ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಕೀ ಹಸ್ತಾಂತರಿಸಿ ಮಾತನಾಡಿದ ರಜಿನಿ ಶೆಟ್ಟಿ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯಿಂದ ಇನ್ನಷ್ಟು ಸಮಾಜ ಸೇವೆಯನ್ನು ಮಾಡುವಂತಾಗಲಿ, ಇವರ ಉತ್ತಮ ಸೇವಾ ಯೋಜನೆಗಳಿಗೆ ಭಗವಂತನ ಅನುಗ್ರಹವಿರಲೆಂದು ಹಾರೈಸಿದರು.
ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಗೌರವಾಧ್ಯಕ್ಷ ಅಶ್ವಥ್ ಪಣಪಿಲ ಮಾತನಾಡಿ, ಈ ತಂಡದ ಸದಸ್ಯರು ನಿರಂತರವಾಗಿ ದೂರದಿಂದ ಕಲ್ಲು ಮಣ್ಣುಗಳನ್ನು ಹೊತ್ತುಕೊಂಡು ಕಷ್ಟಪಟ್ಟು ಕೆಲಸ ಮಾಡಿ ಈ ಬಡ ಕುಟುಂಬಕ್ಕೆ ಮನೆಯನ್ನು ಕಟ್ಟಿಕೊಟ್ಟಿದ್ದಾರೆ. ಇವರ ಈ ಕೆಲಸ ಕಾರ್ಯಗಳು ನಿರಂತರವಾಗಿ ಸಾಗಲಿ ಎಂದು ಸಂಘಟನೆಯ ಯುವಕರೆಲ್ಲಾರನ್ನು ಅಭಿನಂದಿಸಿ, ಈ ಮನೆಯಿಂದ ಈ ಕುಟುಂಬವೂ ಸುಖಕರವಾಗಿರಲಿ ಎಂದರು.ತ್ರಿಶೂಲ್ ಫ್ರೆಂಡ್ ಸಂಘಟನೆಯ ಅಧ್ಯಕ್ಷ ರಕ್ಷಿತ್ ಮಾತನಾಡಿ ಇದುವರೆಗೂ ವೈದ್ಯಕೀಯ ಸೇವೆ ಹಾಗೂ ಇನ್ನಿತರ ಸಮಾಜ ಸೇವೆಗಳನ್ನು ಮಾಡುತ್ತಾ ಬಂದಿದ್ದು ಇದೀಗ ಮೊದಲ ಬಾರಿಗೆ ಒಂದು ಬಡ ಕುಟುಂಬಕ್ಕೆ ಸೂರನ್ನು ಕಟ್ಟಿಕೊಡುವ ಕೆಲಸವನ್ನು ಸಂಘಟನೆಯ ಎಲ್ಲ ಯುವಕರ ಸಹಕಾರದೊಂದಿಗೆ ಮಾಡಲಾಗಿದೆ ಎಂದರು.
ಸಂಘಟನೆಯ ಸಲಹೆಗಾರರಾದ ಸೋಮಶೇಖರ್, ಹಾಗೂ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.