಸ್ತಾಂತರಿಸಿದರು.
ಮಂಗಳೂರು : ಕಾಟಿಪಳ್ಳ ಬ್ಲಾಕ್ 8ಎ ಬ್ಲಾಕ್ ನ ಪರಿಶಿಷ್ಟ ಪಂಗಡ ಕುಟುಂಬದ ವಿಕಲ ಚೇತನೆ ಗಿರಿಜಾ ಎಂಬವರಿಗೆ ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಗಣೇಶ ಪುರ ಕಾಟಿಪಳ್ಳ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ಸುಮಾರು 10 ಲಕ್ಷ ಅಂದಾಜು ವೆಚ್ಚ ದಲ್ಲಿ ನಿರ್ಮಾಣವಾದ ಮನೆಯನ್ನು ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ವೈ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಮತ್ತು ಹಿಂದು ಧಾರ್ಮಿಕ ಸೇವಾ ಸಮಿತಿ ಮಾಡುತ್ತಿರುವಂತಹ ಇಂತಹ ಉತ್ತಮ ಕಾರ್ಯ ವು ಜನ ಮನ್ನಣೆಗೆ ಪಾತ್ರವಾಗಿದೆ ಹಾಗೂ ಈ ಮನೆ ನಿರ್ಮಾಣ ಸಹಕರಿಸಿದ ಸ್ಥಳೀಯ ಸಂಘ ಸಂಸ್ಥೆಗಳಿಗೆ ಮತ್ತು ದಾನಿಗಳಿಗೆ ಅಭಿನಂದನೆಗಳು ಎಂದರು.ಕಾರ್ಯಕ್ರಮದಲ್ಲಿ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ , ಮಂಗಳೂರು ಇದರ ಅಧ್ಯಕ್ಷ ಅರ್ಜುನ ಭಂಡಾರ್ಕರ್, ನಾರಾಯಣ ಶೆಟ್ಟಿ, ಸುಮತಿ ನಾರಾಯಣ ಶೆಟ್ಟಿ ಉದ್ಯಮಿ ಶ್ರೀ ಅನಿಲ್ ಶೆಟ್ಟಿ ತೇವು, ಮನಪಾ ಮಾಜಿ ಕಾರ್ಪೋರೇಟ ರ್ ಗಳಾದ ಲೋಕೇಶ್ ಬೊಳ್ಳಾಜೆ, ಲಕ್ಷ್ಮೀ ಶೇಖರ ದೇವಾಡಿಗ, ಭಾರತೀಯ ಜನತಾ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭರತ್ ರಾಜ್ ಕೃಷಾಪುರ, ಸಾಮಾಜಿಕ ಕಾರ್ಯ ಕರ್ತ ರಾದ ಗುಣಕರ್ ಇಡ್ಯಾ, ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಜಯಕುಮಾರ್, ಹಿಂದು ಧಾರ್ಮಿಕ ಸೇವಾ ಸಮಿತಿ ಯ ಅಧ್ಯಕ್ಷ ಹರೀಶ್ ಮೂಡಾಯಿ ಕೋಡಿ ಅತಿಥಿಗಳಾಗಿದ್ದರು.
ಕೇಶವ ಶಿಶುಮಂದಿರದ ಅಧ್ಯಕರಾದ ಜಯಶೀಲ ಸೂರಿಂಜೆ, ವಸಂತ್ ರಾವ್, ಲಕ್ಮ್ಮೀಶ ದೇವಾಡಿಗ, ಮನೋಹರ ಶೆಟ್ಟಿ ಸೂರಿಂಜೆ, ಬಾಲಕೃಷ್ಣ ಸುರ್ವಣ, ಜಯಪ್ರಕಾಶ್ ಪಡುಪದವು,ಚಂದ್ರಶೇಖರ ಬೊಳ್ಳಾಜೆ, ಕೀರ್ತನ್ ಬಾಳ, ಚೇತನ್ ಗುರುನಗರ,ದುರ್ಗಾ ಪ್ರಸಾದ್, ವರಮಹಾಲಕ್ಷ್ಮೀ ಪೂಜಾನ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು, ಹಿಂದು ಧಾರ್ಮಿಕ ಸೇವಾ ಸಮಿತಿ ಯ ಸದಸ್ಯರು ಉಪಸ್ಥಿತರಿದ್ದರು . ಜಯಪ್ರಕಾಶ್ ಸೂರಿಂಜೆ ಸ್ವಾಗತಿಸಿದರು, ಹರೀಶ್ ಮೂಡಾಯಿ ಕೋಡಿ ವಂದಿಸಿದರು ಲೋಕನಾಥ ಭಂಡಾರಿ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.